ಕ್ರಾಂತಿಗೆ ಅವಕಾಶ ನೀಡದೆ ಸರ್ಕಾರ ಶೀಘ್ರ ನಾಗಮೋಹನದಾಸ್ ವರದಿ ಜಾರಿ ಮಾಡಿ : ಮಾದರ ಚನ್ನಯ್ಯ ಶ್ರೀ ಎಚ್ಚರಿಕೆ

 

 

 

 

ಚಿತ್ರದುರ್ಗ: ಕೋಟೆ ನಾಡು ಚಿತ್ರದುರ್ಗ ಜಿಲ್ಲೆ ಕೇಂದ್ರದಲ್ಲಿ  ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮೀಸಲಾತಿ ಹೆಚ್ಚಳಕ್ಕೆ ಆಗ್ರಹಿಸಿ ಬೃಹತ್  ಪ್ರತಿಭಟನೆ ನಡೆಯುತ್ತಿದೆ.
ಪ್ರತಿಭಟನೆಯಲ್ಲಿ ಭಾಗವಹಿಸಿ ಮಾದಾರ  ಚನ್ನಯ್ಯ ಶ್ರೀಗಳು ಮಾತನಾಡಿ ದಕ್ಷಿಣ ಭಾರತದಲ್ಲಿ  ದೀರ್ಘವಾದ ಹೋರಟಕ್ಕೆ ವಾಲ್ಮೀಕಿ ಪ್ರಸನ್ನಾನಂದ  ಸ್ವಾಮೀಜಿ  ರಾಜಧಾನಿಯಲ್ಲಿ  ನಿರಂತರ ಹೋರಟ ಮಾಡುತ್ತಿದ್ದು ಇಂದಿಗೆ 152  ದಿನಗಳು ಕಳೆದಿವೆ. ಆದರೆ ಸರ್ಕಾರ ಮಾತ್ರ  ಅಸಡ್ಡೆ ಮನೋಭಾವ ತೋರುತ್ತಿದೆ.  7.5%  ಮೀಸಲಾತಿಗೆ ಸರ್ಕಾರ ಸಮಿತಿ ರಚನೆ ಮಾಡಿ ವರದಿ ಬಂದರು ಸಹ  ಸಮಯ ತಳ್ಳುವ  ನೀತಿ  ಅನುಸರಿಸುತ್ತಿದೆ. ನಾಗಮೋಹನ್ ದಾಸ್ ವರದಿ ಬರಲಿ ಎಂದು ತದನಂತರ ಮತ್ತೊಂದು ಸಮತಿ ರಚನೆ ರಚನೆ ಮಾಡುತ್ತೇವೆ ಎನ್ನುವುದು ಸಮಯ ವ್ಯರ್ಥದ ಕೆಲಸವಾಗಿದೆ.ಇಂತಹ ನಿರ್ಧಾರವನ್ನು ಬಿಟ್ಟು  ಈ ಕ್ಷಣಕ್ಕೆ ಪರಿಶಿಷ್ಟ ಜಾತಿಯ  101 ಜಾತಿ  ಮತ್ತು ಪರಿಶಿಷ್ಟ ಪಂಗಡದ  52 ಜಾತಿಯವರಿಗೆ ಮೀಸಲಾತಿ ನೀಡಿದರೆ ಎಲ್ಲಾ  ಹಿಂದುಳಿದ ಪರಿಶಿಷ್ಟ ಜಾತಿ ಮತ್ತು ಜನಾಂಗದವರು  ನಿಮ್ಮ ಜೊತೆ ನಾವು ಇರುತ್ತೇವೆ ಎಂದು ಸರ್ಕಾರಕ್ಕೆ ಮನವಿ ಮಾಡಿದರು ಸಹ  ಮೀಸಲಾತಿ ಜಾರಿ  ಮಾಡುತ್ತಿಲ್ಲ. ಎಲ್ಲಾ ಹಿಂದುಳಿದ  ಸಮಾಜದ ಜಾಗೃತಿಗಾಗಿ  ವಾಲ್ಮೀಕಿ ಸಮಾಜ ಸ್ವಾಮೀಜಿ ಕುಳಿತಿದ್ದಾರೆ. ಸರ್ಕಾರ ಸ್ವಾಮೀಜಿ ಅವರನ್ನು  ಮಾನಸಿಕವಾಗಿ ಸ್ಥೈರ್ಯ ಕುಗ್ಗಿಸುವ ಕೆಲಸ  ಮಾಡಿದರು ಸಹ ಎಂತಹ ಪರಿಸ್ಥಿತಿಯಲ್ಲೂ ಸ್ವಾಮೀಜಿ ಜೊತೆ ಎಲ್ಲಾ ಸಮಾಜದವರು ಇದ್ದು ಗುರಿ ಮುಟ್ಟುವ ತನಕ ಹೋರಟ ನಿಲ್ಲುವುದಿಲ್ಲ. ಎಂಬ ಸಂದೇಶ ಗುರುಗಳು ತೆಗೆದುಕೊಂಡಿದ್ದಾರೆ. ರಾಜ್ಯ ಸರ್ಕಾರ ಮುಂದಿನ ದಿ‌ನಗಳಲ್ಲಿ  ಬಹು ದೊಡ್ಡ ಕ್ರಾಂತಿಯಾಗದ  ರೀತಿಯಲ್ಲಿ ನೋಡಿಕೊಂಡರೆ ಉತ್ತಮ  ಎಂದು ಸರ್ಕಾರಕ್ಕೆ ಮಾದರ ಶ್ರೀಗಳು ಎಚ್ಚರಿಸಿದ್ದಾರೆ‌. ಎಲ್ಲಾ ಹಿಂದುಳಿದ ಸಮಾಜದ ಎಲ್ಲಾ  ಪಕ್ಷದವರು ಶಾಸಕರು ಮತ್ತು ಸಚಿವರು ವಾಲ್ಮೀಕಿ  ಶ್ರೀಗಳಿಗೆ ಬೆಂಬಲ‌ ನೀಡಬೇಕು. ರೈತ ಚಳುವಳಿಗೆ ಸೇರಿ ಅನೇಕ ಚಳುವಳಿಯಲ್ಲಿ  ಬಹುದೊಡ್ಡ ಹೋರಟ  ಕೇಂದ್ರ ಚಿತ್ರದುರ್ಗ ಆಗಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡದ ಜನರು ಎನೇ ಕಷ್ಟಗಳು ಬಂದರು ಸಹ  ಗಟ್ಟಿಯಾಗಿ ಒಗ್ಗಟ್ಟಿನಿಂದ ಮುಂದೆ ಸಾಗೋಣ ರಾಜ್ಯ ಸರ್ಕಾರ ಕಣ್ಣು ತೆರೆಯುವವರೆಗೂ ನಮ್ಮ ಹೋರಟ ನಿಲ್ಲುವುದಿಲ್ಲ ಎಂದರು. ವಾಲ್ಮೀಕಿ ಶ್ರೀಗಳನ್ನು  ಮಠಕ್ಕೆ ಗೌರವದಿಂದ ಕಳಿಸುವ  ಚಿಂತನೆ  ಬುದ್ದಿಜೀವಿ  ಮುಖ್ಯಮಂತ್ರಿಗಳಾದ  ಬಸವರಾಜ್ ಬೊಮ್ಮಾಯಿ ಶೀಘ್ರವಾಗಿ ಸಚಿವ ಸಂಪುಟ ಸಭೆ ಕರೆದು ಸಿಹಿ‌ ಸುದ್ದಿ ನೀಡಿದರೆ ಲಕ್ಷಾಂತರ ಜನರ ಸಮ್ಮುಖದಲ್ಲಿ  ಸನ್ಮಾನಿಸಲಾಗುತ್ತದೆ. ಮುಂದಿನ ದಿನದಲ್ಲಿ ಎಲ್ಲಾ  ಹೋರಟಕ್ಕೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ಉಳಿಗಾಗಿ ಒಗ್ಗಟ್ಟು ಪ್ರದರ್ಶನ ಮಾಡಬೇಕಿದೆ  ಎಂದು ಸಮಾಜಕ್ಕೆ ಸಂದೇಶ ಸಾರಿದರು. ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ, ಮಾಜಿ ಸಚಿವ ಹೆಚ್.ಆಂಜನೇಯ, ಬಿಎಸ್ಪಿ ರಾಜ್ಯ ಉಸ್ತುವಾರಿ ಮಾರಸಂದ್ರ ಮುನಿಯಪ್ಪ,  ವಾಲ್ಮೀಕಿ ಮುಖಂಡರಾದ ಕಾಂತರಾಜ್, ಚಳ್ಳಕೆರೆ ಕು‌ಮಾರಸ್ವಾಮಿ, ಕಾರ್ಮಿಕ ಸಂಘದ ಅಧ್ಯಕ್ಷ ಜಿ.ಎಸ್.ಮಂಜುನಾಥ್ ಇದ್ದರು.
[t4b-ticker]

You May Also Like

More From Author