ನವೋದಯ ಶಾಲೆಯ 8 ಜನ ವಿದ್ಯಾರ್ಥಿಗಳು ಅಸ್ವಸ್ಥ ಆಸ್ಪತ್ರೆಗೆ ದಾಖಲು

 

ಹಿರಿಯೂರು : ತಾಲೂಕಿನ ಉಡುವಳ್ಳಿ ಜವಾಹರ್ ನವೋದಯ ಶಾಲೆಯ 8 ಜನ ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದು ಹಿರಿಯೂರಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಎಂಟನೇ ತರಗತಿಯ ಪ್ರಜ್ವಲ್ ಪತ್ರಿಕೆಯೊಂದಿಗೆ ಮಾತನಾಡಿ ಬೆಳಿಗ್ಗೆ ಇಡ್ಲಿ ಚಟ್ನಿ ಸಾಂಬಾರ್ ಕೊಟ್ಟಿದ್ದರು ತಿಂದ ನಂತರ ವಾಂತಿ ತಲೆ ಸುತ್ತು ಬಂತು ಎಂದು ಪತ್ರಿಕೆಗೆ ತಿಳಿಸಿರುತ್ತಾನೆ 8ನೇ ತರಗತಿಯ ತಿಪ್ಪೇಸ್ವಾಮಿ ಚಿರಂತ್ ಮನೋಜ್ ನಾಗೇಶ್ ಭರತ್ ಮತ್ತು ಒಂಬತ್ತನೇ ತರಗತಿಯ ಸುದರ್ಶನ್ ನಾಯಕ ರೋಹಿತ್ ಮತ್ತು ಲಿಖಿತ್ ರಾಜ್ ಎಂಬುವರು ಅಸ್ವಸ್ಥರಾದ ವಿದ್ಯಾರ್ಥಿಗಳಾಗಿದ್ದು ಮಕ್ಕಳ ತಜ್ಞರಾದ ಡಾ. ಶ್ರೀರಂಗೇಗೌಡ ತಪಾಸಣೆ ನಡೆಸಿರುತ್ತಾರೆ ಶಾಲಾ ಶಿಕ್ಷಕರಾದ ಶ್ರೀನಿವಾಸ್ ರಾವ್ ಆಂತೋನಿ ಮತ್ತಿತರರು ಉಪಸ್ಥಿತರಿದ್ದು ನಮಗೆ ಏನೆಂಬುದು ತಿಳಿದಿಲ್ಲ ವೈದ್ಯಕೀಯ ವರದಿ ಯ ನಂತರ ವಿಚಾರ ತಿಳಿಯಬಹುದು ಎಂದರು ಸ್ಥಳೀಯರಾದ ನಾಗೇಶ್ ಎಂಬುವರು ಮಾತನಾಡಿ ಕೇವಲ ಎಂಟು ಜನ ವಿದ್ಯಾರ್ಥಿಗಳಿಗೆ ಮಾತ್ರ ಈ ರೀತಿ ಆಗಿದ್ದು ಅನುಮಾನಸ್ಪದವಾಗಿದೆ ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.

[t4b-ticker]

You May Also Like

More From Author

+ There are no comments

Add yours