ನನ್ನ ಕ್ಷೇತ್ರದಲ್ಲಿ 7.30 ಕೋಟಿ ವೆಚ್ಚದ ಸಿ.ಸಿ.ರಸ್ತೆ ಕಾಮಗಾರಿಗೆ ಚಾಲನೆ:ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ

 

ಚಿತ್ರದುರ್ಗ: ನನ್ನ ಕ್ಷೇತ್ರದ ನಗರ ಮತ್ತು ಗ್ರಾಮೀಣ ಭಾಗದ ಸಮಗ್ರ ಅಭಿವೃದ್ಧಿಗೆ ಒತ್ತು  ನೀಡಿದ್ದು ಇಂದು 7.30 ಕೋಟಿ ವೆಚ್ಚದ ಸಿ.ಸಿ.ರಸ್ತೆ  ಕಾಮಗಾರಿಗೆ ಚಾಲನೆ ನೀಡಿದ್ದು ಜನರ ನಿರೀಕ್ಷೆಗಿಂತ ಹೆಚ್ಚು ಕೆಲಸ ಮಾಡಿದ್ದೇನೆ ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಹೇಳಿದರು. chitradurga
ಚಿತ್ರದುರ್ಗ ವಿಧಾನ ಸಭಾ ಕ್ಷೇತ್ರದ ನಗರ ಮತ್ತು ತಾಲೂಕಿನ ವಿವಿಧ ಹಳ್ಳಿಗಳಲ್ಲಿ ಸಿ.ಸಿ.ರಸ್ತೆ ಮತ್ತು ಡಾಂಬರೀಕರಣ ರಸ್ತೆ  ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು‌. mla thippareddy
ನಗರದ ಪ್ರದೇಶದಲ್ಲಿ  ಮುಖ್ಯ ರಸ್ತೆ ಮಾತ್ರವಲ್ಲದೇ  ಎಲ್ಲಾ ಒಳ ರಸ್ತೆಗಳನ್ನು ಮಾಡಲಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಎಲ್ಲೂ ಸಹ ಜಾಗ ಇಲ್ಲದಂತೆ ಸಿ.ಸಿ.ರಸ್ತೆ ನಿರ್ಮಾಣ ಮಾಡಲಾಗಿದೆ.ಇನ್ನು ಕೆಲವೇ ತಿಂಗಳಲ್ಲಿ ಎಲ್ಲಾ ರಸ್ತೆ ಕಾಮಗರಿಗಳು Road pooja ಪೂರ್ಣವಾಗಲಿದೆ.  ಜನರು ಎಲ್ಲೂ ಕೂಡ ರಸ್ತೆ ಬೇಕು ಎಂದು ಕೇಳುತ್ತಿಲ್ಲ. ಆ ರೀತಿ ನಾನೇ ಖುದ್ದು ಕರೆದು ರಸ್ತೆಗೆ ಹಣ ಹಾಕಿದ್ದೇನೆ ಎಂದರು. ಇಂದು ನಗರದ ಜಯಲಕ್ಷ್ಮಿ chitradurga ಬಡಾವಣೆಯಲ್ಲಿ90 ಲಕ್ಷ ಸಿ.ಸಿರಸ್ತೆ , ಮಾನಂಗಿ ಗ್ರಾಮದಿಂದ ಈಚಕನಾಗೇನಹಳ್ಳಿ ಗ್ರಾಮದವರೆಗೆ 2 ಕೋಟಿ ವೆಚ್ಚದ ಡಾಂಬರ್ ರಸ್ತೆ, ಕುರುಬರಹಳ್ಳಿ ಗ್ರಾಮದಲ್ಲಿ 60 ಲಕ್ಷ ಸಿ.ಸಿ.ರಸ್ತೆ, ಹಳಿಯೂರು 40 ಲಕ್ಷ, ಹಿರೇಗುಂಟನೂರು ಗ್ರಾಮದಲ್ಲಿ 60ಲಕ್ಷ, ಭೀಮಸಮುದ್ರ 50 ಲಕ್ಷ, ಹಿರೇಗುಂಟನೂರು ಗೊಲ್ಲರಹಟ್ಟಿ 70 ಲಕ್ಷ,( Thippareddy) ವಡ್ಡರಸಿದ್ದವ್ವನಹಳ್ಳಿ-35 ಲಕ್ಷ, ಹುಣಸೇಕಟ್ಟೆ ಗೊಲ್ಲರಹಟ್ಟಿ-35 ಲಕ್ಷ, ಚಿಕ್ಕಾಲಗಟ್ಟ -40 ಲಕ್ಷ, ದೊಡ್ಡಾಲಘಟ್ಟ-50 ಲಕ್ಷ,ಓಬವ್ವನಾಗತೀಹಳ್ಳಿ-35 ಲಕ್ಷ ವೆಚ್ಚದ ಸಿ.ಸಿ ರಸ್ತೆ ಕಾಮಗಾರಿಗಳಿಗೆ ಚಾಲನೆ ನೀಡಿದ್ದು ಒಟ್ಟು 7.30 ಕೋಟಿ ಹಣ ನೀಡಲಾಗಿದ್ದು  ಎಲ್ಲಾವೂ ಸಹ ಒಂದು  ತಿಂಗಳಲ್ಲಿ ಪೂರ್ಣಗೊಳಿಸಲು ತಿಳಿಸಿದ್ದೇನೆ.
ಈ ಸಂದರ್ಭದಲ್ಲಿ ತಾಲೂಕು ಪಂಚಾಯತ ಇಓ ಹನುಮಂತಪ್ಪ, ಹಿರೇಗುಂಟನೂರು ಗ್ರಾಮ ಪಂಚಾಯತಿ ಅಧ್ಯಕ್ಷೆ ಜ್ಯೋತಿ, ಭೀಮಸಮುದ್ರ ಗ್ರಾ.ಪಂ.ಅಧ್ಯಕ್ಷೆ  ಕಾವ್ಯ,ಮುಖಂಡರಾದ ಮಂಜಣ್ಣ, ರಮೇಶ್, ಮಹಂತೇಶ್, ಮೂರ್ತಣ್ಣ, ತಿಪ್ಪೇಶ್ ಇದ್ದರು.
[t4b-ticker]

You May Also Like

More From Author

+ There are no comments

Add yours