4.38 ಕೋಟಿ ವೆಚ್ಚದ ಹೈಟೆಕ್ ಪ್ರವಾಸಿ ಮಂದಿರ ಉದ್ಘಾಟಿಸಿದ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ

 

ಚಿತ್ರದುರ್ಗ: ಹದಿನೈದು ಕೋಟಿಗಿಂತ ಹೆಚ್ಚು ವೆಚ್ಚದಲ್ಲಿ ನೂತನ  ಪ್ರವಾಸಿ ಮಂದಿರಗಳ ನಿರ್ಮಾಣ  ಮಾಡಲಾಗಿದೆ ಎಂದು ಶಾಸಕ ಜಿ‌.ಹೆಚ್‌.ತಿಪ್ಪಾರೆಡ್ಡಿ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಲೋಕೋಪಯೋಗಿ ಇಲಾಖೆ ವತಿಯಿಂದ ನೂತನವಾಗಿ ನಿರ್ಮಾಣ ಮಾಡಲಾಗಿರುವ  ಹೈಟೆಕ್ ವಿವಿಐಪಿ ಪ್ರವಾಸಿ ಮಂದಿರನ್ನು ಉದ್ಘಾಟಿಸಿ ಮಾತನಾಡಿದರು.
ನಗರದ ಪ್ರವಾಸಿ ಮಂದಿರದ ಒಳಭಾಗದಲ್ಲಿ 2 ಹೈಟೆಕ್ ವಿವಿಐಪಿ ಕೊಠಡಿಗೆ 4.38 ಕೋಟಿ, ಹಳೆಯ 4 ಕೊಠಡಿಗಳನ್ನು  1 ಕೋಟಿ ವೆಚ್ಚದಲ್ಲಿ ನವೀಕರಣ, 2.80 ಕೋಟಿ ವೆಚ್ಚದಲ್ಲಿ ನಾಲ್ಕು ಕೊಠಡಿಗಳು ಮತ್ತು ಎರಡು ಮೀಟಿಂಗ್ ಹಾಲ್ ನಿರ್ಮಾಣ ಮಾಡಲಾಗಿದೆ.
ಎನ್.ಹೆಚ್.4 ರಸ್ತೆಯಲ್ಲಿ  8 ಕೋಟಿ ವೆಚ್ಚದಲ್ಲಿ 4 ವಿವಿಐಪಿ ಕೊಠಡಿ, 4 ವಿಐಪಿ ಕೊಠಡಿ, 3 ಸಹಾಯಕರ ಕೊಠಡಿ ಹಾಗೂ ಹಳೆಯ 3 ಕೊಠಡಿಗಳನ್ನು  ನವೀಕರಣ ಮಾಡಲಾಗುತ್ತಿದ್ದು ಪ್ರವಾಸಿ ಮಂದಿರದ ಕೊರತೆ ಇಲ್ಲದಂತೆ ಆಗಿದೆ.
ರಾಜ್ಯದಲ್ಲಿ ಎಲ್ಲಾ ಜಿಲ್ಲೆಗಳಿಗೆ ಮಧ್ಯ ಭಾಗವಾಗಿರುವ  ಚಿತ್ರದುರ್ಗ ನಗರಕ್ಕೆ ರಾಜ್ಯ ವಿವಿಧ ಭಾಗಗಳಿಂದ  ಜನಪ್ರತಿನಿಧಿಗಳು ಜನರಿಗೆ ಸರ್ಕಾರಿ ಪ್ರವಾಸಿ ಅತ್ಯಗತ್ಯವಾಗಿದೆ. ಇದನ್ನು ಮನಗಂಡು  ಜಿಲ್ಲಾ ಕೇಂದ್ರದಲ್ಲಿ ಹೈಟೆಕ್ ಮಾದರಿಯ ಪ್ರವಾಸಿ ಮಂದಿರ ಉದ್ಘಾಟನೆ ಮಾಡಿದ್ದು ಸಾಕಷ್ಟು ಅನುಕೂಲವಾಗಲಿದೆ.
ನೂತನ ಪ್ರವಾಸಿ ಮಂದಿರವು ಅಗತ್ಯ ಸೌಲಭ್ಯಗಳನ್ನೊಳಗೊಂಡಿದೆ.  ಪ್ರವಾಸಿ ಮಂದಿರದ ಜಾಗ ಕಿರಿದಾಗಿದ್ದು ಕಡಿಮೆ ಕೊಠಡಿಗಳಿದ್ದವು. ಇದನ್ನ ಮನಗಂಡು ಹೆಚ್ಚುವರಿ ಪ್ರವಾಸಿ ಮಂದಿರಳನ್ನು  ಅತ್ಯಂತ ಅಚ್ಚುಕಟ್ಟಾಗಿ, ಗುಣಮಟ್ಟದಿಂದ ನಿರ್ಮಾಣ ಮಾಡಲಾಗಿದೆ.  ಪ್ರವಾಸಿ ಮಂದಿರದ ನೆಲ ಮಹಡಿಗೆ, ಒಳಾಂಗಣ ಡಿಸೈನ್ ಮತ್ತು ಪಿಠೋಪಕರಣ,  ಕುಡಿಯುವ ನೀರು ಪೂರೈಕೆಗಾಗಿ ಮತ್ತು ಮೋಟರ್ ಹಾಗೂ ಪಂಪ್ ಸೇರಿದಂತೆ ಇತರೆ ಅಗತ್ಯ ಸೌಲಭ್ಯ, ಪ್ರವಾಸಿ  ಮಂದಿರಕ್ಕೆ ಬಂದು ಹೋಗಲು ರಸ್ತೆ ನಿರ್ಮಾಣ ಸೇರಿ ಎಲ್ಲಾವನ್ನು ಸಹ ಅಚ್ಚುಕಟ್ಟಾಗಿ ಮತ್ತು ಆಕರ್ಷಿಸುವ ರೀತಿಯಲ್ಲಿ ಪ್ರವಾಸಿ ಮಂದಿರ  ನಿರ್ಮಾಣ ಮಾಡಲಾಗಿದೆ ಎಂದರು.
ಸಾರ್ವಜನಿಕರು ಸಹ ಕೊಠಡಿಗಳನ್ನು ಪಡೆದಾಗ ಸರಿಯಾದ ರೀತಿಯಲ್ಲಿ ಬಳಸಬೇಕು. ಸರ್ಕಾರಿ ಕೊಠಡಿ ಎಂದು ಬೇವಬ್ದಾರಿ ಬೇಡ. ಸಿಬ್ಬಂದಿಗಳು ಸಹ ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡಬೇಕು. ತುಂಬಾ ಕಷ್ಟ ಪಟ್ಟು ಹಣವನ್ನು ತಂದು ಹೊಸ ಕೊಠಡಿಗಳ ನಿರ್ಮಾಣ ಮಾಡಿದ್ದೇನೆ. ಈ‌ ಮೊದಲು ಸರ್ಕಾರಿ ಐಪಿ ಹಳೆ ಕೊಠಡಿಗಳು ಇದ್ದರಿಂದ ಯಾರು ಬಳಸುತ್ತಿರಲಿಲ್ಲ. ಆದರೆ ಈಗ ಸ್ಟಾರ್ ಹೋಟೆಲ್ ಗಳ ಕೊಠಡಿಗಳಿಗಿಂತ ಸುಸಜ್ಜಿತ ಕೊಠಡಿಗಳು ನಮ್ಮ ಸರ್ಕಾರ ನೀಡಿದ ಹಣದಿಂದ ಮಾಡಲಾಗಿದ್ದು ಹಣ ನೀಡಿದ ಮುಖ್ಯಮಂತ್ರಿ ಅವರಿಗೆ ಮತ್ತು ಸಚಿವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ತಿಳಿಸಿದರು.
ಶಿವಮೊಗ್ಗ ಲೋಕೋಪಯೋಗಿ ಇಲಾಖೆಯ ಅಧೀಕ್ಷಕ ಇಂಜಿನಿಯರ್ ಕೆ.ಜಿ.ಜಗದೀಶ್, ಕಾರ್ಯಪಾಲಕ ಅಭಿಯಂತರ ಮಲ್ಲಿಕಾರ್ಜುನ, ಸಹಾಯಕ ಕಾರ್ಯಪಾಲಕ ಅಭಿಯಂತರ ಜಿ.ಕೃಷ್ಣಪ್ಪ, ಎಇ ಗೋಪಾಲ್, ಪ್ರವಾಸಿ ಮಂದಿರ ನಿರ್ಮಾಣ ಮಾಡಿದ ಪ್ರಥಮ ದರ್ಜೆ ಗುತ್ತಿಗೆದಾರ ಪಿ.ಶ್ರೀನಿವಾಸ್ ಸೇರಿದಂತೆ ಮತ್ತಿತರ ಅಧಿಕಾರಿಗಳು, ಸಿಬ್ಬಂದಿಗಳು ಮುಖ್ಯ ಅತಿಥಿಗಳಾಗಿದ್ದಾರೆ.
[t4b-ticker]

You May Also Like

More From Author

+ There are no comments

Add yours