ತ್ಯಾಗರಾಜ್ ಮಾರುಕಟ್ಟೆಗೆ ಅಭಿವೃದ್ದಿಗೆ 2.73 ಕೋಟಿ: ಶಾಸಕ ಜಿ‌.ಹೆಚ್.ತಿಪ್ಪಾರೆಡ್ಡಿ

 

ಚಿತ್ರದುರ್ಗ: ಐತಿಹಾಸಿಕ ತ್ಯಾಗರಾಜ್  ಮಾರುಕಟ್ಟೆಯನ್ನು 2.73 ಕೋಟಿ ವೆಚ್ಚದಲ್ಲಿ ನೂತನ  ಹೈಟೆಕ್  ಮಾರುಕಟ್ಟೆಯಾಗಿ ನಿರ್ಮಾಣ ಮಾಡಿ ತರಕಾರಿ ವ್ಯಾಪರಿಗಳಿಗೆ ಹಂಚಿಕೆ ಮಾಡಲಾಗುವುದು ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಹೇಳಿದರು.

ನಗರದ ದೊಡ್ಡಪೇಟೆಯ ವಾಸವಿ ಶಾಲೆ ಮುಂಭಾಗದಲ್ಲಿ ಹಳೆಯ  ತ್ಯಾಗರಾಜ್ ಮಾರುಕಟ್ಟೆಯ  ನೂತನ  ಮಾರುಕಟ್ಟೆ ಕಟ್ಟಡ ನಿರ್ಮಾಣಕ್ಕೆ  ಭೂಮಿ ಪೂಜೆ ಮತ್ತು ಡಿಪೋ  ರಸ್ತೆಯಲ್ಲಿ  ರಸ್ತೆ ಕಾಮಗಾರಿಗೆ ಪೂಜೆ ನೆರವೇರಿಸಿ ಮಾತನಾಡಿದರು.
ಚಿತ್ರದುರ್ಗ ನಗರದಲ್ಲಿ ತುಂಬಾ ಹಳೆಯ ಮಾರುಕಟ್ಟೆ ಮತ್ತು ಸೊಪ್ಪಿನ ಮಾರುಕಟ್ಟೆ ಎಂದು ಹೆಸರಾಗಿ ತ್ಯಾಗರಾಜ್ ಮಾರುಕಟ್ಟೆ ಕಟ್ಟಡ  ಬಹುದಿನಗಳಿಂದ ಹೊಸ ಕಟ್ಟಡಕ್ಕೆ ಮನವಿ ಮಾಡಿದ್ದರು ಇದಕ್ಕೆ ಅನುದಾನ ಒದಗಿಸಿ ಮಾಡಿಕೊಡುತ್ತೇನೆ ಎಂದು ತಿಳಿಸಿದ್ದೇ ಕೊಟ್ಟ ಮಾತಿನಂತೆ ನೂತನ ಕಟ್ಟಡಕ್ಕೆ 2.73 ಕೋಟಿ ವೆಚ್ಚದಲ್ಲಿ ಮೂರು ಹಂತದ ಕಟ್ಟಡ ನಿರ್ಮಾಣ ಮಾಡಿ ಒಂದು ಮಹಡಿಗೆ  25 ರಿಂದ 30  ಮಳಿಗೆಗಳಂತೆ 75 ಕ್ಕಿಂತ ಮಳಿಗೆ ಕಟ್ಟಿ  ಸುಮಾರು 75 ರಿಂದ 80 ಜನ ಹೂವಿ, ಹಣ್ಣು ಮತ್ತು  ತರಕಾರಿ ವ್ಯಾಪರಿಗಳಿಗೆ  ಲಾಟರಿ ಮೂಲಕ ಆಯ್ಕೆ ಮಾಡಿ ಹಂಚಿಕೆ ಮಾಡಲಾಗುತ್ತದೆ ಎಂದರು‌.
ತ್ಯಾಗರಾಜ್ ಮಾರುಕಟ್ಟೆ ನಿರ್ಮಾಣದಿಂದ ತರಕಾರಿ ವ್ಯಾಪರಿಗಳಿಗೆ ಅನುಕೂಲವಾಗುವ ಜೊತಗೆ ರಸ್ತೆ ಬದಿಯಲ್ಲಿ ಸಾರ್ವಜನಿಕರಿಗೆ ವ್ಯಾಪರಕ್ಕೆ ವಾಹನ ಒಡಾಟಕ್ಕೆ ಸಹಕಾರಿಯಾಗಲಿದೆ. ಕಿರಿದಾದ ರಸ್ತೆಯಾದ್ದರಿಂದ ಜನರಿಗೆ ಸ್ವಲ್ಪ ಕಿರಿಕಿರಿಯಾಗುತ್ತಿತ್ತು. ಇದರಿಂದ ಅದಕ್ಕೆ ಮುಕ್ತಿ ಸಿಗಲಿದೆ.
ಮದಕರಿ ನಾಯಕ ಕಾಲದಲ್ಲಿ ದೊಡ್ಡಪೇಟೆ, ಅಯ್ಯನಪೇಟೆ, ಬುರುಜನಹಟ್ಟಿ, ಚಿಕ್ಕಪೇಟೆ ಸೇರಿ ಸುತ್ತಮುತ್ತಲಿನ ನಗರದ ಜನರು ಈ ಮಾರುಕಟ್ಟೆಯಲ್ಲಿ ವ್ಯಾಪರಕ್ಕೆ ಜನರು ಬರುತ್ತಿದ್ದರು‌.ಇಲ್ಲಿ ಹಳೆಯ ಕಟ್ಟಡ ಸಹ ಇತ್ತು ಅಲ್ಲಿ ಉಳಿಕೆ ತರಕಾರಿ ಇಟ್ಟುಕೊಳ್ಳು ಸಹ ಅನುಕೂಲವಾಗಿತ್ತು‌. ಆದರೆ ಅದು ತುಂಬಾ ಹಳೆಯ ಕಟ್ಟಡವಾದ್ದರಿಂದ ಶೀತಲಗೊಳ್ಳುವ ಸ್ಥಿತಿಯಲ್ಲಿತ್ತು ಇದರಿಂದ ನಗರಸಭೆ ಅನುದಾನ ಬಳಸಿ ಹೊಸ ಕಟ್ಟಡ ನಿರ್ಮಾಣದಿಂದ ಸಾಕಷ್ಟು ಅನುಕೂಲವಾಗಲಿದ್ದು ಅವರ ಉಳಿಕೆ ತರಕಾರಿ ಇಟ್ಟುಕೊಳ್ಳಲು ಕೊಠಡಿಗಳನ್ನು ಸಹ ನಿರ್ಮಿಸಿ ಕೊಡಲಾಗುತ್ತದೆ.
ಹಳೆ ಸಂತೇ ಮೈದಾನ ರಸ್ತೆಯಲ್ಲಿ ಹಳೆಯ ಮಟನ್ ಮಾರುಕಟ್ಟೆಗೆ 4.50 ಕೋಟಿ ವೆಚ್ಚದಲ್ಲಿ ಹೊಸ ಮಾರುಕಟ್ಟೆ ಮಾಡಲು ಟೆಂಡರ್ ಮುಗಿದಿದೆ‌.ಇಲ್ಲಿ ಮಟನ್, ಚಿಕನ್, ಮೀನು ಮಾರಟಕ್ಕೆ ಮತ್ತು ಕೋಲ್ಡ್ ಸ್ಟೋರೇಜ್ ಸಹ  ಮಾಡಿ ವ್ಯಾಪರಿಗಳಿಗೆ ನೀಡಲಾಗುತ್ತದೆ. ಇಲ್ಲೂ ಸಹ ಲಾಟರಿ ಮೂಲಕ ಮಳಿಗೆಗಳನ್ನು ಹಂಚಿಕೆ ಮಾಡಲಾಗುತ್ತದೆ  ಎಂದು ತಿಳಿಸಿದರು‌.
ರಸ್ತೆ ಕಾಮಗಾರಿಗಳಿಗೆ ಚಾಲನೆ: ನಗರದ ಹಳೆಯ ಡಿಪೋ ರಸ್ತೆಯಲ್ಲಿ 1.20 ಕೋಟಿ ವೆಚ್ಚದ ಸಿ.ಸಿ. ರಸ್ತೆ ಕಾಮಗಾರಿಗೆ ಮತ್ತು ಎಪಿಎಂಸಿ ಹಮಾಲರ ಕಾಲೋನಿಯಲ್ಲಿ 80 ಲಕ್ಷ ವೆಚ್ಚದಲ್ಲಿ ಸಿ.ಸಿ. ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡ ವಿಶಾಲವಾಗಿ ಉತ್ತಮ ರಸ್ತೆಗಳನ್ನು ನಿರ್ಮಾಣ ಮಾಡಿಸಿಕೊಂಡರೆ ನಿಮಗೆ ಅನುಕೂಲವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ನಗರಸಭೆ ಉಪಾಧ್ಯಕ್ಷ ಶ್ರೀದೇವಿ ಚಕ್ರವರ್ತಿ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಬಿ. ಸುರೇಶ್, ನಗರಸಭೆ ಸದಸ್ಯರಾದ ಹರೀಶ್, ಶ್ರೀನಿವಾಸ್, ಅಂಗಡಿ ಮಂಜಣ್ಣ, ಮಂಜುಳ ವೇದಾ ಪ್ರಕಾಶ್,  ನಾಮ ನಿರ್ದೇಶನ ಸದಸ್ಯ ಕೃಷ್ಣ, ತಿಮ್ಮಣ್ಣ , ರಮೇಶ ಚಾರ್,  ಮುಖಂಡರಾದ ಚಕ್ರವರ್ತಿ, ಮಹೇಶ್, ನಗರಸಭೆ ಇಂಜಿನಿಯರ್ ಕಿರಣ್, ಗುತ್ತಿಗೆದಾತ ಹೇಮಂತ್ ಮತ್ತು ಸ್ಥಳೀಯರು ಇದ್ದರು.
[t4b-ticker]

You May Also Like

More From Author

+ There are no comments

Add yours