ಮದುವೆ ದಿನ 107 ಜನರ ಬಲಿ, ಈ ಘಟನೆಯಿಂದ ನೋವಾಗಿದೆ ಎಂದ ಜೋಡಿ

 

ಇರಾಕ್‌: ಮದುವೆ ಎಂದರೆ ಜೀವನದ ಅವಿಸ್ಮರಣೀಯ ಸಮಯ. ಆದರೆ ನಮಗೆ ಈ ಮದುವೆಯೇ (Wedding) ದುಸ್ವಪ್ನವಾಗಿದ್ದು, ನಾವು ದೈಹಿಕವಾಗಿ ಬದುಕಿದ್ದರೂ, ಮಾನಸಿಕವಾಗಿ ನಾವು ಸತ್ತುಹೋಗಿದ್ದೇವೆ ಎಂದು 107 ಜನರನ್ನು ಬಲಿ ತೆಗೆದುಕೊಂಡ ಮದುವೆಯ ವರ (Groom) ರಿವಾನ್‌ ತಿಳಿಸಿದ್ದಾರೆ.

ವಾರದ ಹಿಂದೆ ಉತ್ತರ ಇರಾಕ್‌ನ (Iraq) ಹಮ್ದನಿಹಾಯ್‌ ಪಟ್ಟಣದಲ್ಲಿರುವ ಮದುವೆ ಮಂಟಪವೊಂದರಲ್ಲಿ ಅಗ್ನಿ ದುರಂತವಾಗಿ 100ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು. ಜೊತೆಗೆ 150ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಇದೀಗ ಈ ದುರ್ಘಟನೆಗೆ ಕಾರಣವಾಗಿದ್ದ ಮದುವೆಯಲ್ಲಿ ವರನಾಗಿದ್ದ ರಿವಾನ್ ಹಾಗೂ ವಧು ಹನೀನ್‌ ಸಂದರ್ಶನವೊಂದರಲ್ಲಿ ಮಾತನಾಡಿ ತಮ್ಮ ಕರಾಳ ನೆನಪನ್ನು ಹಂಚಿಕೊಂಡಿದ್ದಾರೆ.

ನಾವು ಬಾಹ್ಯವಾಗಿ ಓಡಾಡುತ್ತಿದ್ದರೂ ಒಳಗೊಳಗೆ ಪ್ರತೀ ಕ್ಷಣ ಸಾಯುತ್ತಿದ್ದೇವೆ. ನನ್ನ ಪತ್ನಿ ಹನೀನ್ ಇನ್ನೂ ಆಘಾತದಲ್ಲಿದ್ದಾರೆ. ಇದರ ಜೊತೆಗೆ ನಮ್ಮ ಕುಟುಂಬ ಸದಸ್ಯರನ್ನು ಕಳೆದುಕೊಂಡು ಮಾತನಾಡಲು ಆಗದ ಸ್ಥಿತಿಯಲ್ಲಿದ್ದೇವೆ. ಆಕೆಯ ತಂದೆಯು ಘಟನೆ ವೇಳೆ ತೀವ್ರ ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಯಲ್ಲಿ ತೀವ್ರ ನಿಗಾದಲ್ಲಿ ಇಟ್ಟಿದ್ದಾರೆ ಎಂದು ವರ ಬೇಸರ ವ್ಯಕ್ತಪಡಿಸಿದರು.

ಮದುವೆ ವೇಳೆ ಪಟಾಕಿಯನ್ನು ಒಳಾಂಗಣದಲ್ಲಿ ಸಿಡಿಸಲಾಗಿತ್ತು. ಇದರಿಂದಾಗಿ ಛಾವಣಿಗೆ ಬೆಂಕಿ ತಗುಲಿ ಅನಾಹುತ ಆಗಿರುವ ಸಾಧ್ಯತೆಯಿದೆ. ಇದು ಶಾರ್ಟ್-ಸರ್ಕ್ಯೂಟ್ ಆಗಿರಬಹುದು, ಈ ಬಗ್ಗೆ ನನಗೆ ಸರಿಯಾಗಿ ಗೊತ್ತಿಲ್ಲ ಎಂದರು.

ಮಂಗಳವಾರ ಮೊಸುಲ್‌ನ ಪೂರ್ವದಲ್ಲಿರುವ ಕ್ರಿಶ್ಚಿಯನ್ನರು ಹೆಚ್ಚು ವಾಸಿಸುವ ಪಟ್ಟಣವಾದ ಹಮ್ದನಿಯಾದದಲ್ಲಿ ಮದುವೆ ನಡೆದಿತ್ತು. ಈ ವೇಳೆ ನೂತನ ವಧು ವರರು ನರ್ತಿಸುತ್ತಿದ್ದರು. ಇದನ್ನು ನೋಡಲು ಜನರು ಕಿಕ್ಕಿರಿದು ಸೇರಿದ್ದರು. ಆದರೆ ಅದೇ ಸಮಯಕ್ಕೆ ಸರಿಯಾಗಿ ಅಲಂಕಾರಕ್ಕೆಲ್ಲ ಬೆಂಕಿ ತಗುಲಿದೆ. ಈ ವೇಳೆ ಮದುವೆ ಸಂಭ್ರಮ ಕಳೆಗುಂದಿ ಸ್ಮಶಾನದ ವಾತಾವರಣ ನಿರ್ಮಾಣವಾಗಿತ್ತು. ವಧು ತನ್ನ ತಾಯಿ, ಸಹೋದರನನ್ನು ಕಳೆದುಕೊಂಡಿದ್ದಳು. ದುರಂತದ ವೇಳೆ ಸುಮಾರು 107 ಜನರು ಸಾವನ್ನಪ್ಪಿದ್ದಾರೆ ಎಂದು ಅಂದಾಜಿಸಲಾಗಿದೆ.

[t4b-ticker]

You May Also Like

More From Author

+ There are no comments

Add yours