10 ವರ್ಷದಿಂದ ನಾನ ನೀನಾ ಎನ್ನುತ್ತಿದ್ದ ಪಾತಲಿಂಗೇಶ್ವರ ದೇವಸ್ಥಾನ ಆಡಳಿತ ಮಂಡಳಿಗೆ ತಹಶೀಲ್ದಾರ್ ಕಾನೂನಿನ ಚಾಟಿ, ವಿವಾದ ಸುಖಾಂತ್ಯ

 

ಚಳ್ಳಕೆರೆ:  ತಾಲೂಕು ತಳುಕು ಹೋಬಳಿ ದೊಡ್ಡಬಾತಿಹಳ್ಳಿ ಗ್ರಾಮದ ಪಾತಲಿಂಗೇಶ್ವರ ಸ್ವಾಮಿ ದೇವಸ್ಥಾನದ ಹತ್ತು ವರ್ಷಗಳ ವಿವಾದಕ್ಕೆ ಇಂದು ಚಳ್ಳಕೆರೆ ತಹಶೀಲ್ದಾರ್ ಎನ್.ರಘುಮೂರ್ತಿ   ತೆರೆ  ಎಳೆದಿದ್ದಾರೆ.

ಪಾತಲಿಂಗೇಶ್ವರ ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯರ ನಡುವೆ ಕಳೆದ ಎಂಟು ವರ್ಷಗಳಿಂದ ಗುಂಪುಗಳ ವಿವಾದದ ಮಧ್ಯೆ  ದೇವಸ್ಥಾನದ ಹುಂಡಿಯನ್ನು ತೆರೆದಿರಲಿಲ್ಲ. ಈ ವಿಚಾರವಾಗಿ ಅನೇಕ  ಹಿರಿಯ ಗ್ರಾಮದ ಮುಖಂಡರು ತಾಲೂಕು ಕಚೇರಿಗೆ ಭೇಟಿ ನೀಡಿ ತಹಶೀಲ್ದಾರ್ ಅವರನ್ನು ಭೇಟಿ ಮಾಡಿ ಆಂಧ್ರಪ್ರದೇಶದ ಬಹುತೇಕ ಗ್ರಾಮಗಳಲ್ಲಿ ಈ ದೇವರ ಭಕ್ತಾದಿಗಳಿದ್ದು ದೇವರ ಪೂಜಾ ಕಾರ್ಯ  ಮತ್ತು ಜಾತ್ರಾಮಹೋತ್ಸವದ ವಿಧಿ ವಿಧಾನಗಳು ವಿವಾದದಿಂದ ತೊಡಕಾಗಿತ್ತು. ಆದಷ್ಟು ಬೇಗ ದೇವಸ್ಥಾನಕ್ಕೆ ಭೇಟಿ ನೀಡಿ ಈ ವಿವಾದವನ್ನು ಬಗೆಹರಿಸುವ ಅಂತೆ ತಹಶೀಲ್ದಾರ್ ಅವರಿಗೆ ಮನವಿ ಮಾಡಲಾಗಿತ್ತು. ಈ  ಮನವಿಯನ್ನು  ಪರಿಶೀಲಿಸಿ ನಿಮಗೆ ಒಂದು ದಿನಾಂಕ ನೀಡಿ ಭೇಟಿ ಕೊಡುತ್ತೇನೆ ಎಂದು ಭರವಸೆ ನೀಡಿದ್ದರು. ಅದರ ಪ್ರಕಾರ ಇಂದು ಗ್ರಾಮಕ್ಕೆ ಭೇಟಿ ನೀಡಿ  ಊರಿನ ಗ್ರಾಮಸ್ಥರನ್ನು ಒಂದೆಡೆ ಸೇರಿಸಿ ವಿವಾದದ ಕುರಿತು ವಿಸ್ತೃತ ಚರ್ಚೆ ನಡೆಸಿ ಗ್ರಾಮಸ್ಥರ ಮನವೊಲಿಸಲಾಗಿದೆ. ಇರುವಂತಹ ಆಡಳಿತ ಮಂಡಳಿಯನ್ನು ಬರ್ಖಾಸ್ತುಗೊಳಿಸಿ ಹೊಸ ಆಡಳಿತ ಮಂಡಳಿಯನ್ನು ಮುಂದಿನ ದಿನಗಳಲ್ಲಿ ಗ್ರಾಮಸ್ಥರ ಅಭಿಪ್ರಾಯದಂತೆ ರಚಿಸಲಾಗುವುದು ಹಾಗೂ ಸುಮಾರು 10 ವರ್ಷಗಳಿಂದ ಹುಂಡಿಯನ್ನು ತೆರೆಯದೆ ಇರುವುದರಿಂದ ಹುಂಡಿಯಲ್ಲಿ ಇರುವಂತಹ ಹಣ ಮುಕ್ತಾ ಆಗಿರಬಹುದು ಆದ್ದರಿಂದ ಇಂದೆ ಹುಂಡಿಯನ್ನು ತೆರೆಯಲು ಗ್ರಾಮಸ್ಥರನ್ನು ಒಪ್ಪಿಸಿ ಕಾಣಿಕೆ ಕುಂಡಿ ತೆರೆಯಲಾಯಿತು. ಗ್ರಾಮಸ್ಥರ ಸಮಕ್ಷಮದಲ್ಲಿ ಉಂಡಿಯಾ ಎಣಿಕೆ ಕಾರ್ಯ ಭರದಿಂದ ಸಾಗಿದೆ ಮುಂದಿನ ಸಮಿತಿಯನ್ನು ರಚಿಸುವ ವರೆಗೆ ಗ್ರಾಮದಲ್ಲಿ ಸಾಮರಸ್ಯ ಕಾಪಾಡಿಕೊಳ್ಳುವಂತೆ ದೇವರ  ಯಾವುದೇ  ಕಾರ್ಯಗಳಿಗೆ  ತೊಂದರೆ  ಬಾರದಂತೆ ಮತ್ತು ದೇವಸ್ಥಾನದ ವಶದಲ್ಲಿ ಇರುವಂತಹ ಎಲ್ಲಾ ಒಡವೆ ವಸ್ತ್ರಗಳು  ಮುಂದಿನ ಆಡಳಿತ ಮಂಡಳಿ ರಚಿಸುವ ವೇಳೆಯಲ್ಲಿ ಯಾರ ಬಳಿ ಇದೆಯೋ ಒಡವೆಗಳನ್ನು ಹಾಜರುಪಡಿಸುವಂತೆ ಎಲ್ಲರಿಗೂ ತಿಳಿ ಹೇಳಿದರು. ತಹಶೀಲ್ದಾರ್  ಮಾತಿಗೆ ಒಮ್ಮತದಿಂದ ಗ್ರಾಮಸ್ಥರುಗಳು ಒಪ್ಪಿಗೆ ಸೂಚಿಸಿದರು. ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿ ಸಂಭ್ರಮ ಮನೆಮಾಡಿತ್ತು ಪರಶುರಾಂಪುರ ಪೊಲೀಸ್ ಉಪನಿರೀಕ್ಷಕ ರಾದ  ಸ್ವಾತಿ  , ಮುಖಂಡರಾದ ಪಾತಪ್ಪನಗುಡಿ ಚಿತ್ರಪ್ಪನರಸಿಂಹ ಮೂರ್ತಿ,  ಪೊಲೀಸ್ ಮತ್ತು ಕಂದಾಯ ಇಲಾಖೆಯ ಸಿಬ್ಬಂದಿ ಹಾಜರಿದ್ದರು

[t4b-ticker]

You May Also Like

More From Author

+ There are no comments

Add yours