ಸಿಸಿ ಟಿವಿ ಇಲ್ಲದ ಆಫೀಸ್ ಗಳಲ್ಲಿ ಸರಣಿ ಕಂಪ್ಯೂಟರ್ ಕಳ್ಳರ ಬಂಧನ

 

ವರದಿ: ಮಹಂತೇಶ್ ಮೊಳಕಾಲ್ಮುರು.

ಮೊಳಕಾಲ್ಮುರು:ಸರ್ಕಾರಿ ಕಚೇರಿಗಳಲ್ಲಿಕಂಪ್ಯೂಟರಗಳ  ಕಳವು ಮಾಡುತ್ತಿದ್ದ ಖತರ್ನಾಕ ಕಳ್ಳರನ್ನು ಬಂಧಿಸುವಲ್ಲಿ ಮೊಳಕಾಲ್ಮುರು ಪೊಲೀಸರು ಯಶಸ್ವಿಯಾಗಿದ್ದಾರೆ ..

2021 ರ ಸೆಪ್ಟೆಂಬರ್,ನವೆಂಬರ್, ಡಿಸೆಂಬರ್ ಅವಧಿಯಲ್ಲಿ ಮೊಳಕಾಲ್ಮುರು ಪಟ್ಟಣದ ಸರ್ಕಾರಿ ಕಚೇರಿಗಳಲ್ಲಿ ಕಂಪ್ಯೂಟರ್ಗಳ ಸರಣಿ ಕಳ್ಳತನ ಪ್ರಕರಣಗಳು ಇಲಾಖೆಯ ಅಧಿಕಾರಿಗಳ ನಿದ್ದೆಗೆಡಿಸಿದ್ದರೆ ಪೊಲೀಸ್ ಇಲಾಖೆಗೆ ತಲೆನೋವಾಗಿ ಪರಿಣಮಿಸಿತ್ತು…

ಸರ್ಕಾರಿ ಇಲಾಖೆಗಳಲ್ಲಿ ಸಿಸಿಟಿವಿ ಇಲ್ಲದೆ ಇರುವುದನ್ನು ಕನ್ಫರ್ಮ ಮಾಡಿಕೊಳ್ಳುತ್ತಿದ್ದ ಕದೀಮರು ಹಗಲೊತ್ತಲ್ಲೇ ಇಲಾಖೆಗಳಲ್ಲಿ ಕಡೆ ಗಸ್ತು ನಡೆಸಿ ರಾತ್ರಿಯಾಗುತ್ತಿದ್ದಂತೆ ಸರ್ಕಾರಿ ಇಲಾಖೆಗಳ ಬೀಗ ಹೊಡೆದು ಕಂಪ್ಯೂಟರ್ಗಳ ಕಳ್ಳತನ ಮಾಡುತ್ತಿದ್ದರು…

ಪಟ್ಟಣದ ತೋಟಗಾರಿಕೆ ಇಲಾಖೆ ಬಿಇಓ ಕಚೇರಿ ಮತ್ತು ಪಶುಸಂಗೋಪನಾ ಇಲಾಖೆಯಲ್ಲಿ ಕಂಪ್ಯೂಟರ್ ಸಾಲು ಸಾಲು ಕಳ್ಳತನ ಮಾಡಿದ್ದರು.

ಅಷ್ಟೇ ಅಲ್ಲದೆ ಪಟ್ಟಣದ ಮುಬಿನ್ ಎಂಬವರ ಮನೆಯಲ್ಲಿ 10 ಗ್ರಾಂ ಬಂಗಾರ ಮತ್ತು 15000 ಸಾವಿರ ನಗದು ಹಣ ಕದ್ದೊಯ್ದಿದ್ದರು ಅಷ್ಟೇ ಅಲ್ಲದೆ ನುಂಕಪ್ಪನ ಕಟ್ಟೆ ಹತ್ತಿರ ನಿಲ್ಲಿಸಲಾಗಿದ್ದ ಕೆಎಸ್ಆರ್ಟಿಸಿ ಬಸ್ ನಲ್ಲಿ ಡೀಸೆಲ್ ಕಳ್ಳತನ ಮಾಡಿರುವುದಾಗಿ ಇದೇ ಆರೋಪಿಗಳು ಎಂದು ತಪ್ಪೊಪ್ಪಿಕೊಂಡಿದ್ದಾರೆ…

ಅಂದರ್ ಆದ ಆರೋಪಿಗಳು ಪಟ್ಟಣದ ನಿವಾಸಿಗಳಾಗಿದ್ದು ಕಟುಕರ ಬೀದಿಯ 33ವರ್ಷದ ಅಬ್ದುಲ್ ರೆಹಮಾನ್ ತಂದೆ ಹುಸೇನ್ ಹಾಗೂ ವೆಲ್ಡಿಂಗ್ ಕೆಲಸ ಮಾಡುತ್ತಿದ್ದ ಭಾಗ್ಯಜ್ಯೋತಿ ನಗರದ ನಿವಾಸಿ 23 ವರ್ಷದ ವಾಸಿಂ ಅಕ್ರಂ ತಂದೆ ಮಹಮ್ಮದ್ ರಫಿ ಮತ್ತು ಮುಬಾರಕ್ ಮೊಹಲ್ಲದ 34 ವರ್ಷದ ಅಲ್ಲಾಭಕ್ಷ ತಂದೆ ಇನಾಯತುಲ್ಲಾ ಮತ್ತು 29ವರ್ಷದ ಗುಜರಿ ವ್ಯಾಪಾರಿ ಕಲ್ಕೋಡ ಮೊಹಲ್ಲಾದ ಉಮರ್ ಫಾರೂಕ್ ತಂದೆ ಲೇಟ್ ಮಹಮ್ಮದ್ ರಫಿ ಎಂದು ತಿಳಿದುಬಂದಿದೆ….

ಅಂದರ್ ಆದ ಈ ನಾಲ್ವರ ಗ್ಯಾಂಗ್ ನಲ್ಲಿ ಉಮರ್ ಫಾರೂಕ್ ತಲೆ ಮರೆಸಿಕೊಂಡಿದ್ದಾನೆ.. ಇನ್ನು ಈ ಚಾಲಕಿ ಕಳ್ಳರನ್ನು ಹಿಡಿಯಲು ಪೊಲೀಸರು ನಿರಂತರವಾಗಿ ಶ್ರಮಿಸಿದರು ಸರ್ಕಲ್ ಇನ್ಸ್ಪೆಕ್ಟರ್ ಜಿಬಿ.ಉಮೇಶ್ ರವರ ಮಾರ್ಗದರ್ಶನದಲ್ಲಿ ಸಬ್ಇನ್ಸ್ಪೆಕ್ಟರ್ ಎಂ.ಕೆ ಬಸವರಾಜುರವರ ನೇತೃತ್ವದ ತಂಡ ಎಎಸ್ ಐ ತಿಮ್ಮಣ್ಣ ಜಯಣ್ಣ ಸಿಬ್ಬಂದಿಗಳಾದ ಭಾಷಾ ಶ್ರೀಧರ್ ಶಿವಕುಮಾರ್ ನಾಯಕ್ ಪುರಂದರ ಭೀಮಣ್ಣ ರಮೇಶ್ ವೀರಣ್ಣ ಮಂಜುನಾಥ್ ರವರನ್ನು ಒಳಗೊಂಡ ತಂಡವು ಕಳ್ಳರನ್ನು ಸೆರೆಹಿಡಿಯುವಲ್ಲಿ ಕೊನೆಗೂ ಯಶಸ್ವಿಯಾಗಿದ್ದಾರೆ..

ಕಳ್ಳರ ಚಲನವಲನಗಳ ಮೇಲೆ ಆರಂಭದಿಂದಲೂ ಕಣ್ಣಿಟ್ಟಿದ್ದ ಸಬ್ಇನ್ಸ್ಪೆಕ್ಟರ್ ಎಂ.ಕೆ ಬಸವರಾಜ್ ರವರು ಕೊನೆಗೂ ಕತರ್ನಾಕ್ ಗ್ಯಾಂಗನ್ನು ಸೆರೆಹಿಡಿಯುವಲ್ಲಿ ಯಶಸ್ವಿ ಪಾತ್ರವಹಿಸಿದ್ದಾರೆ…

ಒಟ್ಟಿನಲ್ಲಿ ಇಲಾಖೆಗಳಲ್ಲಿ ಆಗುತ್ತಿದ್ದ ಸರಣಿ ಕಳ್ಳತನದ ಆರೋಪಿಗಳು ಸೆರೆಯಾಗಿದ್ದು ಇದೀಗ ಅಧಿಕಾರಿಗಳು ನಿಟ್ಟುಸಿರು ಬಿಟ್ಟಿದ್ದಾರೆ…

ಇನ್ನು ಸರಣಿ ಕಳ್ಳತನದ ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾದ ಪೊಲೀಸರ ಕರ್ತವ್ಯ ಪ್ರಜ್ಞೆಗೆ ಜನರಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ..

[t4b-ticker]

You May Also Like

More From Author

+ There are no comments

Add yours