ಸಾಮಾಜಿಕ ನ್ಯಾಯ ಹಿಂದುಳಿದ ಕೋಟದಲ್ಲಿ ಮಂತ್ರಿಯಾಗುವ ವಿಶ್ವಾಸವಿದೆ: ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ

 

ಚಿತ್ರದುರ್ಗ:  ಪಕ್ಷ ಮತ್ತು ರಾಷ್ಟ್ರೀಯ ನಾಯಕರು ಚರ್ಚೆ ಮಾಡಿ   ಕೇಂದ್ರ ಸಚಿವ ಸಂಪುಟದಲ್ಲಿ ಯಾವ  34 ಜನ ಹಿಂದುಳಿದ ಸಂಸದರಿಗೆ ಅವಕಾಶ ನೀಡಿದ್ದಾರೆ. ಅದೇ ರೀತಿಯಲ್ಲಿ ಸಾಮಾಜಿಕ ನ್ಯಾಯ ದೃಷ್ಟಿಯಿಂದ ರಾಜ್ಯದಲ್ಲಿ ಅವಕಾಶ ಮಾಡಿಕೊಡುತ್ತಾರೆ ಎಂಬ ನಿರೀಕ್ಷೆ ಇದೆ ಎಂದ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಹೇಳಿದರು.
ನಗರದ ನೂತನ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ ಎಲ್ಲಾರಿಗೂ  ಶಾಸಕರಾದ ಮೇಲೆ ಸಚಿವರಾಗಬೇಕು ಎಂಬ ಆಸೆ ಇರುತ್ತೆ.  ನಾನು ಸಾಮಾಜಿಕ ನ್ಯಾಯ ಮತ್ತು ಹಿಂದುಳಿದ ವರ್ಗ, ಹಿರಿಯ ಶಾಸಕನಾಗಿದ್ದು ನನಗೆ ಅವಕಾಶ ಮಾಡಿಕೊಡುತ್ತೇನೆ ಎಂಬ ಭಾವನೆ ನನ್ನಲ್ಲಿದೆ‌. ಮುಖ್ಯಮಂತ್ರಿ ಅವರು ಮೊದಲಿನಿಂದಲೂ ಆತ್ಮೀಯರು.   ಅವರು ನಮ್ಮ ಬಗ್ಗೆ ವಿಶೇಷ ಅಭಿಮಾನ ಹೊಂದಿದ್ದಾರೆ. ಸದಾ ಜನರ ಜೊತೆಯಲ್ಲಿ ಇದ್ದಿರಿ, ನಿಮ್ಮ ಕುಟುಂಬಕ್ಕೆ ಜಿಲ್ಲೆಯಲ್ಲಿ ಒಂದು ಕಪ್ಪು ಚುಕ್ಕೆ ಇಲ್ಲ. ಆದರೆ ಮೇಲ್ಮಟ್ಟದ ರಾಜಕಾರಣದಲ್ಲಿ  ಗುರುತಿಸಿಕೊಳ್ಳಬೇಕಿತ್ತು ಎಂಬ ಮಾತನ್ನು ಸಿಎಂ ಬಸವರಾಜ್ ಬೊಮ್ಮಾಯಿ ಅವರು ಒಂದುವರೆ ವರ್ಷದ ಹಿಂದೆ ಹೇಳಿದ್ದರು ಎಂದು ಸ್ಮರಿಸಿದರು. ನಾನು ಸಹ ದೆಹಲಿಗೆ ಹೋಗಿ ಬರೋಣ ಅಂದುಕೊಂಡಿದ್ದೇನೆ ಎಂದು ನಗೆ ಚಾಟಕಿ ಹಾರಿಸಿದರು. ಮಂತ್ರಿ ಸ್ಥಾನ ಸಿಕ್ಕರೆ ಬೊಮ್ಮಾಯಿ ಸಂಪುಟದಲ್ಲಿ   ಸಂತೋಷವಾಗಿ ಉತ್ತಮ ಕೆಲಸ ಮಾಡುತ್ತೇನೆ. ಒಂದು ವೇಳೆ ಅವಕಾಶ ಸಿಗದಿದ್ದರು  ಸಹ ಜನರೊಂದಿಗೆ ಅಭಿವೃದ್ಧಿ ಕೆಲಸ ಮಾಡುತ್ತೇನೆ. ಜನರು ಮುಖ್ಯ ನನ್ನ ಜೊತೆಯಲ್ಲಿ ಜನರಿದ್ದರೇ ಸಂತೋಷ ಎಂದರು.
[t4b-ticker]

You May Also Like

More From Author

+ There are no comments

Add yours