ಸತತ ಮಳೆಯಿಂದ ಹರಿಯುತ್ತಿರುವ ಹಳ್ಳಕ್ಕೆ ಸಿಲುಕಿ 30 ಕುರಿಗಳು ನೀರು ಪಾಲು, ಸಾವಿರಾರು ರೂಪಾಯಿ ಬೆಲೆ ಬಾಳುವ ಕುರಿಗಳ ಕಳೆದುಕೊಂಡವರು ಕಣ್ಣಿರು

 

*ಹೊಸದುರ್ಗ ತಾಲ್ಲೂಕಿನ ಸುದ್ದಿ..*
*ದೊಡ್ಡತೇಕಲವಟ್ಟಿ ಸಮೀಪದಲ್ಲಿ ರಾತ್ರಿ ಸುರಿದ ಮಳೆಗೆ:ಹರಿಯುತ್ತಿರುವ ಹಳ್ಳಕ್ಕೆ ಸಿಲುಕಿ ಮೂವತ್ತು ಕುರಿಗಳು ನೀರು ಪಾಲು.*

ಹೊಸದುರ್ಗ ತಾಲೂಕಿನ ಹಲವೆಡೆ ಎರಡು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ತಾಲೂಕಿನ ದೊಡ್ಡತೇಕಲವಟ್ಟಿ ಸಿರಿಗೊಂಡನಹಳ್ಳಿ ನಡುವಿನ ಹಳ್ಳದ ರಭಸ ಹೆಚ್ಚಾಗಿದ್ದು, ಹಳ್ಳದ ಹಂಚಿನಲ್ಲಿ ಮೇಯಿಸಲು ಹೋದ 30ಕ್ಕೂ ಹೆಚ್ಚು ಕುರಿಗಳು ನೀರು ಪಾಲಾಗಿರುವ ಘಟನೆ ಮಂಗಳವಾರ ಮಧ್ಯಾಹ್ನ 12 ಗಂಟೆಯ ಸರಿಸುಮಾರಿಗೆ ಸಂಭವಿಸಿದೆ. ದೊಡ್ಡತೇಕಲವಟ್ಟಿ ಗ್ರಾಮದ ಕುರಿಗಾಹಿಗಳಾದ ಈಶ್ವರಪ್ಪ ಎಂಬುವರ 10, ರೇವಣ್ಣ ಎಂಬುವವರ 15 ಕುರಿಗಳು ಹಾಗೂ ರಂಗಪ್ಪ ಎಂಬುವರ ಐದು ಕುರಿಗಳು ನೀರು ಪಾಲಾಗಿವೆ. ಕುರಿಗಳು ಹಳ್ಳ ದಾಟುವ ಸಂದರ್ಭದಲ್ಲಿ ಹಳ್ಳದ ರಭಸ ಹೆಚ್ಚಾಗಿ ಕೊಚ್ಚಿ ಹೋಗಿವೆ.10 ಕುರಿಗಳನ್ನು ಮಾತ್ರ ರಕ್ಷಿಸುವಲ್ಲಿ ಕುರಿಗಾಹಿಗಳು ಸಫಲರಾಗಿದ್ದಾರೆ. ಸುಮಾರು 30 ಕುರಿಗಳು ಮೃತಪಟ್ಟಿವೆ.ಸತ್ತ ಕುರಿಗಳನ್ನು ತಮ್ಮ ಮನೆ ಮುಂದೆ ಇಟ್ಟುಕೊಂಡು ಕುರಿಗಾರಿಗಳು ಕಣ್ಣೀರುಡುತ್ತಿರುವ ದೃಶ್ಯ ಕಂಡುಬಂತು.
ಇದೊಂದು ಅತೀವೃಷ್ಟಿ ಎಂದು ಪರಿಗಣಿಸಿ ತಾಲ್ಲೂಕು ಆಡಳಿತ ಮತ್ತು ಸರ್ಕಾರ ಕುರಿಗಾಹಿಗಳ ನೆರವಿಗೆ ಬರಬೇಕೆಂದು ದೊಡ್ಡತೇಕಲವಟ್ಟಿ ಯುವಕ ಉಮೇಶ್ ಮನವಿ ಮಾಡಿದ್ದಾರೆ.

[t4b-ticker]

You May Also Like

More From Author

+ There are no comments

Add yours