ಸತತ ಮಳೆಗೆ ರೈತರು ಕಂಗಾಲು, ಕೈಗೆ ಬಂದ ಫಸಲು ಮಳೆಯಿಂದಾಗಿ ನಾಶ.

 

 

 

 

ವರದಿ: ಮೊಳಕಾಲ್ಮುರು ಮಹಂತೇಶ್

ಮೊಳಕಾಲ್ಮುರು: ಸತತವಾಗಿ ಸುರಿಯುತ್ತಿರುವ ಮಳೆಗೆ ಅನ್ನದಾತ ಕಂಗಾಲು -ಕೈಗೆ ಬಂದ ಫಸಲು ಮಳೆಯಿಂದಾಗಿ ನಾಶ…

ಹೌದು ಬಂಗಾಳಕೊಲ್ಲಿಯಲ್ಲಿ ವಾಯುಭಾರ ಒತ್ತಡದಿಂದಾಗಿ ಅಕಾಲಿಕವಾಗಿ ಮಳೆಯಾಗುತ್ತಿದ್ದು ರೈತರು ತತ್ತರಿಸಿ ಹೋಗಿದ್ದಾರೆ…

ತಾಲೂಕಿನ ಇತಿಹಾಸದಲ್ಲೇ ರೈತರು ಅನಾವೃಷ್ಟಿ ಕಂಡದ್ದೆ ಹೆಚ್ಚು ಆದರೆ ಈ ಬಾರಿ ಅತಿವೃಷ್ಟಿಯಿಂದಾಗಿ ವಾರ್ಷಿಕ ವಾಣಿಜ್ಯ ಶೇಂಗಾ ಬೆಲೆಯೂ ಹೊಲದಲ್ಲಿ ಕೊಳೆಯುತ್ತಿದೆ…ಇನ್ನು ಕಟಾವು ಮಾಡದೇ ಇರುವ ಶೇಂಗಾ ಗಿಡದಲ್ಲಿ ಕಾಯಿಗಳು ಮೊಳಕೆಯೊಡೆಯುತ್ತವೆ….

 

 

 

ಕಳೆದ ಎಂಟು ಹತ್ತು ದಿನಗಳಿಂದ ಮೋಡ ಕವಿದ ವಾತಾವರಣ ಹಾಗೂ ನಿರಂತರ ಮಳೆಯ ಹೊಡೆತಕ್ಕೆ ಅನ್ನದಾತ ಅಕ್ಷರಶ ತತ್ತರಿಸಿ ಹೋಗಿದ್ದಾರೆ…

ಬಂದ ಅಲ್ಪಸ್ವಲ್ಪ ಬೆಳೆಯು ಕೈಗೆ ಸಿಗುವ ನಿರೀಕ್ಷೆಯಲ್ಲಿದ್ದ ರೈತರಿಗೆ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ರೈತನಿಗೆ ಬರಸಿಡಿಲು ಬಡಿದಂತಾಗಿದೆ…

ತಾಲೂಕಿನಲ್ಲಿ ಹವಾಮಾನ ವೈಪರೀತ್ಯದಿಂದಾಗಿ ಶೇಂಗಾ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದು ಬೆಳೆಗಾರರ ಬವಣೆ ಹೇಳತೀರದಾಗಿದೆ..

ಬಯಲುಸೀಮೆಯ ಬಡವರ ಬಾದಾಮಿ ರೈತನನ್ನು ಸಾಲದ ಸುಳಿಗೆ ಸಿಲುಕಿಸಿದ್ದು ಮಳೆಯು ಇನ್ನಿಲ್ಲದ ಅವಾಂತರ ಸೃಷ್ಟಿ ಮಾಡಿದೆ..

ಈ ಬಗ್ಗೆ ಸರ್ಕಾರವು ಬೆಳೆ ಹಾನಿಗೊಳಗಾದ ರೈತರಿಗೆ ಬೆಳೆ ನಷ್ಟ ಪರಿಹಾರ ನೀಡಬೇಕು ಅಲ್ಲದೇ ಫಸಲ್ ಭೀಮಾ ಯೋಜನೆ ಯಲ್ಲಿ ಅರ್ಹ ಫಲಾನುಭವಿಗಳಿಗೆ ಬೆಳೆವಿಮೆ ನೀಡಬೇಕು ಎಂದು ರೈತರು ಆಗ್ರಹಿಸಿದ್ದಾರೆ….

[t4b-ticker]

You May Also Like

More From Author

+ There are no comments

Add yours