ವಾಲ್ಮೀಕಿ ಸಮಾಜದ ಹೋರಟಕ್ಕೆ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಬೆಂಬಲ

 

ಚಿತ್ರದುರ್ಗ:  ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ  ವಾಲ್ಮೀಕಿ ಸಮಾಜದ ಶ್ರೀ ವಾಲ್ಮೀಕಿ ಪ್ರಸನ್ನಾನಂದ ಮಹಾಸ್ವಾಮಿಗಳ‌ ನೇತೃತ್ವದಲ್ಲಿ ನ್ಯಾಯ ಮೂರ್ತಿ ನಾಗಮೋಹನ್ ದಾಸ್  ವರದಿ ಜಾರಿಗೆ (7.5 ಮೀಸಲಾತಿ )  ಕುರಿತು ನಡೆಸುತ್ತಿರುವ  ಅಹೋರಾತ್ರಿ ಧರಣಿಯಲ್ಲಿ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ  ಪಾಲ್ಗೊಂಡರು.

ಈ  ಸಂದರ್ಭದಲ್ಲಿ ಮಾತನಾಡಿ ರಾಜ್ಯದ ವಾಲ್ಮೀಕಿ ಸಮಾಜಕ್ಕೆ 7.5 ಮೀಸಲಾತಿ ನೀಡುವ ವಿಚಾರದಲ್ಲಿ ಸರ್ಕಾರ ನಿರ್ಧಾರ ಮಾಡುತ್ತದೆ. ಮೀಸಲಾತಿಗೆ ಇರುವ ಕೆಲವೊಂದು ತೊಡಕುಗಳನ್ನು ನಿವಾರಣೆ ಮಾಡಿ ಮೀಸಲಾತಿ ಹೆಚ್ಚಿಸುವ ವಿಶ್ವಾಸವಿದೆ ಎಂದರು.
ಸಮುದಾಯದ ಒಳಿತಿಗಾಗಿ ಸ್ವಾಮೀಜಿ ಸತ್ಯಾಗ್ರಹ ಕೈಗೊಂಡಿದ್ದಾರೆ.  ಇಂತಹ  ಹಿಂದುಳಿದ ವರ್ಗದವರಿಗೆ ಮೀಸಲಾತಿ ಕಲ್ಪಿಸಿದ್ದು  ನಾಯಕ ಸಮಾಜದ ಎಲ್.ಜಿ.ಹಾವನೂರು ಅವರು ಎಂಬುದು ಯಾರು ಮರೆಯುವಂತಿಲ್ಲ. ಎಲ್.ಜಿ.ಹಾವನೂರು ವರದಿ ಹಿಂದುಳಿದ ವರ್ಗಗಳ ಪವಿತ್ರ ಗ್ರಂಥ  ಎಂದರು.
ಸರ್ಕಾರದ ಸೌಲಭ್ಯ ಪಡೆಯಲು ಮೀಸಲಾತಿ ಅವಶ್ಯಕವಾಗಿದೆ. ನಾಯಕ ಸಮಾಜಕ್ಕಾಗಿ ನಡೆಸುತ್ತಿರುವ ಮೀಸಲಾತಿ ದೊರಕಲಿ ಅದಕ್ಕೆ ನನ್ನ ಬೆಂಬಲ ಸಹ ಇದೆ. ನಾನು ಸಹ‌ ಸರ್ಕಾರದ ಗಮನಕ್ಕೆ ತರುತ್ತೇನೆ ಎಂದು ತಿಳಿಸಿದರು.
[t4b-ticker]

You May Also Like

More From Author

+ There are no comments

Add yours