ರೋಗಗಳ ನಿಯಂತ್ರಣ  ಮಾಡಿಕೊಳ್ಳಲು ಯೋಗದಿಂದ ಮಾತ್ರ ಸಾಧ್ಯ

 

ಚಿತ್ರದುರ್ಗ. ಡಿ.17 ; ರೋಗಗಳ ನಿಯಂತ್ರಣ  ಮಾಡಿಕೊಳ್ಳುವುದು ಮತ್ತು ಕಡಿಮೆ ಮಾಡಿಕೊಳ್ಳುವುದು ಯೋಗಾಸನಗಳಿಂದ ಮಾತ್ರ ಸಾಧ್ಯವೆನ್ನಬಹುದು.ನಿರಂತರ ಯೋಗಾಭ್ಯಾಸ ಮಾಡುತ್ತ ಮನಸ್ಸು ಮತ್ತು ಹೃದಯ ಒಂದಾಗುತ್ತದೆ. ದೇಹದ ಮೇಲಿನ ಪ್ರೀತಿ ಹೆಚ್ಚಳವಾಗುತ್ತದೆ.” ಎಂದು ಚಿತ್ರದುರ್ಗದ ಯೋಗ ಗುರು ರವಿ ಅಂಬೇಕರ್ ತಿಳಿಸಿದರು.ಅವರು  ನಗರದ ಹೋರವಲಯದ ಹೋ.ಚಿ.ಬಡಾವಣೆಯ ನಿರಾಶ್ರಿತರ ಪುನರ್ವಸತಿ ಕೇಂದ್ರದ ಸದಸ್ಯರಿಗಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಆಯುಷ್ಮಾನ್ ಭಾರತ ಯೋಜನೆಯಡಿಯಲ್ಲಿ ಬೆಳಗಟ್ಟ ಪ್ರಾಥಮಿಕ ಆರೋಗ್ಯ ಕೇಂದ್ರದ ಸಹಯೋಗದೊಂದಿಗೆ ಆಯೋಜಿಸಿದ್ದ ಉಚಿತ ಯೋಗ ಮತ್ತು ಧ್ಯಾನ ಶಿಬಿರದಲ್ಲಿ ತರಬೇತಿ ನೀಡಿ ಮಾತನಾಡಿದರು.ಮುಂದುವರೆದು ” ಯಾವುದೇ ಖರ್ಚಿಲ್ಲದೇ ರೋಗಗಳನ್ನು ನಿಯಂತ್ರಣ ಮಾಡಿಕೊಳ್ಳುವುದು ಮತ್ತು ಕಡಿಮೆ ಮಾಡಿಕೊಳ್ಳುವುದು ಯೋಗಾಸನಗಳಿಂದ ಮಾತ್ರ ಸಾಧ್ಯ ಕೇವಲ ಪ್ರತಿನಿತ್ಯ ಒಂದು ಗಂಟೆ ಸಂಜೆಯಾಗಲಿ ಅಥವಾ ಮುಂಜಾನೆಯಾಗಲಿ ಯೋಗಾಭ್ಯಾಸ ಮಾಡಿದರೆ ಸಾಕು.ಯಾವುದೇ ಖರ್ಚಿಲ್ಲದೇ ರೋಗಗಳನ್ನು ನಿಯಂತ್ರಣ ಮಾಡಿಕೊಳ್ಳುವುದು ಮತ್ತು ಕಡಿಮೆ ಮಾಡಿಕೊಳ್ಳುವುದು ಇದು ಯೋಗಾಸನಗಳಿಂದ ಮಾತ್ರ ಸಾಧ್ಯ.” ಎಂದು ಯೋಗದ ಮಹತ್ವ ತಿಳಿಸಿದರು.ಕಾರ್ಯಕ್ರಮದಲ್ಲಿ ಬೆಳಗಟ್ಟ ಪ್ರಾಥಮಿಕ  ಆರೋಗ್ಯ ಕೇಂದ್ರದ ಆರೋಗ್ಯ ನಿರೀಕ್ಷಣಾಧಿಕಾರಿ ಡಿ.ಮಹೇಶ್, ನಿರಾಶ್ರಿತರ ಕೇಂದ್ರದ ಅಧೀಕಕ್ಷಕ ಮಹದೇವಯ್ಯ, ನೇತ್ರಾಧಿಕಾರಿ ಕೆ.ಸಿ.ರಾಮು, ಸ್ವಪ್ನ ಡಿ.ವಿ. ನಿರಾಶ್ರಿತರ ಕೇಂದ್ರದ ಸುಶ್ರುಷಕರಾದ ದೇವರಾಜ್, ಚೂಡಾಮಣಿ, ತಿಪ್ಪೇರುದ್ರಮ್ಮ ಇತರರು ಉಪಸ್ಥಿತರಿದ್ದರು.

[t4b-ticker]

You May Also Like

More From Author

+ There are no comments

Add yours