ಯುವತಿಗೆ ಅಶ್ಲೀಲ ಮೆಸೇಜ್ ಯುವಕನಿಗೆ ಥಳಿತ ,ಅರೆಬೆತ್ತಲೆ ಮೆರವಣಿಗೆ

 

ದಾವಣಗೆರೆ.ಮೇ.15 :  ಯುವತಿಗೆ ಅಶ್ಲೀಲ ಮೆಸೇಜ್  ಕಳಿಸಿದಲ್ಲದೇ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಾಕಿದ್ದ ಕಾರಣ ಯುವತಿಯ ಕುಟುಂಬದ ಸದಸ್ಯರು ಫೋಟೋ ಹಾಕಿದ್ದ ಯುವಕನಿಗೆ ಥಳಿಸಿರುವ ಮತ್ತು  ಅರೆಬೆತ್ತಲೆ ಮೆರವಣಿಗೆ ಮಾಡಿರುವ  ಘಟನೆ ದಾವಣಗೆರೆ ತಾಲೂಕಿನ ಅತ್ತಿಗೆರೆ ಗ್ರಾಮದಲ್ಲಿ ನಡೆದಿದೆ.

ಅತ್ತಿಗೆರೆ ಗ್ರಾಮದ ಯುವಕನು  ಅದೇ ಊರಿನ ಯುವತಿಯೊಬ್ಬಳಿಗೆ ಇನ್ಸ್‍ಟಾಗ್ರಾಂನಲ್ಲಿ ಹಾಯ್ ಮೆಸೇಜ್ ಹಾಕಿದ್ದ. ನಂತರ ಯುವತಿಗೆ ಅಶ್ಲೀಲವಾಗಿ ಮೆಸೇಜ್ ಮಾಡಿ, ಅದನ್ನು ಫೇಸ್‍ಬುಕ್‍ನಲ್ಲಿ ಸಹ ಅಪ್ ಲೋಡ್ ಮಾಡಿರುವ  ವಿಚಾರ   ತಿಳಿದ ಯುವತಿಯ  ಕುಟುಂಬಸ್ಥರು ಯುವಕನಿಗೆ ಪ್ರಶ್ನಿಸಿದ್ದಾರೆ.ಫೋಟೋವನ್ನು  ಸಾಮಾಜಿಕ ಜಾಲತಾಣದಲ್ಲಿ  ಹಾಕಿದ್ದಲ್ಲದೇ ಅಶ್ಲೀಲವಾಗಿ ಸಂದೇಶ ಕಳಿಸುವ ಮೂಲಕ ಯುವತಿಗೆ ಕಾಟ ಕೊಡುತ್ತಿದ್ದ. ವಾಟ್ಸಪ್‍ನಲ್ಲಿ ಮೆಸೇಜ್ ಮಾಡುವುದು, ಫೇಸ್‍ಬುಕ್‍ನಲ್ಲಿ ಯುವತಿಯ ಫೋಟೋ ಹಾಕಿ, ಕವನ ಬರೆಯುವುದನ್ನು ಮಾಡುತ್ತಿದ್ದ ಯುವಕನ ಚೇಷ್ಟೆಗಳ ಬಗ್ಗೆ ತಿಳಿದ ಯುವತಿ ಕುಟುಂಬಸ್ಥರು ಆತನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ ಎಂದು ತಿಳಿದುಬಂದಿದೆ.

[t4b-ticker]

You May Also Like

More From Author

+ There are no comments

Add yours