ಮ್ಯೂಸಿಕಲ್ , ಕಲರ್ ಫುಲ್ ಪಾರ್ಕ್ ಉದ್ಘಾಟಿಸಿದ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ.

 

 

ಚಿತ್ರದುರ್ಗ: ಮ್ಯೂಸಿಕ್ ಮೂಲಕ ಸಾರ್ವಜನಿಕರ ನೆಚ್ಚಿನ ವಾಕಿಂಗ್ ಮತ್ತು ಆಧುನಿಕತೆಯ ಪಾರ್ಕ್ ಆಗಿ ಯುನಿಯನ್ ಪಾರ್ಕ್ ನಿರ್ಮಾಣವಾಗಿದೆ ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಹೇಳಿದರು.

ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಪಕ್ಕದಲ್ಲಿ ನಿರ್ಮಾಣವಾಗಿರುವ ನೂತನ  ಯುನಿಯನ್ ಪಾರ್ಕ್ ಉದ್ಘಾಟಿಸಿ ಮಾತನಾಡಿದರು.

ಕಳೆದ  40-50 ವರ್ಷಗಳ ಹಿಂದೆ ಹೆಸರು ಪಡೆದಂತಹ ಪಾರ್ಕ್ ಇದು. ನಗರಕ್ಕೆ ಇದ್ದ ಏಕೈಕ ಪಾರ್ಕ್ ಇದು. ಸಂಜೆ ಸಂಗೀತ ಬರುವಂತಹ  ವ್ಯವಸ್ಥೆ 30-40 ವರ್ಷ ಹಿಂದೆ ಇತ್ತು.   ಕಳೆದ 25 ವರ್ಷಗಳಿಂದ ಹಾಳಗಿತ್ತು.  ಕೇಂದ್ರ ಸರ್ಕಾರದ ಅಮೃತ್ ಯೋಜನೆಯ 70 ಲಕ್ಷ ಮತ್ತು ನಗರಸಭೆ ವಿವಿಧ ಎಡ್ ಹಣವನ್ನು ವ್ಯಹಿಸಿ 1.60 ಕೋಟಿ ವೆಚ್ಚದಲ್ಲಿ ಪಾರ್ಕ ಮಾಡಲಾಗಿದೆ.   ಈ ಪಾರ್ಕ್ ಗೆ ಎಫ್ .ಎಂ. ಮತ್ತು ಪೆನ್ ಡ್ರೈವ್ ಮೂಲಕ ಸಂಗೀತ ಸಂಜೆ ನಡೆಯುತ್ತದೆ‌. ನಗರಸಭೆ ಸದಸ್ಯರು ಎಲ್ಲಾರೂ ರಸ್ತೆ ಮಾಡುವುದು ಅವಶ್ಯಕತೆ ಇಲ್ಲ ಎಲ್ಲ ನಗರಸಭೆ ಸದಸ್ಯರು ಬಂದಿರುವ ಹಣದಲ್ಲಿ ಪಾರ್ಕ ಅಭಿವೃದ್ಧಿ ಮಾಡಿ ಎಂದರು. ನಗರದಲ್ಲಿ ರಸ್ತೆ ಅಗಲೀಕರಣಕ್ಕೆ ಮರ ಕಡಿದಿದ್ದು ಗಿಡವನ್ನು ನೆಡುವ ವ್ಯವಸ್ಥೆ ಮಾಡಿ ಎಂದು ನಗರಸಭೆ ಸದಸ್ಯರಿಗೆ ಕಿವಿಮಾತು ಹೇಳಿದರು.

ಊರಿನ ಸೌಂದರ್ಯಕ್ಕೆ ಒತ್ತು ನೀಡುವ ಕೆಲಸ ಮಾಡುತ್ತೇವೆ. ಒಂದು ವರ್ಷದಲ್ಲಿ ಎಲ್ಲಾ ಕಾಮಗಾರಿ ಪೂರ್ಣವಾಗುವುದು ಎಂದರು.

ಬೆಳಗ್ಗೆ ಮತ್ತು ಸಂಜೆ ಎಷ್ಟು ಸಮಯ ಸಾರ್ವಜನಿಕರಿಗೆ ಪ್ರವೇಶ ಎಂದು ನಗರಸಭೆ ನಿಗದಿ ಮಾಡಬೇಕು. ಇಲ್ಲಿ ಅದಷ್ಟು ಬೇಗ ಮೊದಲು  ಶೌಚಾಲಯ ಮಾಡಿ ಎಂದರು.

ಸಾರ್ವಜನಿಕರು ಸಂಜೆಯ ಒತ್ತಿನಲ್ಲಿ ಎಲ್ಲಾ ಒತ್ತಡಗಳಿಂದ ಮುಕ್ತವಾಗಲು ಈ ಪಾರ್ಕ್ ಹೇಳಿ ಮಾಡಿಸಿದಂತಿದೆ. ಬಣ್ಣ ಬಣ್ಣದ. ಲೈಟ್ ಗಳು, ಕಾರಂಜಿ, ಕಲರ್ ಪುಲ್ ನೀರಿನದಂತೆ ಕಂಗೊಳ್ಳಿಸುತ್ತಿದೆ. ಸಾರ್ವಜನಕರು ಇಲ್ಲಿ ಸ್ವಚ್ಚತೆಯನ್ನು ಕಾಪಡಬೇಕು ಎಂದರು.

ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ, ನಗರಸಭೆ ಅಧ್ಯಕ್ಷೆ ತಿಪ್ಪಮ್ಮ, ಉಪಾಧ್ಯಕ್ಷೆ  ಶ್ವೇತ ವಿರೇಶ್,  ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಬದರಿನಾಥ್,  ನಗರಸಭೆ ಸದಸ್ಯರಾದ ರಮೇಶ್, ವೆಂಕಟೇಶ್, ನವೀನ್, ಚಂದ್ರಶೇಖರ್, ಮಲ್ಲಿಕಾರ್ಜುನ್, ಶ್ರೀನಿವಾಸ್, ಸುರೇಶ್,ಕೃಷ್ಣ, ತಿಮ್ಮಣ್ಣ, ನಾಗರಾಜ್, ಜಯಣ್ಣ, ಪೂಜಾ ಯೋಗಿ, ರಮೇಶ್ ಆಚಾರ್ಯ  ನಗರಸಭೆ ಪೌರಯುಕ್ತ ಹನುಮಂತರಾಜು,  ಮಾಜಿ ನಗರಸಭೆ ಅಧ್ಯಕ್ಷೆ ಸುನೀತಾ ಮಲ್ಲಿಕಾರ್ಜುನ್ ಇದ್ದರು.

[t4b-ticker]

You May Also Like

More From Author

+ There are no comments

Add yours