ಮೈಸೂರಲ್ಲಿ ರೋಹಿಣಿ ಸಿಂಧೂರಿ ವಾಪಸ್ಸ್ ಬರಲು ಜನ ಏನ್ ಮಾಡತ್ತಿದ್ದಾರೆ. ಅನ್ ಲೈನ್ ಸಹಿ ಆರಂಭಕ್ಕೆ ಎಷ್ಟು ಜನ ಸಹಿ ಹಾಕಿದ್ದಾರೆ ನೋಡಿ.

 

ಮೈಸೂರು:  ಮೈಸೂರು ನಗರದಲ್ಲಿ  ಭೂ ಮಾಫಿಯಾ ಆರೋಪ, ಪ್ರತ್ಯಾರೋಪಗಳು  ಕಳೆದ ವಾರದಿಂದ ಸಖತ್ ಸದ್ದು  ಮಾಡುತ್ತಿರುವಂತೆಯೇ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿಯವರನ್ನು ಮೈಸೂರು ಜಿಲ್ಲಾಧಿಕಾರಿಯಾಗಿ ಮರು ನೇಮಕ ಮಾಡಬೇಕು ಎಂದು ಆಗ್ರಹಿಸಿ ಆನ್ ಲೈನ್ ನಲ್ಲಿ ಸಹಿ ಸಂಗ್ರಹ ಅಭಿಯಾನ  ಪ್ರಾರಂಭಿಸಿ ಹೊಸದೊಂದು ತಿರುವು ಪಡೆದುಕೊಂಡಿದೆ.

ಚೇಂಜ್ ಆರ್ಗ್ ಎಂಬ ಹೆಸರಿನಡಿ ಬ್ರಿಂಗ್ ಬ್ಯಾಕ್ ರೋಹಿಣಿ ಎಂಬ ಸಹಿ ಸಂಗ್ರಹ ಅಭಿಯಾನ ಸಾಮಾಜಿಕ ಜಾಲ ತಾಣಗಳಲ್ಲಿ ಆರಂಭವಾಗಿದೆ. ಸ್ವತಃ ಈ ಅಭಿಮಾನಕ್ಕೆ  26000ಕ್ಕೂ ಹೆಚ್ಚು ಮಂದಿ ಸಹಿ ಮಾಡಿದ್ದಾರೆ ಐಎಎಸ್ ಅಧಿಕಾರಿಗಳಾದ ಶಿಲ್ಪಾ ನಾಗ್ ಮತ್ತು ರೋಹಿಣಿ ಸಿಂಧೂರಿ ಕಾಳಗ ಬೀದಿಗೆ ಬಂದ ಹಿನ್ನೆಲೆಯಲ್ಲಿ ಸರ್ಕಾರ ಇಬ್ಬರು ಅಧಿಕಾರಿಗಳನ್ನು ವರ್ಗಾವಣೆ ಮಾಡಿತ್ತು.

ಇದೀಗ ಅವರನ್ನು ವರ್ಗಾವಣೆ ಮಾಡಿರುವುದು ಅವರ ಅಭಿಮಾನಿಗಳನ್ನು ಕೆರಳಿಸಿದ್ದು ಸಿಂಧೂರಿ ಅವರನ್ನು ವಾಪಸು ಕರೆ ತರುವ ಪಯತ್ನವನ್ನು ಮಾಡುತ್ತಿದ್ದಾರೆ. ಅಭಿಮಾನಿಗಳ ಪ್ರಯತ್ನ ಎಷ್ಟರ ಮಟ್ಟಿಗೆ ಫಲ ನೀಡುವುದು ಎಂದು ಕಾಲವೇ ಉತ್ತರಿಸಲಿದೆ. ಮೈಸೂರು ಜನತೆ ಮಾತ್ರ ಮೈಸೂರು ಡಿಸಿಯಾಗಿ ಮತ್ತೆ ರೋಹಿಣಿ ಸಿಂಧೂರಿ ಬರಲಿ ಎಂಬ ಆಶಯ ಹೊಂದಿದ್ದಾರೆ.

[t4b-ticker]

You May Also Like

More From Author

+ There are no comments

Add yours