ಮೂರು ದಿನದಲ್ಲಿ ರಾಜ್ಯಗಳಿಗೆ ಎಷ್ಟು ಲಕ್ಷ ಡೋಸ್ ಕೋವಿಡ್ ಲಸಿಕೆ ಬರುತ್ತೆ ಗೊತ್ತಾ.

 

ಮೂರು ದಿನದಲ್ಲಿ ರಾಜ್ಯಕ್ಕೆ 4 ಲಕ್ಷ ಡೋಸ್ ಲಸಿಕೆ ರಾಜ್ಯಕ್ಕೆ.
ನವದೆಹಲಿ: ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಬಳಿ 1.82 ಕೋಟಿ ಡೋಸ್ ಕೋವಿಡ್ ಲಸಿಕೆಗಳಿವೆ ಎಂದು ಕೇಂದ್ರ ಸರ್ಕಾರ ಶನಿವಾರ ಹೇಳಿದೆ.
ಮೂರು ದಿನಗಳ ಒಳಗಾಗಿ ಇನ್ನೂ 4,86,180 ಡೋಸ್ ಲಸಿಕೆ ಪೂರೈಸಲಾಗುವುದು ಎಂದು ಆರೋಗ್ಯ ಇಲಾಖೆ ಸಚಿವಾಲಯ ಹೇಳಿದೆ.

ರಾಜ್ಯಗಳಲ್ಲಿ ಉಚಿತ ಲಸಿಕೆ ನೀಡಿಕೆ, ರಾಜ್ಯಗಳು ನೇರವಾಗಿ ಖರೀದಿಸುತ್ತಿರುವುದೂ ಸೇರಿ ಈವರೆಗೆ ಒಟ್ಟು 22.77 ಕೋಟಿ ಡೋಸ್ ಲಸಿಕೆ ಪೂರೈಕೆ ಮಾಡಲಾಗಿದೆ. ಈ ಪೈಕಿ ವ್ಯರ್ಥವಾಗಿರುವುದೂ ಒಳಗೊಂಡಂತೆ 20,80,09,397 ಡೋಸ್ ಬಳಕೆಯಾಗಿದೆ ಎಂದು ಸಚಿವಾಲಯ ಮಾಹಿತಿ ನೀಡಿದೆ.

ಉಚಿತ ಲಸಿಕೆ ನೀಡಿಕೆ ಅಭಿಯಾನದಡಿ ಕೇಂದ್ರವು ರಾಜ್ಯಗಳಿಗೆ ಲಸಿಕೆ ಪೂರೈಸುತ್ತಿದೆ. ಇಷ್ಟೇ ಅಲ್ಲದೆ, ನೇರವಾಗಿ ಕಂಪನಿಗಳಿಂದ ಲಸಿಕೆ ಖರೀದಿಸಲೂ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ವ್ಯವಸ್ಥೆ ಮಾಡಿಕೊಡಲಾಗುತ್ತಿದೆ ಎಂದು ಸಚಿವಾಲಯ ತಿಳಿಸಿದೆ.

[t4b-ticker]

You May Also Like

More From Author

+ There are no comments

Add yours