ಮತ್ತೊಮ್ಮೆ 2023 ಕ್ಕೆ ಬಿಜೆಪಿಯಿಂದ ಗೂಳಿಹಟ್ಟಿ ಶೇಖರ್ ಸ್ಪರ್ಧೆ ಖಚಿತ- ಗೂಳಿಹಟ್ಟಿ ಶೇಖರ್

 

ಮತ್ತೊಮ್ಮೆ 2023 ಕ್ಕೆ ಬಿಜೆಪಿಯಿಂದ ಗೂಳಿಹಟ್ಟಿ ಶೇಖರ್ ಸ್ಪರ್ಧೆ ಖಚಿತ- ಗೂಳಿಹಟ್ಟಿ ಶೇಖರ್

100ಕ್ಕೆ 100% ನಾನೇ ಬಿಜೆಪಿ ಕ್ಯಾಂಡಿಡೇಟ್. ಬಿಜೆಪಿಯಿಂದ ಟಿಕೆಟ್ ಕೊಟ್ಟೆ ಕೊಡುತ್ತಾರೆ; ಕಾರ್ಯಕರ್ತರೇ ಗೊಂದಲಕ್ಕೆ ಒಳಗಾಗಬೇಡಿ ಎಂದ ಶಾಸಕ ಗೂಳಿಹಟ್ಟಿ

ಹೊಸದುರ್ಗ : ಮತ್ತೊಮ್ಮೆ 2023 ಕ್ಕೆ ಬಿಜೆಪಿಯಿಂದ ಗೂಳಿಹಟ್ಟಿ ಶೇಖರ್ ಸ್ಪರ್ಧೆ ಮಾಡುವುದು ಖಚಿತ ಎಂದು ಶಾಸಕ ಗೂಳಿಹಟ್ಟಿ ಶೇಖರ್ ಹೇಳಿಕೆ ನೀಡಿದ್ದಾರೆ.

ರಾಜ್ಯ ಖನಿಜ ನಿಗಮ ಅಧ್ಯಕ್ಷ ಎಸ್.ಲಿಂಗಮೂರ್ತಿ ಅವರು 2023ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧೆ ಮಾಡುವುದು ಖಚಿತ ಎಂಬ ಪತ್ರಿಕಾ ಹೇಳಿಕೆ ನೀಡಿದ ಬೆನ್ನಲ್ಲೇ ಶಾಸಕ ಗೂಳಿಹಟ್ಟಿ ಶೇಖರ್ ಶನಿವಾರ ದೂರವಾಣಿ ಮುಖಾಂತರ ಪತ್ರಿಕೆಯೊಂದಿಗೆ ಮಾತನಾಡಿ, ಮುಂಬರುವ 2023ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧೆ ಮಾಡುವುದು ಖಚಿತ. ಟಿಕೆಟ್ ಸಿಗುವುದು ಕೂಡ 100ಕ್ಕೆ 100% ಸತ್ಯ. ಯಾವೊಬ್ಬ ಕಾರ್ಯಕರ್ತರು ಮತ್ತು ಅಭಿಮಾನಿಗಳು ಗೊಂದಲಕ್ಕೆ ಒಳಗಾಗಬೇಡಿ ಎಂದು ಸ್ಪಷ್ಟನೆ ನೀಡಿದ್ದಾರೆ.

ಹೊಸದುರ್ಗ ತಾಲೂಕಿನಲ್ಲಿ ಬಿಜೆಪಿ ಪಕ್ಷಕ್ಕೆ ಮತ ಹಾಕಿದ 92ಸಾವಿರ ಮತದಾರರು ಮತ್ತು ಕಾರ್ಯಕರ್ತರು ಕೂಡ ಬಿಜೆಪಿ ಟಿಕೆಟ್ ಕೇಳುವ ಅರ್ಹತೆ ಇರುವಂತವರೇ. ಗ್ರಾ.ಪಂ, ತಾ.ಪಂ ಹಾಗೂ ಜಿ.ಪಂ ಚುನಾವಣೆಯಲ್ಲಿ ಲೀಡಿಂಗ್ ನಲ್ಲಿ ಗೆದ್ದಂಥ ಸದಸ್ಯರು ಸೇರಿದಂತೆ ಸಾಮಾನ್ಯ ಬಿಜೆಪಿ ಕಾರ್ಯಕರ್ತರು ಕೂಡ ಅರ್ಹತೆ ಹೊಂದಿದವರು. ಆದರೆ ಇಲ್ಲಿ ಯಾರೋ ಒಬ್ಬ ಲೀಡರ್ ಅಲ್ಲ, ಇಲ್ಲಿ ಎಲ್ಲಾರೂ ಲೀಡರೇ, ಬಿಜೆಪಿ ಟಿಕೆಟ್ ಘೋಷಣೆ ಆಗುವ ಮುನ್ನವೇ ಯಾರೋ ಒಬ್ಬರು ಬಿಜೆಪಿ ಟಿಕೆಟ್ ನನಗೆ ಎಂದು ಹೇಳುವುದು ಸಮಂಜಸವಲ್ಲ ಎಂದು ಎಸ್.ಲಿಂಗಮೂರ್ತಿ ಅವರ ಹೆಸರು ಹೇಳದೆ ಶಾಸಕರು ಟಾಂಗ್ ನೀಡಿದ್ದಾರೆ.

ವೈಯಕ್ತಿಕ ವರ್ಚಸ್ಸಿಗೆ ಮತ ಹಾಕುವರಿದ್ದಾರೆ;

ತಾಲೂಕಿನಲ್ಲಿ ನನಗೆ ಯಾರು ಗಾಡ್ ಫಾದರ್ ಇಲ್ಲ. ನನ್ನ ವೈಯಕ್ತಿಕ ವರ್ಚಸ್ಸು ಇರುವ ಕಾರಣ 40ರಿಂದ 45 ಸಾವಿರ ಸಾಮಾನ್ಯ ಜನರು ಮತ್ತು ಎಲ್ಲಾ ಸಮಾಜದ ಜನರ ಮನಸ್ಸನ್ನು ಈಗಾಗಲೇ ಗೆದ್ದಿರುವ ಹಿನ್ನೆಲೆಗೆ ಆ ಒಂದೇ ಒಂದು ಕಾರಣಕ್ಕೆ ಜನರು ನನಗೆ ಮತ ಹಾಕಿ ಗೆಲ್ಲಿಸಿದ್ದಾರೆ. ಇನ್ನೊಬ್ಬರ ಹಂಗಲ್ಲಿ ನಾನು ಯಾವತ್ತೂ ಬಂದಿಲ್ಲ. ಹೊಸದುರ್ಗ ಜನರಲ್ ಕ್ಷೇತ್ರವಾಗಿದ್ದರೂ ಕೂಡ ಈ ಹಿಂದೆ ನನ್ನನ್ನು ಆರಿಸಿ ಗೆಲ್ಲಿಸಿದ್ದಾರೆ. ಅವರಿಗೆ ಎಂದಿಗೂ ನಾನು ಚಿರಋಣಿ. ತಾಲೂಕಿನಲ್ಲಿ ನನ್ನದೇ ಆದಂತಹ ಅಭಿಮಾನಿಗಳು ಮತ್ತು ಕಾರ್ಯಕರ್ತರನ್ನು ಹೊಂದಿದ್ದೇನೆ. ಇದನ್ನೆಲ್ಲ ಪಕ್ಷ ನೋಡಿ ನನ್ನನ್ನು ಗುರುತಿಸಲಾಗಿದೆ ಎಂದರು.

ಗೊಂದಲ ಹೇಳಿಕೆ ನಂಬಬೇಡಿ;

ತಾಲೂಕಿನ ಮತದಾರರು ಮತ್ತು ಕಾರ್ಯಕರ್ತರು ಗೊಂದಲದ ಹೇಳಿಕೆಗಳನ್ನು ನಂಬಬೇಡಿ ಎಂದು ಶಾಸಕರು ಕಿವಿ ಮಾತು ಹೇಳಿದ್ದಾರೆ. 2023ಕ್ಕೆ ಬಿಜೆಪಿಯಿಂದ ನಾನೇ ಸ್ಪರ್ಧೆ ಮಾಡುವುದು. ಪಕ್ಷದ ಸಿದ್ಧಾಂತದಲ್ಲಿ ನಾವಿದ್ದೇವೆ. ಕೇಂದ್ರ ಪ್ರಧಾನಿ ನರೇಂದ್ರ ಮೋದಿ ಆಶೀರ್ವಾದದಿಂದ, ರಾಜ್ಯದ ಸಿಎಂ ಬೊಮ್ಮಾಯಿ ನೇತೃತ್ವ ಸರ್ಕಾರದಲ್ಲಿ ನನಗೆ ಅಭೂತಪೂರ್ವ ಬೆಂಬಲವಿದೆ. ಆದ್ದರಿಂದ 100ಕ್ಕೆ 100% ನಾನೇ ಬಿಜೆಪಿ ಕ್ಯಾಂಡಿಡೇಟ್. ಬಿಜೆಪಿಯಿಂದ ಟಿಕೆಟ್ ಕೊಟ್ಟೆ ಕೊಡುತ್ತಾರೆ ಎಂಬ ಆತ್ಮವಿಶ್ವಾಸ ನನಗಿದೆ ಎಂದು ಹೇಳಿದರು.

[t4b-ticker]

You May Also Like

More From Author

+ There are no comments

Add yours