ಭೀಕರ ರಸ್ತೆ ಅಪಘಾತದಲ್ಲಿ 7 ಮಂದಿ ಸ್ಥಳದಲೇ ಸಾವು

 

ದಾವಣಗೆರೆ:- ಇಂಡಿಕಾ ಕಾರು ರಸ್ತೆ ವಿಭಜಕಕ್ಕೆ ಡಿಕ್ಕಿಯಾಗಿ ಏಳು ಜನ ಸಾವನಪ್ಪಿರುವ ಘಟನೆ ದಾವಣಗೆರೆ ಜಿಲ್ಲೆಯ ಜಗಳೂರು ತಾಲ್ಲೂಕಿನ ಕಣಕಟ್ಟೆ ಟೋಲ್ (NH 13) ರಲ್ಲಿ ಜರುಗಿದೆ.

ಈ  ಭೀಕರ ಅಪಘಾತದಲ್ಲಿ 7 ಮಂದಿ ಮೃತಪಟ್ಟಿದ್ದಾರೆ.

ರಾಷ್ಟ್ರೀಯ ಹೆದ್ದಾರಿ 13 ರಲ್ಲಿ ರಭಸವಾಗಿ ಬರುತ್ತಿದ್ದಾ ಕಾರು ಚಲಾಯಿಸುತ್ತಿದ್ದಾ ಕಾರು ಚಾಲಕ ಮದ್ಯ ಸೇವಿಸಿ ನಿದ್ದೆಗೆ ಜಾರಿದ ಪರಿಣಾಮ ಕಾರು ರಸ್ತೆ ವಿಭಜಕ್ಕೆ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ ಎಂದು ಎಸ್ಪಿ ಸಿಬಿ ರಿಷ್ಯಂತ್ ತಿಳಿಸಿದ್ದಾರೆ.

ಕಾರು ಡಿಕ್ಕಿಯಾದ ರಭಸಕ್ಕೆ ಸ್ಥಳದಲ್ಲೇ ಆರು ಜನ ಸಾವನಪ್ಪಿದ್ರೇ ಮತ್ತೋರ್ವ ಆಸ್ಪತ್ರೆಗೆ ಸಾಗಿಸುವ ವೇಳೆ ಕೊನೆಯುಸಿರೆಳೆದಿದ್ದಾನೆ. ಮೃತರ ಮಲ್ಲನ ಗೌಡ(22), ಸಂತೋಷ್(21), ಸಂಜೀವ್(20), ಜೈಭೀಮ್(18), ರಾಘು(23), ಸಿದ್ದೇಶ್(20), ವೇದಮೂರ್ತಿ(18), ಮೃತರೆಂದು ಗುರುತಿಸಲಾಗಿದೆ. ಮೃತರಲ್ಲಿ 4 ಜನ ಯಾದಗಿರಿಯ ಶಾಹಪುರದವರಾಗಿದ್ದು , 2 ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಮೂಲದವರು, 01 ವಿಜಯಪುರ ಜಿಲ್ಲೆಯ ತಾಳಿಕೋಟೆಯವನೆಂದು ತಿಳಿದುಬಂದಿದೆ.

ಮೃತದೇಹಗಳನ್ನು ಜಗಳೂರು ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಸಂಬಂಧಿಕರಿಗೆ ಮಾಹಿತಿ ನೀಡಲಾಗಿದೆ. ಇನ್ನು ಕೆಎ 51 ಡಿ 5066 ನೊಂದಣಿಯ ಇಂಡಿಕಾ ಕಾರು ಬೆಂಗಳೂರಿನಿಂದ ಹೊಸಪೇಟೆ ಕಡೆ ಹೋಗುತ್ತಿದ್ದ ವೇಳೆ ದುರಂತ ಸಂಭವಿಸಿದೆ.

ಇನ್ನು ಮಾಹಿತಿ ತಿಳಿದು ಘಟನ ಸ್ಥಳಕ್ಕೆ ದಾವಣಗೆರೆ ಎಸ್ಪಿ ಸಿಬಿ ರಿಷ್ಯಂತ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಘಟನೆ ಬೆಳಗಿನ ಜಾವ ಸಂಭವಿಸಿದ್ದು, ತಡವಾಗಿ ಬೆಳಕಿಗೆ ಬಂದಿದೆ ಎನ್ನಲಾಗಿದೆ.

[t4b-ticker]

You May Also Like

More From Author

+ There are no comments

Add yours