ಭಾವನೆಗಳ ಬಲೆಯಲ್ಲಿ ನಮ್ಮ ಯುವಕರು

 

ಭಾವನೆಗಳ ಬಲೆಯಲ್ಲಿ ನಮ್ಮ ಯುವಕರು
ಚಿತ್ರದುರ್ಗ, ಜುಲೈ05:
ಇಡೀ ಪ್ರಪಂಚ ನಿರ್ಮಾಣವಾಗಿರುವುದೆ ಮಾನವ ಶಕ್ತಿಯಿಂದ ಉತ್ಸಾಹದ ತೀವ್ರತೆಯಿಂದ ಎಂಬ ವಾಣಿಯಂತೆ ಯುವಜನ, ಯುವ ಪೀಳಿಗೆ ಇಂದು ಅನೇಕ ಸಮಸ್ಯೆಗಳಿಗೆ ಒಳಗಾಗಿ ಅವರಿಗೆ ತಿಳಿಯದೆ ಇಂದು ಅದೇಷ್ಟೋ ನೋವು ಪಡುತ್ತಿರುವುದು ಸತ್ಯದ ಮಾತು. ಯಾಕೆಂದರೆ ಇಂದಿನ ಯುಗದಲ್ಲಿ ಸಮಸ್ಯೆ ಇಲ್ಲದ ಮನುಷ್ಯ ಮತ್ತು ಯುವ ಪೀಳಿಗೆ ಇರದು. ಆದರೆ ಇಂದು ಯುವ ಮನಸ್ಸುಗಳು ಭಾವನೆಯ ಹತೋಟಿಯಲ್ಲಿರದೆ ಮನ ನೊಂದಿರುವ ಅದೇಷ್ಟೋ ಯುವಕರು ಇದ್ದಾರೆ.  ಭಾವನೆಯ ನಿರ್ವಹಣೆ ಅರಿಯದೆ ಭಾವನೆಗಳ ನೋವಿನಲ್ಲಿ ಇರುವುದು ವಿಪರ್ಯಾಸ ಎನಿಸುತ್ತದೆ.  ನಾವು ಯುವ ಮನಸ್ಸಿನ ನೋವಿನ ಭಾವನೆಗಳು ನೋಡಿದಾಗ ಇಂದು ಯುವಕರು ಅನೇಕ ರೀತಿಯ ಸಮಸ್ಯೆ ಎದುರಿಸುತ್ತಿದ್ದಾರೆ. ಅದರಲ್ಲಿ ಪ್ರೀತಿ-ಪ್ರೇಮದ ನೋವು ಸಂಬಂಧದ ನೋವು, ಸ್ನೇಹದ ನೋವು, ಮೊಸದಿಂದ ಆಗುವ ನೋವು, ನಂಬಿಕೆಯ ನೋವು, ಹೀಗೆ ಅನೇಕ ಭಾವನೆಗಳ ಜೊತೆ ಇನ್ನೊಬ್ಬ ವ್ಯಕ್ತಿ ಆ ಭಾವನೆಗಳ ಜೊತೆ ಆಟ ಆಡಿದಾಗ ಆ ನೋವು ತಡೆಯದೆ ಇಂದು ಯುವ ಪೀಳಿಗೆ ತಮ್ಮನ್ನು ತಾವೇ ಮರೆತಿರುವಂತೆ  ಆಗಿದೆ. ಜನಪದದವರ ಮಾತಿನಲ್ಲಿ ಹೇಳಬೇಕೆಂದರೆ, “ಎದ್ದೆನೆ ನನ್ನವ್ವ ಬಿದ್ದೆನೆ ನಿನ್ನ ಕಾಲ ಇದ್ದೂರಿಗೆ ನನ್ನ ಕೊಡಬೇಡ ಬರಬಾರದ ಮಾತು ಬರತಾವ” ಎಂಬ ಈ ಒಂದು ಮಾತೇ ಹೆಣ್ಣಿನ ಭಾವನೆಯನ್ನು ವ್ಯಕ್ತಪಡಿಸುತ್ತದೆ. ಹೀಗಾಗಿ ಯುವ ಮನಸ್ಸು ತನ್ನ ಭಾವನೆಗಳ ಗೊಂದಲದಲ್ಲಿ ಮುಳುಗಿ ಜೀವನದ ನಿಜರೂಪ ಕಾಣದೆ  ಪ್ರತಿಕ್ಷಣ ಜೀವನದ  ಉತ್ಸಹ ಕಳೆದುಕೊಳ್ಳುತ್ತಿರುವುದು ಅಷ್ಟೇ ಸತ್ಯದ ಮಾತಾಗಿದೆ. ಹಾಗಾಗಿ ನಮ್ಮ ನಿಮಾನ್ಸ್ ಸಂಸ್ಥೆಯು ಜೀವನ ಕೌಶಲ್ಯ ಕಾರ್ಯಕ್ರಮ ಯುವಕರಿಗೆ ಮಾದರಿಯಾಗಿ ಜೀವನಕೌಶಲ್ಯ ಮುಖಾಂತರ ಯುವಕರಿಗೆ ಸ್ವ-ಅರಿವು ಬರುವಂತೆ ಚಟುವಟಿಕೆ ಮುಖಾಂತರ ಮಾಡಿಸಿ ಭಾವನೆಗಳ ನಿರ್ವಹಣೆ ಹೇಗೆ ಮಾಡಿಕೊಳ್ಳಬೇಕು ಒತ್ತಡ ನಿರ್ವಹಣೆ ಸಂವಹನದ ಕೌಶಲ್ಯ ಹೇಗೆ ಇರಬೇಕು ಸಮಸ್ಯೆಗೆ ಪರಿಹಾರ ಹುಡುಕಿಕೊಳ್ಳುವುದು ವಿಮರ್ಶಾತ್ಮಕ ಚಿಂತನೆ ಹೇಗೆ ಮಾಡಬೇಕು ಹೀಗೆ ಅನೇಕ ಜೀವನಕೌಶಲ್ಯದ ಹತ್ತು ಹಲವಾರು ಚಟುವಟಿಕೆಗಳನ್ನು ಮಾಡಿಸಿ ಯುವ ಮನಸ್ಸುಗಳನ್ನು ಪರಿವರ್ತನೆ ಮಾಡುವ  ಮಹೊನ್ನತ ಕಾರ್ಯ ಜೀವನಕೌಶಲ್ಯ ಮಾಡುತ್ತಿದೆ. ಸ್ವಾಮಿ ವಿವೇಕಾನಂದ ಅವರ ವಾಣಿಯಂತೆ ನಿಷೇಧಾತ್ಮಕ ಶಿಕ್ಷಣ, ನಿಷೇಧಾತ್ಮಕ ಭಾವನೆಗಳನ್ನು ಆದರಿಸಿದ ಯಾವುದೇ ತರಗತಿಯಾಗಲಿ ಅದು ಮೃತ್ಯುವಿಗಿಂತಲು ಹೀನ ಎಂಬ ಮಾತಿನಂತೆ ಇಂದು ನಿಮಾನ್ಸ್ ಸಂಸ್ಥೆ ಯುವಕರ ಬಾಳಿಗೆ ದೀಪವಾಗಿ ಮತ್ತು ಜೀವನಕ್ಕೆ ದಾರಿಯಾಗಿ ನಿಮಾನ್ಸ್ ಎಪಿಡಿಮಿಯಾಲಜಿ ಸಂಸ್ಥೆ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಂಯೋಗದಲ್ಲಿ ಇಂದು ಯುವಕರಿಗಾಗಿ ಜೀವನಕೌಶಲ್ಯವು ಕರ್ನಾಟಕ ರಾಜ್ಯದಾದ್ಯಂತ ಎನ್.ಎಸ್.ಎಸ್.

ಅಧಿಕಾರಿಗಳಿಗೆ ಚಟುವಟಿಕೆಯ ತರಬೇತಿ ನೀಡಿ ಇಂದು ಅವರ ಮುಖಾಂತರ ಯುವಕರಿಗೆ ವಿದ್ಯಾರ್ಥಿಗಳಿಗೆ ಕರ್ನಾಟಕದಲ್ಲಿ ಜೀವನಕೌಶಲ್ಯದ ಅಭಿವೃದ್ಧಿ ಮತ್ತು ಯುವ ಪರಿವರ್ತನೆಗೆ ದಾರಿಯಾಗಿರುವ ಕೆಲಸ ಮಾಡುತ್ತಿದ್ದು ನೊಂದ ಯುವ ಮನಸ್ಸುಗಳಿಗೆ ಸ್ಪೂರ್ತಿಯಾಗಿ ಅವರ ಬಾಳಲ್ಲಿ ಹೊಸ ಚೈತನ್ಯ ಕೊಡುತ್ತಿರುವ ಯುವ ಸ್ಪಂದನ ಮತ್ತು ಜೀವನಕೌಶಲ್ಯ ಕಾರ್ಯ ಹೀಗೆ ಭಾರತದಾದ್ಯಂತ  ರಾರಾಜಿಸುತ್ತಿರಲಿ ಎಂಬ ಆಸೆಯೇ ಯುವ ಪೀಳಿಗೆಯದು.
-ಸಲೀಂ ಯಾದಗಿರಿ
ಕ್ಷೇತ್ರ ಸಂಪರ್ಕ ಅಧಿಕಾರಿ
ನಿಮ್ಹಾನ್ಸ್ ಬೆಂಗಳೂರು
ಮೊ.ನಂ.8546869166, 7892009669
======

[t4b-ticker]

You May Also Like

More From Author

+ There are no comments

Add yours