ಪರಿಶಿಷ್ಟರೆಲ್ಲ ಒಡೆದ ಮನಸ್ಸುಗಳ ಒಟ್ಟುಗೂಡಿಸಿ ಒಗ್ಗಟ್ಟಿನ ಮಂತ್ರ ಜಪಿಸೋಣ

 

 

 

 

ಚಿತ್ರದುರ್ಗ

ಒಡೆದ ಮನಸ್ಸುಗಳಿಗೆ ಪರಿವರ್ತನೆ ತಂದು ಒಗ್ಗಟ್ಟಿನ ಮಂತ್ರದಿಂದ ಸ್ವಾಭಿಮಾನಪರಿಶಿಷ್ಟರ ಕಲ್ಯಾಣ ಮಾಡೋಣ ಎಂದು ಶ್ರೀ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ ತಿಳಿಸಿದರು.

ನಗರದ ಎಸ್‍ಎಸ್‍ಕೆಎಸ್ ಸಮುದಾಯ ಭವನದಲ್ಲಿ ಭಾನುವಾರ ಸ್ವಾಭಿಮಾನಿ ಎಸ್ ಸಿ/ಎಸ್ ಟಿ ಸಂಘಟನೆಗಳ ಒಕ್ಕೂಟದಿಂದ ಎಸ್‍ಸಿ/ಎಸ್ ಟಿ ಸಮುದಾಯದ ಎಲ್ಲಾ ಪರಮಪೂಜ್ಯ ಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ ಆಯೋಜಿಸಿದ್ದ ಎಸ್‍ಸಿ/ಎಸ್ ಟಿಗಳು ಏಕೆ ಒಂದಾಗಬೇಕು? ಎಂಬ ವಿಚಾರ ಸಂಕಿರಣದಲ್ಲಿ ದಿಕ್ಸೂಚಿ ಭಾಷಣ ಮಾಡಿದರು.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಸಮುದಾಯಗಳು ಈ ಹಿಂದೆ ಭೂಮಿಯನ್ನು ಆಳಿದವರು. ಕಾಲಾಂತರದಲ್ಲಿ ಅಧಿಕಾರ ಅಂತಸ್ತು ಹಾಗೂ ಭೂಮಿಯನ್ನು ಕಳೆದುಕೊಂಡಿದ್ದೆವೆ. ಆದರೆ ಜಾಗೃತಿ ಅರಿವು ಇದರಿಂದ ಮತ್ತೆ ಪಡೆಯಬಹುದು. ಇದು ಒಗ್ಗಟ್ಟಿನಿಂದ ಮಾತ್ರ ಸಾಧ್ಯ. ಒಡೆದ ಮನಸ್ಸುಗಳಿಗೆ ಪರಿವರ್ತನೆ ತಂದು ಒಗ್ಗಟ್ಟಿನ ಮಂತ್ರದಿಂದ ಸ್ವಾಭಿಮಾನ ಪರಿಶಿಷ್ಟರ ಕಲ್ಯಾಣ ಮಾಡೋಣ ಎಂದು ಕರೆ ನೀಡಿದರು.

ಪರಿಶಿಷ್ಟ ಜಾತಿ 101 ಉಪಜಾತಿಗಳು ಹಾಗೂ ಪರಿಶಿಷ್ಟ ಪಂಗಡದ 50 ಕ್ಕಿಂತಲೂ ಹೆಚ್ಚು ಉಪಜಾತಿಗಳಲ್ಲಿ ಪ್ರತ್ಯೇಕ ಅಂತರಿಕ ಅಂಜೆಡಾಗಳಿವೆ. ಅದನ್ನು ಬದಗಿರಿಸಿ, 150 ಕ್ಕೂ ಹೆಚ್ಚು ಜಾತಿಗಳು ಒಗ್ಗೂಡುವ ಅಂಜೆಡಾ ಜೊತೆ ಸಾಗೋವ ವಿಚಾರ ಬಂದಾಗ ಅದರೊಂದಿಗೆ ಸಾಗೋಣ ಎಂದರು.

ಒಡೆದಾಳುವ ನೀತಿಗೆ ಒಳಗಾಗಿರುವ ನಾವು ಒಂದಾಗುವ ಅನಿವಾರ್ಯ ಕಾಲದಲ್ಲಿ ಇದ್ದೇವೆ. ನಮ್ಮ ಬಲಿಷ್ಠ ಸ್ವಾಭಿಮಾನ ಸಮಾಜ ನಿರ್ಮಿಸೋಣ ಎಂದು ತಿಳಿಸಿದರು.

ಭೋವಿ ಗುರುಪೀಠಾಧ್ಯಕ್ಷರಾದ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಮಾತನಾಡಿ, ಪರಿಶಿಷ್ಟರ ಒಗ್ಗಟ್ಟು ಭವಿಷ್ಯದ ಗೌರವದ, ಘನತೆಯ, ಸ್ವಾಭಿಮಾನದ ಭಾರತ ಕಟ್ಟುವಂತಾಗಬೇಕು ಎಂದು ಹೇಳಿದರು.

ಪರಿಶಿಷ್ಟರ ಬದುಕು ಅತಂತ್ರವಾಗಿದೆ. ಅವರಿಗೆ ಸ್ವಾತಂತ್ರ್ಯ ಬಂದು ಏಳು ದಶಕಗಳನ್ನು ಕಳೆದಿದ್ದರು, ಶಿಕ್ಷಣ, ಆರೋಗ್ಯ, ವಸತಿ ಪಡೆಯಲು ಪರಿತಪ್ಪಿಸುತ್ತಿದ್ದಾರೆ. ಇಂತಹ ಪರಿಸ್ಥಿತಿಯಿಂದ ಹೊರಬರಬೇಕಾದರೆ ಒಗ್ಗಟ್ಟಾಗಿ ಹೋರಾಟ ರೂಪಿಸಬೇಕಾಗಿದೆ. ಆದ ಕಾರಣ ನಮ್ಮ ಹಕ್ಕುಗಳನ್ನು ಪಡೆಯಲು ಒಂದಾಗಿ ಸಂಘಟಿತರಾಗೋಣ. ಅಂಬೇಡ್ಕರ್ ಕೊಟ್ಟ ಆತ್ಮ ನಿರೀಕ್ಷಣೆಗಾಗಿ ಒಗ್ಗಟ್ಟಾಗಿ ಹೋರಾಟ ನಿರ್ಮಿಸಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಅಧ್ಯಕ್ಷತೆವಹಿಸಿದ್ದ ವಾಲ್ಮೀಕಿ ಗುರುಪೀಠದ ಜಗದ್ಗುರು ಶ್ರೀ ವಾಲ್ಮೀಕಿ ಪ್ರಸನ್ನಾನಂದಪುರಿ ಸ್ವಾಮೀಜಿ ಮಾತನಾಡಿ, ಎಸ್‍ಸಿ/ಎಸ್‍ಟಿ ರೈತರು ರಾಜ್ಯದಾದ್ಯಂತ 7 ಲಕ್ಷ ಎಕರೆಗಳಿಗಿಂತ ಹೆಚ್ಚಿನ ಜಮೀನಿನಲ್ಲಿ ಮಾಡುತ್ತಿರುವ ಅಕ್ರಮ ಸಾಗುವಳಿಯನ್ನು ಸಕ್ರಮಗೊಳಿಸಬೇಕು. ಬೆಂಗಳೂರು ನಗರದ ಸುತ್ತಲೂ ಇರುವ 18 ಕಿ.ಮೀ. ವ್ಯಾಪ್ತಿಯೊಳಗೆ ಬರುವ ಜಮೀನಿನಲ್ಲಿ ಎಸ್ಸಿ/ ಎಸ್‍ಟಿಗಳು ಮಾಡುತ್ತಿರುವ ಬಗರ್‍ಹುಕುಂ ಸಾಗುವಳಿಯನ್ನು ಸಕ್ರಮಗೊಳಿಸಿ 2022 ಏಪ್ರಿಲ್ 14 ರೊಳಗೆ ಹಕ್ಕುಪತ್ರಗಳನ್ನು ನೀಡಬೇಕು ಎಂದು ಆಗ್ರಹಿಸಿದರು.

ಎಸ್‍ಸಿ/ಎಸ್‍ಟಿಗಳಿಗೆ ಸೇರಿದ ಅಲ್ಪಸ್ವಲ್ಪ ಜಮೀನನ್ನು ರಕ್ಷಿಸಲು ಕಾನೂನಿಗೆ ಸೂಕ್ತ ತಿದ್ದುಪಡಿ ತರಬೇಕು.
ಭೂಹೀನ ಕೃಷಿಕಾರ್ಮಿಕರಾಗಿ ದುಡಿಯುತ್ತಿರುವ ಎಲ್ಲಾ ಎಸ್‍ಸಿ/ಎಸ್‍ಟಿ ರೈತರಿಗೆ ಕನಿಷ್ಠ ಮೂರು ಎಕರೆ ಜಮೀನನ್ನು ಆದಷ್ಟು ಶೀಘ್ರವಾಗಿ ನೀಡಬೇಕು. ಎಸ್‍ಸಿ/ಎಸ್‍ಟಿ ಮೀಸಲಾತಿ ಕಾಯಿದೆಯನ್ನು ಜಾರಿಗೆ ತಂದು, ಮೀಸಲಾತಿಯನ್ನು ರಕ್ಷಿಸಬೇಕು ಮತ್ತು ಮೀಸಲಾತಿಯನ್ನು ಉಲ್ಲಂಭಿಸುವ ಜಾತಿವಾದಿಗಳನ್ನು ಉಗ್ರವಾಗಿ ಶಿಕ್ಷಿಸಬೇಕು ಎಂದು ಒತ್ತಾಯಿಸಿದರು.

ಎಸ್‍ಸಿ/ಎಸ್‍ಟಿ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಪ್ರಮಾಣವನ್ನು ಕ್ರಮವಾಗಿ ಪರಿಶಿಷ್ಟ ಜಾತಿಗೆ ಶೇ. 15 ರಿಂದ ಶೇ. 17ಕ್ಕೆ ಮತ್ತು ಪರಿಶಿಷ್ಟ ವರ್ಗಕ್ಕೆ ಶೇ.3 ರಿಂದ ಶೇ. 7ಕ್ಕೆ ಹೆಚ್ಚಿಸಿ ಎಂದು ಶಿಫಾರಸ್ಸು ಮಾಡಿರುವ ನಾಗಮೋಹನದಾಸ್ ಆಯೋಗದ ವರದಿಯನ್ನು ಏಪ್ರಿಲ್ 14, 2022ರೊಳಗೆ ಅಂಗೀಕರಿಸಿ, ಅಧಿಸೂಚನೆ ಹೊರಡಿಸಬೇಕು. ಕೊವಿಡ್ ಪಿಡುಗಿನಿಂದ ಮರಣಹೊಂದಿದ ಎಸ್‍ಸಿ/ಎಸ್‍ಟಿ ಕುಟುಂಬಗಳಿಗೆ ತಲಾ ರೂ. 10 ಲಕ್ಷ ಪರಿಹಾರ ಕೂಡಲೇ ನೀಡಬೇಕು.

ಪೌರಕಾರ್ಮಿಕರು ಮಾಡುವ ಕೆಲಸಗಳು ಅಗತ್ಯ ಸೇವೆಯ ವ್ಯಾಪ್ತಿಯಲ್ಲಿ ಬರುವುದರಿಂದಾಗಿ, ಅವರ ಕೆಲಸಗಳನ್ನು ಕೂಡಲೇ ಖಾಯಂಗೊಳಿಸಬೇಕು. ಎಸ್‍ಸಿ/ಎಸ್‍ಟಿ ಮೀಸಲಾತಿಯನ್ನು ಎಲ್ಲಾ ಸರ್ಕಾರಿ ನೌಕರಿಗಳಲ್ಲಿ ಪೂರ್ಣಪ್ರಮಾಣದಲ್ಲಿ ಭರ್ತಿ ಮಾಡುವುದು ಮಾತ್ರವಲ್ಲದೆ, ಪ್ರತಿಯೊಂದು ಶ್ರೇಣಿಯಲ್ಲೂ “ಮೀಸಲಾತಿ ಪ್ರಮಾಣ’ವನ್ನು ಜಾರಿ ಮಾಡಬೇಕು.

 

 

ಮಹಾನಗರ ಪಾಲಿಕೆ, ನಗರಸಭೆ ಮತ್ತು ಪುರಸಭೆಗಳ ಗುತ್ತಿಗೆ ಕಾಮಗಾರಿ ಮತ್ತು ಟೆಂಡರ್‍ಗಳಲ್ಲಿ ಹಾಗೂ ಸರ್ಕಾರದ 34 ಇಲಾಖೆಗಳಿಗೆ ಬೇಕಾದ ಎಲ್ಲಾ ಸಾಮಗ್ರಿಗಳನ್ನು ಖರೀದಿಸುವ ಮತ್ತು ಸರಬರಾಜು ಮಾಡುವುದರಲ್ಲಿ ಎಸ್‍ಸಿ/ಎಸ್‍ಟಿಗಳಿಗೆ ಶೇ. 24.1 ರಷ್ಟು ಮೀಸಲಾತಿ ನೀಡಬೇಕು.

ವಿದ್ಯಾವಂತ-ನಿರುದ್ಯೋಗಿ ಎಸ್‍ಸಿ/ಎಸ್‍ಟಿಗಳಿಗೆ ತಿಂಗಳಿಗೆ ರೂ. 10,000/- ನಿರುದ್ಯೋಗಿ ಭತ್ಯೆಯನ್ನು ನೀಡುವಂತೆ ಆದೇಶ ಹೊರಡಿಸಬೇಕು. ಸರ್ಕಾರಿ ಕಂಪನಿಗಳೆಲ್ಲವೂ ತೀವ್ರವಾಗಿ ಖಾಸಗೀಕರಣಗೊಳ್ಳುತ್ತಿರುವುದರಿಂದಾಗಿ, ಖಾಸಗಿ ಕ್ಷೇತ್ರದಲ್ಲೂ ಎಸ್‍ಸಿ/ಎಸ್‍ಟಿಗಳಿಗೆ ಮೀಸಲಾತಿಯು ಜಾರಿಯಾಗುವಂತೆ ಶೀಘ್ರವೇ ಆದೇಶ ಹೊರಡಿಸಬೇಕು.

ಎಸ್‍ಸಿ/ಎಸ್‍ಟಿಗಳ ಹೆಸರಿನಲ್ಲಿ ನಕಲಿ ಸರ್ಟಿಫಿಕೇಟ್ ಪಡೆದು ನೌಕರಿ ಪಡೆದಿರುವವರ ಇತರ ಜಾತಿಗಳ ವಿರುದ್ಧ ಕಠಿಣ ಕ್ರಮಕೈಗೊಂಡು, ದಂಡ ಮತ್ತು ಉಗ್ರಶಿಕ್ಷೆ ವಿಧಿಸಬೇಕು. ಇಲ್ಲಿಯತನಕ ಅವರು ಅನುಭವಿಸಿರುವ ಸೌಲಭ್ಯ, ಸಂಬಳ, ಇತ್ಯಾದಿಗಳನ್ನು ವಾಪಸ್ಸು ಪಡೆಯಬೇಕು. ಮುಂದೆ, ಇಂತಹ ವಂಚನೆಗಳು ನಡೆಯದಂತೆ ಉಗ್ರ ಕ್ರಮ ಕೈಗೊಳ್ಳಬೇಕು.

ಎಸ್‍ಸಿ/ಎಸ್‍ಟಿಗಳ ಅಭಿವೃದ್ಧಿಗಾಗಿ ಪ್ರತಿವರ್ಷ ಮಂಜೂರು ಮಾಡಲಾಗುವ ನಿಧಿಯನ್ನು ಯಾವುದೇ ಚರ್ಚೆಯಿಲ್ಲದೆ 7ಡಿ ಕಾಯಿದೆಯಡಿಯಲ್ಲಿ ಇತರೆ ಬಾಯ್ತುಗಳಿಗೆ ವಿನಿಯೋಗಿಸಲಾಗುತ್ತಿದೆ. ಈ ಅನ್ಯಾಯವನ್ನು ಕೂಡಲೇ ಸರಿಪಡಿಸುವ ಸಲುವಾಗಿ, 7ಡಿ ಕಾಯಿದೆಯನ್ನು ರದ್ದುಪಡಿಸಬೇಕು. ಮತ್ತು ಎಸ್‍ಸಿ/ಎಸ್‍ಟಿಗಳಿಗಾಗಿ ನಿಗಧಿಯಾಗುವ ನಿಧಿಯನ್ನು ಅವರಿಗಾಗಿಯೇ ಕಡ್ಡಾಯವಾಗಿ ವಿನಿಯೋಗಿಸಬೇಕು.

ಎಸ್‍ಸಿ/ಎಸ್‍ಟಿಗಳಲ್ಲಿ ಯಶಸ್ವೀ ಉದ್ಯಮಿಗಳನ್ನು ಬೆಳೆಸುವ ಸಲುವಾಗಿ, ಎಸ್‍ಸಿ/ ಎಸ್‍ಟಿ ಯುವಕ/ಯುವತಿಯರಿಗೆ ಸೂಕ್ತ ತರಬೇತಿ, ಬಡ್ಡಿರಹಿತ ಬಂಡವಾಳ ಮತ್ತು ಮಾರುಕಟ್ಟೆ ವ್ಯವಸ್ಥೆಯನ್ನು ಮಾಡಿಕೊಡುವಂತಹ ಯೋಜನೆಗಳನ್ನು ರೂಪಿಸಬೇಕು. ಸಿಆರ್‍ಇ ಸೆಲ್‍ಗೆ ದೂರುಗಳನ್ನು
ದಾಖಲಿಸುವ ಅಧಿಕಾರ ನೀಡಬೇಕು ಮತ್ತು ಸಿಆರ್‍ಇ ಸೆಲ್‍ಗೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಪೊಲೀಸ್ ವರಿμÁ್ಠಧಿಕಾರಿಗಳ ಕಛೇರಿಗಳನ್ನು ತೆರೆಯಬೇಕು.

ಎಸ್‍ಸಿ/ಎಸ್‍ಟಿಗಳು ಅತ್ಯಂತ ಅಲ್ಪಸಂಖ್ಯಾತರಾಗಿರುವ ಹಾಗೂ ಅಸುರಕ್ಷಿತರಾಗಿರುವ ಜಾಗಗಳ ಬಗ್ಗೆ ಅಧ್ಯಯನ ನಡೆಸಿ, ಅಂತಹ ಸಮುದಾಯಗಳನ್ನು ಪ್ರತ್ಯೇಕ ಜಾಗಗಳಲ್ಲಿ ನೆಲೆಗೊಳಿಸಿ, ಅವರುಗಳಿಗೆ ವಸತಿ, ಶಾಲೆ ಮತ್ತು ಕೃಷಿ ಭೂಮಿಯನ್ನು ಮಂಜೂರು ಮಾಡಬೇಕು. ಸರ್ಕಾರದ ನೌಕರಿಗಳನ್ನು ಕಂಟ್ರಾಕ್ಸ್ ಮತ್ತು ಹೊರಗುತ್ತಿಗೆ ನೀಡುವುದನ್ನು ರದ್ದುಪಡಿಸಿ, ಅವುಗಳನ್ನು ಖಾಯಂ ಹುದ್ದೆಗಳನ್ನಾಗಿ ಪರಿವರ್ತಿಸಿ, ಎಸ್‍ಸಿ/ಎಸ್‍ಟಿಗಳಿಗೆ ಕಾನೂನು ರೀತಿ ಮೀಸಲಾತಿ ನೀಡಬೇಕು.

ಸರ್ಕಾರಿ / ಅರೆ ಸರ್ಕಾರಿ / ಸ್ಥಳೀಯ ಸಂಸ್ಥೆಗಳಲ್ಲಿ ಹಿಂಬಾಕಿಯಾಗಿ ಉಳಿದಿರುವ ಎಲ್ಲಾ ಎಸ್‍ಸಿ/ಎಸ್‍ಟಿ ನೌಕರಿಗಳನ್ನು ಡಿಸೆಂಬರ್ 6, 2021ರೊಳಗೆ ಪೂರ್ಣವಾಗಿ ಭರ್ತಿಮಾಡಬೇಕು. ದಿನಗೂಲಿ ಕ್ಷೇಮಾನಿಧಿ ನೌಕರರಲ್ಲಿ 12000 ನೌಕರರಿದ್ದು, ಎಸ್‍ಸಿ/ಎಸ್‍ಟಿ ಪ್ರಾತಿನಿಧ್ಯ ತೀರ ಕಡಿಮೆ ಇದೆ. ಬ್ಯಾಕ್‍ಲಾಗ್ ಹುದ್ದೆ ತುಂಬುವಾಗ ಮೀಸಲಾತಿ ನಿಯಮವನ್ನು ಜಾರಿಮಾಡಿ ಎಸ್‍ಸಿ/ಎಸ್‍ಟಿಗಳನ್ನು ನೇಮಿಸಬೇಕು.

ಜಾತಿಯ ಕಾರಣದಿಂದಾಗಿ ಎಸ್‍ಸಿ/ಎಸ್‍ಟಿ ವರ್ಗದವರಿಗೆ ಬಾಡಿಗೆ ಮನೆ ಸಿಗುವುದು ಕಠಿಣವಾಗಿರುವುದರಿಂದ, ಎಲ್ಲಾ ಸರ್ಕಾರಿ ವಸತಿ ಗೃಹದಲ್ಲಿ ಎಸ್‍ಸಿ/ಎಸ್‍ಟಿಗೆ 24.1% ಮೀಸಲಾತಿ ಅನ್ವಯವಾಗುವಂತೆ ಆದೇಶ ಹೊರಡಿಸಬೇಕು. ಮುಂದಿನ 2022-23ರ ಬಜೆಟ್‍ನಲ್ಲಿ ಎಸ್‍ಸಿ/ಎಸ್‍ಟಿ/ಓಬಿಸಿ/ ಅಲ್ಪಸಂಖ್ಯಾತರನ್ನೊಳಗೊಂಡ 16 ನಿಗಮಗಳಿಗೆ ತಲಾ ರೂ.500 ಕೋಟಿಗಳ ಅನುದಾನವನ್ನು ಮಂಜೂರು ಮಾಡಬೇಕು. ಅದೇ ಬಜೆಟ್‍ನಲ್ಲಿ ಅಲೆಮಾರಿ, ಅರೆಅಲೆಮಾರಿ ಮತ್ತು ಬುಡಕಟ್ಟು ಜನರಿಗಾಗಿ ಪ್ರತ್ಯೇಕ ನಿಗಮವನ್ನು ಸ್ಥಾಪಿಸಿ, ರೂ.500 ಕೋಟಿಗಳ ಅನುದಾನವನ್ನು ಮಂಜೂರು ಮಾಡಬೇಕು.

ಎಸ್‍ಸಿ/ಎಸ್‍ಟಿ ಯುವಕ/ಯುವತಿಯರಲ್ಲಿ ಕ್ರೀಡೆಗಳಿಗೆ ಬೇಕಾದ ಸಹಜ ಸಾಮಥ್ರ್ಯ ಮತ್ತು ದೈಹಿಕ ದಾಡ್ರ್ಯತೆಯಿದ್ದರೂ ಸೂಕ್ತ ತರಬೇತಿ ಮತ್ತು ಅವಕಾಶಗಳು ಇಲ್ಲದಿರುವುದರಿಂದಾಗಿ, ಅವರ ಪ್ರತಿಭೆಯು ಬೆಳಕಿಗೆ ಬರುತ್ತಿಲ್ಲ. ಇದು ರಾಜ್ಯಕ್ಕೆ ಮತ್ತು ದೇಶಕ್ಕೆ ಆಗುತ್ತಿರುವ ಬಲು ದೊಡ್ಡ ನಷ್ಟವಾಗಿದೆ. ಇದನ್ನು ಸರಿಪಡಿಸಲು ಎಸ್‍ಸಿ/ ಎಸ್‍ಟಿಗಳಿಗೆ ಸರ್ಕಾರದ ವತಿಯಿಂದ ಸೂಕ್ತ ತರಬೇತಿ ಮತ್ತು ಅವಕಾಶಗಳನ್ನು ನೀಡಬೇಕು ಎಂದು ಒತ್ತಾಯಿಸಿದರು.

ದಲಿತ ಮುಖಂಡರಾದ ವೆಂಕಟಸ್ವಾಮಿ ಉಪನ್ಯಾಸ ನೀಡಿದರು. ಛಲವಾದಿ ಗುರುಪೀಠದ ಪೂಜ್ಯ ಶ್ರೀ ಬಸವ ನಾಗೀದೇವ ಸ್ವಾಮೀಜಿ ನಿರೂಪಿಸಿದರು. ಮೇದಾರ ಗುರುಪೀಠದ ಶ್ರೀ ಇಮ್ಮಡಿ ಬಸವ ಕೇತೇಶ್ವರ ಸ್ವಾಮೀಜಿ ಸ್ವಾಗತಿಸಿದರು. ಭೋವಿ ಗುರುಪೀಠದ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಹಾಗೂ ಬಂಜಾರ ಗುರುಪೀಠದ ಶ್ರೀ ಸರ್ದಾರ್ ಸೇವಾಲಾಲ್ ಸ್ವಾಮೀಜಿ ಉಪಸ್ಥಿತರಿದ್ದರು.

ನಾಯಕ ಸಮಾಜದ ಮಾಜಿ ನಗರಸಭೆ ಅಧ್ಯಕ್ಷ  ಬಿ.ಕಾಂತರಾಜ್, ಜಿ.ಕೆ.ಕೃಷ್ಣಮೂರ್ತಿ, ಜಲ್ಲಿ ವೆಂಕಟೇಶ್ , ತಿಪ್ಪೇಸ್ವಾಮಿ, ಕೆ.ಟಿ.ಕುಮಾರಸ್ವಾಮಿ, ಹರ್ತಿಕೋಟಿ ವೀರೇಂದ್ರ ಸಿಂಹ, ಅಳವದರ ತಿಪ್ಪೇಸ್ವಾಮಿ, ನಿಂಗವ್ವನಾಗತಿಹಳ್ಳಿ ತಿಪ್ಪೇಸ್ವಾಮಿ, ಹೊದಿಗೆರೆ ರಮೇಶ, ಲಿಂಗಾನಾಯಕನಹಳ್ಳಿ ತಿಪ್ಪೇಸ್ವಾಮಿ,

ಸಿಳ್ಳೇಕ್ಯಾತಾ ಸಮಾಜದ ತ್ಯಾಗರಾಜ್, ಶಿವಪ್ಪ, ಚನ್ನದಾಸರ ಸಮಾಜದ ಕಮಲಹಾಸನ್, ಬುಡ್ಗ ಜಂಗಮ ಗುರುಮೂರ್ತಿ, ಸುಡುಗಾಡು ಸಿದ್ಧರ ಸಮಾಜದ ನಾಗರಾಜ್, ಕೊರಚ ಸಮಾಜದ ಧನಂಜಯ್
ಮೇದಾರ ಸಮಾಜದ ಪಾಟೀಲ್  ಮಾರಸಂದ್ರ ಮುನಿಯಪ್ಪ, ಡಾ.ಎನ್.ಮೂರ್ತಿ, ಪಿ.ಮೂರ್ತಿ, ಬಸವರಾಜ ನಾಯ್ಕ, ಭರತ್ ಎಂ ಮಗದೂರು, ಗೋಪಿನಾಥ, ಭೋವಿ ಸಮಾಜದ ರಾಜ್ಯಾಧ್ಯಕ್ಷರಾದ ಹೆಚ್ ಆನಂದಪ್ಪ. ಯಶೋಧಮ್ಮ , ಎಸ್.ಸಿ-ಎಸ್.ಟಿ ಅಲೆಮಾರಿ ವಿಮುಕ್ತ ಬುಡಕಟ್ಟು ಮಹಾಸಭಾದ ಆದರ್ಶ ಯಲ್ಲಪ್ಪ, ಅಖಿಲ ಕರ್ನಾಟಕ ಕುಳುವ ಸಂಘದ ಆನಂದ ಕುಮಾರ್ ಏಕಲವ್ಯ, ಕಮ್ಮಾರ ಬುಡಕಟ್ಟು ಮಹಾಸಭಾದ ಸಿದ್ದಪ್ಪಾಜಿ ಇತರರು ಭಾಗವಹಿಸಿದ್ದರು.

[t4b-ticker]

You May Also Like

More From Author

+ There are no comments

Add yours