ಆರೋಗ್ಯ ಸಂಜೀವಿನಿ ಯೋಜನೆ ಅನುಷ್ಠಾನಗೊಳಿಸಲು ಆನ್ಲೈನ್ ಲಿಂಕ್ ಬಳಸಿ ನಿಖರ ಮಾಹಿತಿ ನೀಡಿ: ಜಿಲ್ಲಾಧ್ಯಕ್ಷ ಕೆ.ಮಂಜುನಾಥ

 

 

ಕರ್ನಾಟಕ ರಾಜ್ಯ ಆರೋಗ್ಯ ಸಂಜೀವಿನಿ ಯೋಜನೆ ಅನುಷ್ಠಾನಗೊಳಿಸಲು ಆನ್ಲೈನ್ ಲಿಂಕ್ ಬಳಸಿ ನಿಖರ ಮಾಹಿತಿ ನೀಡಲು ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷರಾದ ಕೆ ಮಂಜುನಾಥರವರು ಕರೆ ನೀಡಿದ್ದಾರೆ.

ಕರ್ನಾಟಕ ರಾಜ್ಯ ಸರ್ಕಾರಿ ನೌಕರರು ಹಾಗೂ ಅವರ ಅವಲಂಬಿತರಿಗೆ ಸರ್ಕಾರಿ ನೌಕರರ ಬಹುದಿನದ ಬೇಡಿಕೆಯಾದ ಉಚಿತ ನಗದು ರಹಿತ ಚಿಕಿತ್ಸೆ ನೀಡುವ *ಕರ್ನಾಟಕ ರಾಜ್ಯ ಆರೋಗ್ಯ ಸಂಜೀವಿನಿ ಯೋಜನೆ* ಅನುಷ್ಠಾನಗೊಳಿಸಲು ONLINE ಲಿಂಕ್ ಬಳಸಿ ನೌಕರರು-ಅಧಿಕಾರಿಗಳು ನಿಖರ ಮಾಹಿತಿಯನ್ನು ಸೆಪ್ಟೆಂಬರ್ 30 ರೊಳಗೆ ONLINE ಮೂಲಕ ಸಲ್ಲಿಸುವಂತೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಷಡಕ್ಷರಿ ಅವರು ಮನವಿ ಮಾಡಿದ್ದಾರೆ. ಹಾಗೂ ಈ ಸಂಬಂಧ ನೌಕರರ ಸಂಘದ ಎಲ್ಲಾ ಜಿಲ್ಲಾಧ್ಯಕ್ಷರು ಗಳು ಆನ್ ಲೈನ್ ಮೂಲಕ ಮಾಹಿತಿ ಅಪ್ಡೇಟ್ ಮಾಡಲು ಜಿಲ್ಲೆಯ ಮತ್ತು ತಾಲ್ಲೂಕು ಅಧ್ಯಕ್ಷರುಗಳು, ಚುನಾಯಿತ ಪ್ರತಿನಿಧಿಗಳು, ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು, ನೌಕರ ಬಾಂಧವರಿಗೆ ತಿಳಿಸುವಂತೆ ಷಡಾಕ್ಷರಿ ಅವರು ಕೋರಿದ್ದಾರೆ.

ಹಿನ್ನೆಲೆಯಲ್ಲಿ ಚಿತ್ರದುರ್ಗ ಜಿಲ್ಲೆಯ ಎಲ್ಲಾ ನೌಕರರು ನಿಗದಿತ ದಿನಾಂಕದೊಳಗೆ ಆನ್ ಲೈನ್ ಲಿಂಕ್ ಬಳಸಿ *(http://www.ksgeanews.live/2021/09/online.html)* ಮಾಹಿತಿಯನ್ನು ಕಡ್ಡಾಯವಾಗಿ ದಾಖಲಿಸಿ ಸರ್ಕಾರ ನೀಡಿರುವ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಲು ಜಿಲ್ಲಾ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷರಾದ ಶ್ರೀ ಮಂಜುನಾಥ ಕೇರ್ ಅವರು ಮನವಿ ಮಾಡಿದ್ದಾರೆ.

KGID ಸಂಖ್ಯೆ ಹೊಂದಿರುವ ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಸದಸ್ಯರಾಗಿರುವ ರಾಜ್ಯ ಸರ್ಕಾರದ ಕಾಯಂ ಸರ್ಕಾರಿ ನೌಕರರು, ಅಧಿಕಾರಿಗಳು ಮಾತ್ರ ಈ ಯೋಜನೆ ವ್ಯಾಪ್ತಿಗೆ ಬರುತ್ತಾರೆ.

ಪೊಲೀಸ್ ಇಲಾಖೆಯಲ್ಲಿ ಆರೋಗ್ಯ ಯೋಜನೆ ಜಾರಿಯಲ್ಲಿರುವುದರಿಂದ ಇಲಾಖೆಯ ನೌಕರರು ಅಧಿಕಾರಿಗಳು ಮಾಹಿತಿ ಸಲ್ಲಿಸಲು ಅವಕಾಶವಿರುವುದಿಲ್ಲ, ಅನುದಾನಿತ ಸಂಸ್ಥೆಗಳು, ನಿಗಮ-ಮಂಡಳಿಗಳು, ಪ್ರಾಧಿಕಾರ, ವಿಶ್ವವಿದ್ಯಾಲಯ, ಸ್ಥಳೀಯ ಸಂಸ್ಥೆಗಳ ನೌಕರರು-ಅಧಿಕಾರಿಗಳಿಗೆ ಮಾಹಿತಿ ಸಲ್ಲಿಸಲು ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಈ ಮಾಹಿತಿಯನ್ನು ತಮ್ಮ ಪತ್ರಿಕೆಗಳಲ್ಲಿ ಪ್ರಕಟಿಸುವ ಮೂಲಕ ಜಿಲ್ಲೆಯಾದ್ಯಂತ ಇರುವ ನೌಕರರಿಗೆ ಮಾಹಿತಿ ನೀಡಿ ವ್ಯಾಪಕ ಪ್ರಚಾರ ನೀಡುಲು ಮನವಿ ಮಾಡಿಕೊಳ್ಳುತ್ತೇನೆ.

( _Online link_ )

http://www.ksgeanews.live/2021/09/online.html

[t4b-ticker]

You May Also Like

More From Author

+ There are no comments

Add yours