ನಿಂಬೆ ಹಣ್ಣಿನ ಆರೋಗ್ಯಕ್ಕೆ ತುಂಬಾ ಸಹಾಯಕ, ನಿಂಬೆಹಣ್ಣಿನ ಬಳಕೆಯಿಂದ ಆರೋಗ್ಯಕ್ಕೆ ಎಷ್ಟು ಲಾಭಗಳು.

 

 

 

 

ನಿಂಬೆ, ನಮ್ಮ ದಿನನಿತ್ಯದ ಆಹಾರದಲ್ಲಿ ಹಾಸುಹೊಕ್ಕಾಗಿರುವ ವಸ್ತು. ವಿಪುಲವಾಗಿ ಕೃಷಿಗೆ ಒಳಗಾಗಿರುವ ಪದಾರ್ಥ, ಬೀಜದಿಂದ ಪಡೆದ ಸಸಿಯನ್ನು ದೊಡ್ಡ ಕುಂಡಗಳಲ್ಲೂ ಬೆಳೆಸಬಹುದು. ವೇದಗಳ ಕಾಲದಿಂದಲೂ ಪ್ರಸಿದ್ಧಿ ಪಡೆದಿರುವ ನಿಂಬೆಹಣ್ಣು ಇಂದಿಗೂ ಸಹ ಶುಭ ಸಮಾರಂಭಗಳಲ್ಲಿ ಉಪಯೋಗಿಸಲ್ಪಡುತ್ತಿದೆ. ಸುಮಾರು ೪-೫ ಅಡಿಗಳವರೆಗೆ ಬೆಳೆಯುವ ಈ ಸಸ್ಯದ ಎಲೆಗಳಲ್ಲಿಯೂ ಸಹ ಸುವಾಸನೆ ಇರುತ್ತದೆ. ಸಂಸ್ಕೃತದಲ್ಲಿ ‘ನಿಂಬೂಕ’, ‘ಜಂಬೀರ ಮುಂತಾದ ಹೆಸರುಗಳನ್ನು ಪಡೆದಿರುವ ನಿಂಬೆ ರುಚಿಯಲ್ಲಿ ಹುಳಿ, ಸಿಹಿ ಮಿಶ್ರಿತವಾಗಿದ್ದು, ಜೀವಸತ್ವ, ‘ಸಿ’ಯ ಆಗರ.
ನಿಂಬೆಯ ಔಷಧೀಯ ಗುಣಗಳು ಅಪಾರ, ಹಸಿವನ್ನು ಹೆಚ್ಚಿಸಿ, ರಕ್ತವನ್ನು ವೃದ್ಧಿ,

ಕೊಬ್ಬನ್ನು ಕರಗಿಸಿ, ದೇಹದ ಎಲ್ಲ ವ್ಯವಸ್ಥೆಗಳ ಮೇಲೂ ಪ್ರಭಾವ ಬೀರುವ ನಿಂಬೆ ನಿಜಕ್ಕೂ ಅಮೃತಪ್ರದ, ಸೌಂದರ್ಯ ವರ್ಧನೆಯಿಂದ ಹಿಡಿದು ಬಾಯಾರಿಕೆ, ಮಂಡಿ ನೋವಿನವರೆಗೂ ಉಪಯುಕ್ತ. ೧. ದೇಹಕ್ಕೆ ಬೇಕಾದ ಕಬ್ಬಿಣ ಜೇನುತುಪ್ಪದಲ್ಲಿದೆ. ಈ ಕಬ್ಬಿಣವನ್ನು ರಕ್ತಕ್ಕೆ ಸೇರಿಸುವ ಸಾಮರ್ಥ್ಯ ನಿಂಬೆರಸದಲ್ಲಿರುವ ‘ಸಿ’ ಜೀವ ಸತ್ವಕ್ಕಿದೆ. ಹೀಗಾಗಿ ನಿಂಬೆರಸ ಜೇನುತುಪ್ಪಗಳ

ಉಪಯೋಗಗಳು

ನಿಯಮಿತ ಸೇವನೆಯಿಂದ ರಕ್ತವೃದ್ಧಿಯಾಗುತ್ತದೆ.

೨. ಬೇಡದ ಕೊಬ್ಬನ್ನು ಕರಗಿಸುವ ನೈಸರ್ಗಿಕ ಪದಾರ್ಥಗಳಲ್ಲಿ ನಿಂಬೆಗೆ ಉತೃಷ್ಟ ಸ್ಥಾನವಿದೆ. ನಿಂಬೆರಸ – ಜೇನುತುಪ್ಪವನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಕೊಬ್ಬು ಕರಗಿ ದೇಹ ಪ್ರಮಾಣ ಬದ್ಧವಾಗುತ್ತದೆ. ೩. ಸ್ನಾನದ ಕೊನೆಯಲ್ಲಿ ಒಂದೆರಡು ತೊಟ್ಟು ನಿಂಬೆರಸವನ್ನು ನೀರಿಗೆ ಹಾಕಿ ತಲೆ ತೊಳೆದುಕೊಂಡರೂ ಸಾಕು. ಕೂದಲಿನ ಹೊಳಪು ಬಹಳ ಕಾಲದವರೆಗೂ ಇರುತ್ತದೆ.

 

 

೪. ಒಂದು ಚಮಚ ನಿಂಬೆರಸಕ್ಕೆ ಒಂದು ಚಮಚ ಹಾಲಿನ ಕೆನೆ ಸೇರಿಸಿ ಮುಖಕ್ಕೆ

ಹಚ್ಚುವುದರಿಂದ ಚರ್ಮ ಮೃದುವಾಗಿ ಹೊಳಪು ಬರುತ್ತದೆ.

೫. ನಿಂಬೆಯ ಪಾನಕವನ್ನು ಮಾಡುವುದೆಂದರೆ ನಿಂಬೆ ಹಣ್ಣಿನರಸ ೧ ಭಾಗ ಸಕ್ಕರೆ ೩ ಭಾಗ, ನೀರು ೩ ಭಾಗ ಇವೆಲ್ಲವನ್ನು ಮಿಶ್ರಣ ಮಾಡಿ, ಲವಂಗ ಮತ್ತು ಕರಿಮೆಣಸಿನ ಪುಡಿಗಳನ್ನು ರುಚಿಗೆ ತಕ್ಕಷ್ಟು ಹಾಕಿ ಸೇವಿಸಲು ಬಾಯಾರಿಕೆ ನಿವಾರಿಸುವುದಲ್ಲದೆ ಹಸಿವನ್ನುಂಟುಮಾಡಿ, ಬಾಯಿ ರುಚಿಯನ್ನು ಹೆಚ್ಚಿಸುತ್ತದೆ. ೬. ನಿಂಬೆಯ ಎಲೆಗೆ, ೧ ಚಿಟಿಕೆ ಅರಿಶಿನ ಪುಡಿಯನ್ನು ಸೇರಿಸಿ ಅರೆದು ಮುಖಕ್ಕೆ

ಹಚ್ಚಲು ಮೊಡವೆ ನಿವಾರಣೆಯಾಗುತ್ತದೆ.

೭. ನಿಂಬೆರಸವನ್ನು, ಕರಗಿದ ಸಕ್ಕರೆಯೊಂದಿಗೆ ಮಿಶ್ರಣಮಾಡಿ ಹೆಚ್ಚು ಕೂದಲಿರುವ ಜಾಗಕ್ಕೆ ಹಚ್ಚಲು, ಬೇಡವಾದ ಕೂದಲು ನಾಶವಾಗುತ್ತದೆ.

[t4b-ticker]

You May Also Like

More From Author

+ There are no comments

Add yours