ನಾಳೆ ಪವರ್ ನಿಮ್ಮ ಏರಿಯಾದಲ್ಲಿ ಇರುತ್ತಾ ಇಂದೇ ನೋಡಿ.

 

ಜುಲೈ31 ರಂದು ವಿದ್ಯುತ್ ವ್ಯತ್ಯಯ
ಚಿತ್ರದುರ್ಗ,ಜುಲೈ30:
66/11ಕೆ.ವಿ.  ವಿದ್ಯುತ್ ವಿತರಣಾ ಕೇಂದ್ರ ಚಿತ್ರದುರ್ಗದಿಂದ ಸರಬರಾಜಾಗುವ ಎಫ್-08 ವಿದ್ಯಾನಗರ 11 ಕೆ.ವಿ ಪ್ರಸರಣಾ ಮಾರ್ಗದಲ್ಲಿ ರಸ್ತೆ ಅಗಲೀಕರಣ  ಕಾಮಗಾರಿ ನಡೆಯುತ್ತಿರುವುದರಿಂದ ಕಾಮಗಾರಿಗೆ ಅಡ್ಡವಾಗಿರುವ ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸುವ ಕಾರ್ಯ ಇರುವುದರಿಂದ ಜುಲೈ31 ರಂದು ಬೆಳಿಗ್ಗೆ 10 ರಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ವಿದ್ಯುತ್ ಅಡಚಣೆಗೆ ಒಳಪಡುವ ಪ್ರದೇಶಗಳು: ಎಂ.ಕೆ. ಹಟ್ಟಿ, ಎಂ.ಆರ್. ನಗರ, ಮುರುಘಾಮಠ, ರಾಕ್‌ಪೋರ್ಟ್ ಸ್ಕೂಲ್, ಟ್ರಕ್ ಟರ್ಮಿನಲ್, ದಾವಣಗೆರೆ ರಸ್ತೆ, ಗಾರೆಹಟ್ಟಿ, ಆದರ್ಶನಗರ, ಜಯಲಕ್ಷಿö್ಮÃ ಲೇಔಟ್, ಹನುಮಂತನಗರ, ತರಳಬಾಳು ನಗರ, ಕವಾಡಿಗರ ಹಟ್ಟಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಆಡಚಣೆಯಾಗಲಿದೆ.
ಸಾರ್ವಜನಿಕರು ಸಹಕರಿಸಬೇಕು ಎಂದು ಬೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

[t4b-ticker]

You May Also Like

More From Author

+ There are no comments

Add yours