ನಾಳೆ ಪವರ್ ಕಟ್ ಎಲ್ಲೆಲ್ಲಿ ಇಂದೇ ನೋಡಿ.

 

ಜುಲೈ14 ರಂದು ವಿದ್ಯುತ್ ವ್ಯತ್ಯಯ
***
ಚಿತ್ರದುರ್ಗ, ಜುಲೈ13:
ಬೆಸ್ಕಾಂ ಇಲಾಖೆ ವತಿಯಿಂದ ಚಿತ್ರದುರ್ಗ ನಗರ ವ್ಯಾಪ್ತಿಯಲ್ಲಿ ಎಫ್-08 ವಿದ್ಯಾನಗರ 11 ಕೆ.ವಿ.ಮಾರ್ಗದ 11 ಕೆ.ವಿ.ಮಾರ್ಗದಲ್ಲಿ ರಸ್ತೆ ಅಗಲೀಕರಣಕ್ಕೆ ಅಡ್ಡಲಾಗಿರುವ ಕಂಬ ಹಾಗೂ ಮಾರ್ಗವನ್ನು ಸ್ಥಳಾಂತರಿಸುವ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಜುಲೈ 14 ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯವರೆಗೆ  ವಿದ್ಯುತ್ ವ್ಯತ್ಯಯವಾಗಲಿದೆ.
ವಿದ್ಯುತ್ ಅಡಚಣೆಗೆ ಒಳಪಡುವ ಪ್ರದೇಶಗಳು: ವಿದ್ಯಾನಗರ, ದಾವಣಗೆರೆ ರಸ್ತೆ, ಗಾರೇಹಟ್ಟಿ, ಕವಾಡಿಗರಹಟ್ಟಿ, ಮಠದ ಕುರುಬರ ಹಟ್ಟಿ, ಮುರುಘಾಮಠ, ಅಗಸರಹಳ್ಳಿ, ತರಳಬಾಳುನಗರ, ಜೆ.ಎಂ.ಐ.ಟಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸ್ಥಗಿತವಾಗಲಿದೆ.
ಗ್ರಾಹಕರು ಸಹಕರಿಸಬೇಕು ಎಂದು ಬೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

[t4b-ticker]

You May Also Like

More From Author

+ There are no comments

Add yours