ನಗರಸಭೆ ಜಾಗ ಒತ್ತುವರಿ ಕೂಡಲೇ ತೆರವುಗೊಳಿಸಲು ಪೌರಯುಕ್ತರಿಗೆ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಸೂಚನೆ.

 

ಚಿತ್ರದುರ್ಗ ಜೂ. ೧೫: ವಿ.ಪಿ.ಬಡಾವಣೆಯಲ್ಲಿ ಕನ್ಸರ್‌ವೆನ್ಸಿಗಳನ್ನು ಒತ್ತುವರಿ ಮಾಡಲಾಗಿದೆ ಇವುಗಳನ್ನು ತೆರವು ಮಾಡಿ ಎಂದು ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಪೌರಾಯುಕ್ತರಿಗೆ ದೂರವಾಣಿ ಮೂಲಕ ಸೂಚನೆ ನೀಡಿದರು.

ನಗರದ ವಿ.ಪಿ.ಬಡಾವಣೆಯ ೩ನೇ ಕ್ರಾಸ್ (ಹಿಟ್ಟಿನ ಗಿರಣಿ ಹತ್ತಿರ) ಸಿ.ಸಿ. ರಸ್ತೆ, ಕಾಮಗಾರಿಗೆ ಚಾಲನೆ ನೀಡಿ ಅಕ್ಕ-ಪಕ್ಕದಲ್ಲಿ ನಗರಸಭೆಯ ಜಾಗವಾದ ಕನ್ಸರ್‌ವೆನ್ಸಿಯನ್ನು ಕೆಲವರು ಒತ್ತುವರಿ ಮಾಡಿ ಗೇಟ್ ಹಾಕಿದ್ದನ್ನು ಕಂಡು ಕೋಪಗೊಂಡ ಶಾಸಕರು ಇದನ್ನು ಯಾರು ಮಾಡಿದ್ದು ಇಲ್ಲಿ ನಗರಸಭೆಯ ಜಾಗವನ್ನು ಒತ್ತುವರಿ ಮಾಡುವುದರ ಮೂಲಕ ಮನೆಯನ್ನು ನಿರ್ಮಾಣ ಮಾಡಿ ಮೆಟ್ಟಿಲುಗಳನ್ನು ಹಾಕಿದ್ದಾರೆ ಇದರ ಬಗ್ಗೆ ಪೌರಾಯುಕ್ತರಿಗೆ ತಿಳಿಸಿ ಕೊಡಲೇ ತೆರವುಗೊಳಿಸುವಂತೆ ಸೂಚಿಸಿದರು.
ಜೆ.ಸಿ.ಆರ್.ಬಡಾವಣೆಯ ೨ನೇ ತಿರುವಿನಿಂದ ವಿ.ಪಿ.ಬಡಾವಣೆಗೆ ಬರುವ ದಾರಿಯ ಪಕ್ಕದಲ್ಲಿ ಇರುವ ಕನ್ಸರ್‌ವೆನ್ಸಿಗೆ ಅಡ್ಡಲಾಗಿ ಗೇಟ್ ಹಾಕಿದ್ದರಿಂದ ಇಲ್ಲಿ ಹಂದಿಗಳ ವಾಸ ಹೆಚ್ಚಾಗಿದೆ ಇದರಿಂದ ನಗರದಲ್ಲಿ ರೋಗಗಳ ಹೆಚ್ಚಾಗುತ್ತಿದೆ ಈಗಲೇ ಜನತೆ ಕರೋನಾದಿಂದ ನರಳುತ್ತಿದ್ದಾರೆ ಇದರಲ್ಲಿ ಮತ್ತೊಂದು ರೋಗ ಬರುವುದು ಬೇಡ ಇದರ ಬಗ್ಗೆ ನಿಗಾವಹಿಸಿ ಕನ್ಸರ್ ವೆನ್ಸಿಗೆ ಅಡ್ಡ ಇರುವ ಗೇಟ್‌ನ್ನು ತೆರವು ಮಾಡಿ ಒತ್ತುವರಿ ಮಾಡಿರುವ ಬಗ್ಗೆ ಗಮನ ನೀಡಿ, ಹಾಗೇಯೇ ಕನ್ಸರ್ ವೆನ್ಸಿಯ ಅಕ್ಕ-ಪಕ್ಕದಲ್ಲಿನ ಮನೆಯವರಿಗೆ ಈ ಜಾಗವನ್ನು ನೀಡಿ ಉಪಯೋಗ ಮಾಡಿಕೊಳ್ಳಲಿ ಎಂದು ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ನಗರಸಭಾ ಸದಸ್ಯರಿಗೆ ಸೂಚನೆ ನೀಡಿದರು.
ಇದೇ ಸಮಯದಲ್ಲಿ ಅಲ್ಲೇ ಇದ್ದ ಸರ್ಕಾರದ ಸಹಾಯಕ ಔಷಧಿ ನಿಯಂತ್ರಣ ಕಚೇರಿಗೆ ಸಮಯವಾಗಿದ್ದರು ಸಹಾ ಸಂಬಂಧಪಟ್ಟ ಅಧಿಕಾರಿ ಬಾರದೆ ಇದಿದ್ದರಿಂದ ಅಲ್ಲಿನ ಸಿಬ್ಬಂದಿಯನ್ನು ಸಹಾ ತರಾಟೆಗೆ ತೆಗೆದುಕೊಂಡ ಶಾಸಕರು ಸರ್ಕಾರಿ ನೌಕರರು ಸಮಯಕ್ಕೆ ಸರಿಯಾಗಿ ಬಂದು ಕೆಲಸವನ್ನು ಮಾಡಬೇಕಿದೆ ಎಂದು ತಾಕೀತು ಮಾಡಿದರು.

ಒತ್ತುವರಿ ಜಾಗದ ಫೋಟೋ.

ಈ ಸಮಯದಲ್ಲಿ ನಗರಸಭಾ ಸದಸ್ಯರಾದ ಶ್ರೀಮತಿ ರೋಹಿಣಿ ನವೀನ್, ಮುಖಂಡರಾದ ರವಿಕುಮಾರ್, ವೇದ ಪ್ರಕಾಶ್, ಕುಮಾರ್, ತಿಮ್ಮಣ್ಣ ಇತರರು ಭಾಗವಹಿಸಿದ್ದರು.

[t4b-ticker]

You May Also Like

More From Author

+ There are no comments

Add yours