ನಗರದ ಸೌಂದರ್ಯ ಹೆಚ್ಚಿಸುವುದಕ್ಕೆ ಅಲಂಕಾರಿಕ ಬೀದಿ ದೀಪ: ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ

 

ಚಿತ್ರದುರ್ಗ :ರಾತ್ರಿ ಸಮಯದಲ್ಲಿ ನಗರದ ಸುಂದರವಾಗಿ ಕಾಣುವ ದೃಷ್ಟಿಯಿಂದ ಎಲ್ಲಾ ದ್ವಿಮುಖ ರಸ್ತೆಗಳಿಗೆ ಅಲಂಕಾರಿಕ ಬೀದಿ ದೀಪಗಳನ್ನು ಅಳವಡಿಸಲಾಗಿದೆ ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಹೇಳಿದರು.

ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಿಂದ ಜೆಎಂಐಟಿ ಸರ್ಕಲ್ ವರೆಗೆ ನೂತನವಾಗಿ ಹಾಕಲಾಗಿರುವ ಬೀದಿ ದೀಪಗಳನ್ನು ಸ್ವಿಚ್ ಅನ್ ಮಾಡುವ ಮೂಲಕ ಉದ್ಘಾಟಿಸಿದರು.

19 ಕೋಟಿ ವೆಚ್ಚದಲ್ಲಿ ರಸ್ತೆ ಮತ್ತು ಬೀದಿ ದೀಪಕ್ಕೆ ಹಣ ನೀಡಲಾಗಿದೆ. ನಗರದಲ್ಲಿ ನಿರ್ಮಾಣ ಮಾಡಲಾಗುತ್ತಿರುವ ಎಲ್ಲಾ ದ್ವಿಮುಖ ರಸ್ತೆಗಳಲ್ಲಿ ಎಕ್ಸ್ ಆಕಾರದ ಅಲಂಕಾರಿಕ ಬೀದಿ ಅಳವಡಿಸಲು ಹಣ ಇಡಲಾಗಿದೆ. ಎಲ್ಲಾ ಸಿ.ಸಿ.ರಸ್ತೆಗಳಲ್ಲಿ ನಗರದಾದ್ಯಂತ ಪೂರ್ಣವಾಗಿ ಅಲಂಕಾರಿಕ ದೀಪಗಳನ್ನು ಹಾಕಲಾಗುತ್ತದೆ‌. ನಗರದ ವಿವಿಧ ಬಡಲಾವಣೆಗಳಲ್ಲಿ ಸಹ ಅಲಂಕಾರಿಕ ಬೀದಿ ದೀಪಗಳನ್ನು ಹಾಕಲು ತಿಳಿಸಿದ್ದೇನೆ ಎಂದು ತಿಳಿಸಿದರು.

ರೈಲ್ವೆ ಸ್ಟೇಷನ್ ಬಳಿಯಲ್ಲಿ ರೈಲ್ವೆ ಇಲಾಖೆಯಿಂದ ಫ್ಲೆ ಓವರ್ ಮಾಡಲು ಟೆಂಡರ್ ಕರೆಯಲಾಗಿದೆ ಎಂದು ಎರಡು ವರ್ಷಗಳಿಂದ ಹೇಳುತ್ತಿದ್ದ ಅದಕ್ಕಾಗಿ ಇಷ್ಟು ದಿನ ಅಲ್ಲಿ ರಸ್ತೆ ಅಗಲೀಕರಣ ಮಾಡಿರಲಿಲ್ಲ ಎಂದರು. ಇಂಜಿನಿಯರ್ ಜೊತೆ ಮಾತನಾಡಿದ್ದು ಅವರ ಕಾಯುವ ಬದಲಿಗೆ ಅಗಲೀಕರಣ ರಸ್ತೆ ಮಾಡಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಸುರೇಶ್, ನಗರಸಭೆ ಸದಸ್ಯರಾದ ಪರಮೇಶ್, ಸುರೇಶ್,ಹರೀಶ್,ರಮೇಶ್, ಚಾಲುಕ್ಯ ನವೀನ್, ಜಯಣ್ಣ,ಶ್ರೀದೇವಿ ತಿಮ್ಮಣ್ಣ,ನಾಗರಾಜ್, ಕೃಷ್ಣ ಜಿಲ್ಲಾ ಬಿಜೆಪಿ ಅಧ್ಯಕ್ಷ ಎ.ಮುರುಳಿ, ಇಇ ಸತೀಶ್ ಬಾಬು, ಎಇಇ ಕೃಷ್ಣಪ್ಪ, ಗೋಪಲ್, ನಗರಸಭೆ ಪೌರಯುಕ್ತ ಹನುಂಮತರಾಜು ಇದ್ದರು.

[t4b-ticker]

You May Also Like

More From Author

+ There are no comments

Add yours