ತಾಯಿ- 5 ವರ್ಷದ ಮಗ ನಡೆದಿದ್ದು ಎಷ್ಟು ಕಿಲೋ ಮೀಟರ್ ಗೊತ್ತೆ. ತಾಯಿ-ಮಗನನ್ನು ದಡ ಸೇರಿಸಿ ಮಾನವೀಯತೆ ಮೆರೆದ ಪೋಲಿಸರು

 

ಶಿವಮೊಗ್ಗ ಸಮೀಪದ ಗಾಡಿಕೊಪ್ಪ ಊರಿನ ನಾಗರತ್ನ ಎಂಬ ಮಹಿಳೆ ತನ್ನ ಪತಿಯೊಂದಿಗೆ ಗಲಾಟೆ ಮಾಡಿಕೊಂಡು ತನ್ನ ಐದು ವರ್ಷದ ಮಗುವಿನೊಂದಿಗೆ ಸುಮಾರು 100 ಕಿಲೋ ದೂರ ಕಾಲ್ನಡಿಗೆಯಲ್ಲಿ ದಾವಣಗೆರೆ ಕಡೆಗೆ ಬಟ್ಟೆಯನ್ನು ತೆಗೆದುಕೊಂಡು ಬಂದಿದ್ದಾರೆ. ರಾತ್ರಿ 9 ಗಂಟೆ ಒತ್ತಿನಲ್ಲಿ ದಾವಣಗೆರೆ ಹೈಟೆಕ್ ಆಸ್ಪತ್ರೆ ಹತ್ತಿರದ ಚೆಕ್ ಪೋಸ್ಟ್ ಬಂದು ವಿಜಯಪುರದ ಹರಪ್ಪನಹಳ್ಳಿ ತಾಲೂಕಿನ ತುಂಬಿಗೆರೆ ತೆರಳಬೇಕು ಎಂದು ಪೋಲಿಸ್ ಸಿಬ್ಬಂದಿಯನ್ನು ವಿಚಾರಿಸಿದ್ದಾಳೆ. ಆ ಮಹಿಳೆ ಮತ್ತು ಮಗುವಿನ ಮಾಹಿತಿ ಪಡೆದು ಊಟ ನೀಡಿ ತಮ್ಮ ವಾಹನದಲ್ಲಿ ಊರಿಗೆ ಕಳುಸಿಕೊಟ್ಟು ಪೋಲಿಸ್ ಅಧಿಕಾರಿಗಳು ಮಾನವೀಯತೆ ಮೆರೆದಿದ್ದಾರೆ.ಕೆ.ಟಿ.ಜೆ.ನಗರ ಪೋಲಿಸ್ ಕಾನ್ ಸ್ಟೇಬಲ್ ಹನುಮಂತಪ್ಪ ತಾಯಿ-ಮಗುವಿಗೆ ಊಟ ನೀಡಿ ಹರಪ್ಪನಹಳ್ಳಿ ತಾಲೂಕಿನ ತುಂಬಿಗೆರೆಯ ನಾಗರತ್ನ ಅವರ ಅಕ್ಕನ ಮನೆಗೆ ದೂರವಾಣಿ ಕರೆ ಮಾಡಿ ಮಾಹಿತಿ ಸ್ವಯಂ ಹಣ ಹಾಕಿ ಜೋಡಿಸಿ ತಾಯಿ- ಮಗು ಸೇರಬೇಕಿದ್ದ ಸ್ಥಳ ಸೇರಿಸಿ ಪೋಲಿಸರಯ ಮಾದರಿಯಾಗಿದ್ದಾರೆ.

[t4b-ticker]

You May Also Like

More From Author

+ There are no comments

Add yours