ಗುಣಮಟ್ಟದ ರಸ್ತೆಗಳ ನಿರ್ಮಾಣಕ್ಕೆ ಒತ್ತು: ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ.

 

ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಅವರು ಸಿಸಿ.ರಸ್ತೆ ಕಾಮಗಾರಿಗೆ ಚಾಲನೆ ನೀಡಿದ ಚಿತ್ರ

ಚಿತ್ರದುರ್ಗ: ಸಿ.ಸಿ.ರಸ್ತೆಗಳ ಕಾಮಗಾರಿ ಗುಣಮಟ್ಟದಿಂದ ಮಾಡಬೇಕು. ಗುಣಮಟ್ಟದಲ್ಲಿ ರಾಜಿಯಿಲ್ಲ ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಹೇಳಿದರು.

ನಗರದ ಜೋಗಿಮಟ್ಟಿ ರಸ್ತೆಯಲ್ಲಿ ಸಿ.ಸಿ.ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.

ಮದಕರಿ ಸರ್ಕಲ್ ಬಳಿಯ ಮಹಿಳಾ ಕಾಲೇಜು ಮುಂಭಾಗದಿಂದ ಜೋಗಿಮಟ್ಟಿ ರಸ್ತೆಯ ಕೊನೆಯವರೆಗೂ ಸಹ 12 ಕೋಟಿ ಹಣ ಬೇಕು. ಸದ್ಯಕ್ಕೆ  4 ಕೋಟಿ ವೆಚ್ಚದಲ್ಲಿ  ರಸ್ತೆ ಮತ್ತು ಬ್ರಿಡ್ಜ್ ಮಾಡಲಾಗುತ್ತಿದೆ. ಉಳಿದ ರಸ್ತೆಯನ್ನು ಸಹ ಮುಂದಿನ ದಿನಗಳಲ್ಲಿ ಮಾಡಲಾಗುವುದು. ನಗರದ ರಸ್ತೆಗಳನ್ನು ಸಂಪೂರ್ಣ ಅಗಲೀಕರಣ ಮಾಡಿಕೊಂಡು ಉತ್ತಮ ರಸ್ತೆಗಳನ್ನು ಮಾಡುತ್ತಿದ್ದು ಕನಿಷ್ಠ 15-20 ವರ್ಷ ಒಳ ರಸ್ತೆಗಳನ್ನು ಮಾಡುವ ಅವಶ್ಯಕತೆ ಇಲ್ಲ ಎಂದರು. ಗುಣಮಟ್ಟದಿಂದ ಕಾಮಗಾರಿ ಮಾಡಿ ಗುತ್ತಿಗೆದಾರ ಮತ್ತು ಇಂಜಿನಿಯರ್ ಗೆ ತಿಳಿಸಿದರು.

ವ್ಯಾಕ್ಸಿನೇಷನ್‌ ನೇಷನ್‌ ಕಾರ್ಯಕ್ರಮಕ್ಕೆ ಚಾಲನೆ: ಜೋಗಿಮಟ್ಟಿ ರಸ್ತೆಯಲ್ಲಿ ವ್ಯಾಕ್ಸಿನೇಷನ್‌ ಹಾಕಿಸುವ ಮೂಲಕ ಚಾಲನೆ ನೀಡಿದರು.ಎಲ್ಲಾರೂ ಲಸಿಕೆ ಪಡೆಯಿರಿ ಮತ್ತು ಅಂತರ ಕಾಪಡಿಕೊಂಡು ಮಾಸ್ಕ್ ಧರಿಸಿ , ಅವಶ್ಯಕತೆ ಇಲ್ಲದೆ ಹೊರಗಡೆ ಬರಬೇಡಿ ಎಂದು ತಿಳಿಸಿದರು.

ಉಪಹಾರ  ಮತ್ತು ನೀರು ವಿತರಣೆ:     ಜೋಗಿಮಟ್ಟಿ ರೋಡ್ ಯುವಕರ ಸಂಘದಿಂದ  ವ್ಯಾಕ್ಸಿನ್ ಪಡೆದವರಿಗೆ ಊಟ ಮತ್ತು ನೀರಿನ ಬಾಟಲಿ ವಿತರಣೆಯನ್ನು ಶಾಸಕರು ನೀಡುವ ಮೂಲಕ ಚಾಲನೆ ನೀಡಿದರು.  ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ಶ್ರೀದೇವಿ ಚಕ್ರವರ್ತಿ, ಶ್ರೀನಿವಾಸ್  ಸ್ಥಳೀಯ ಮಖಂಡರು ಇದ್ದರು.

 

[t4b-ticker]

You May Also Like

More From Author

+ There are no comments

Add yours