ಕೋವಿಡ್-19 : ಮೃತ ದೇಹಗಳನ್ನು ಗೌರಯುತವಾಗಿ ಅಂತ್ಯಸಂಸ್ಕಾರ ಮಾಡಲು ಸೂಚನೆ…

 

ಚಿತ್ರದುರ್ಗ:
ಚಿತ್ರದುರ್ಗ ಜಿಲ್ಲೆಯಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗ ಕಾರಣದಿಂದ ಮೃತರಾದ ಮುಸ್ಲೀಮರ ದೇಹಗಳನ್ನು ಅಂತ್ಯ ಸಂಸ್ಕಾರ ಮಾಡುವ ಸಂದರ್ಭದಲ್ಲಿ ಶಿಷ್ಠಾಚಾರ ಹಾಗೂ ಮಾರ್ಗಸೂಚಿಯನ್ವಯ ಪ್ರಮಾಣಿತ ಕಾರ್ಯಚರಣೆ ವಿಧಾನವನ್ನು ಅನುಸರಿಸಬೇಕು ಎಂದು ಜಿಲ್ಲಾ ವಕ್ಫ್ ಸಲಹಾ ಸಮಿತಿ ಸೂಚನೆ ನೀಡಿದೆ.
    ಚಿತ್ರದುರ್ಗ ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯಲ್ಲಿ ನೊಂದಾಯಿಸಿದ ಅಥವಾ ನೊಂದಾಯಿಸದೇ ಇರುವಂತಹ ಎಲ್ಲಾ ಖಬರಸ್ಥಾನಗಳ ಅಧ್ಯಕ್ಷರು, ಆಡಳಿತಾಧಿಕಾರಿಯವರು, ಕೋವಿಡ್-19 ಸಾಂಕ್ರಮಿಕ ರೋಗದಿಂದ ಮೃತರಾದ ಮುಸ್ಲಿಮರ ಅಂತ್ಯಸಂಸ್ಕಾರದಲ್ಲಿ, ಕರ್ನಾಟಕ ರಾಜ್ಯ ವಕ್ಪ್ ಮಂಡಳಿಯಿಂದ ಸೂಚಿಸಿದ ಮಾರ್ಗಸೂಚಿಗಳನ್ವಯ  ಗೊತ್ತುಪಡಿಸಿದ ಎಲ್ಲಾ ನೋಡಲ್ ಅಧಿಕಾರಿಗಳೊಂದಿಗೆ ಜವಾಬ್ದಾರಿಯುತವಾಗಿ ಸಹಕರಿಸಬೇಕು. ಕೋವಿಡ್-19 ರೋಗದಿಂದ ಮೃತರಾದ ಮುಸ್ಲಿಂ ದೇಹಗಳನ್ನು ಗೌರಯುತವಾಗಿ ಅಂತ್ಯಸಂಸ್ಕಾರ (ದಫನ್) ಮಾಡುವ ಕಾರ್ಯದಲ್ಲಿ ಮಾರ್ಗಸೂಚಿಯನ್ವಯ ಗೊತ್ತುಪಡಿಸಲಾದ ನೋಡಲ್ ಅಧಿಕಾರಿಗಳೊಂದಿಗೆ ಸಹಕರಿಸಬೇಕು.
    ಈ ಕಾರ್ಯದಲ್ಲಿ ಸಹಕರಿಸಲು ನಿರಾಕರಿಸಿದಲ್ಲಿ, ಅದನ್ನು ಮೃತರಿಗೆ ಮಾಡಿದ ಅಪಮಾನವೆಂದು ಪರಿಗಣಿಸಿ, ಅಂತಹ ಸಂಸ್ಥೆಗಳ ಖಬರಸ್ಥಾನದ ಅಧ್ಯಕ್ಷರು, ಮುತುವಲ್ಲಿ, ಆಡಳಿತಾಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು. ಅಲ್ಲದೆ ವಕ್ಫ್ ಕಾಯ್ದೆ 1995 ರ ನಿಬಂಧನೆ ಹಾಗೂ ಭಾರತೀಯ ದಂಡ ಸಂಹಿತೆಯಂತೆ ಶಿಸ್ತು ಕ್ರಮ ಕೈಗೊಂಡು ಅಂತಹ ಸಂಸ್ಥೆಗಳ ಅಧ್ಯಕ್ಷರು, ಮುತುವಲ್ಲಿ, ಆಡಳಿತಾಧಿಕಾರಿಯವರನ್ನು ಆಡಳಿತ ಸಮಿತಿಯಿಂದ ತೆಗೆದುಹಾಕಲಾಗುವುದು ಎಂದು ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಸದಸ್ಯರು ಹಾಗೂ ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಕೆ.ಅನ್ವರ್ ಬಾಷಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.  

[t4b-ticker]

You May Also Like

More From Author

+ There are no comments

Add yours