ಕುರಿ, ಮೇಕೆ, ಹಂದಿ, ಕೋಳಿ ಸಾಕಾಣಿಕೆ ಸಾಲ‌ ಸೌಲಭ್ಯಕ್ಕೆ ಅರ್ಜಿ ‌ಆಹ್ವಾನ

 

ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನ
*******
ಚಿತ್ರದುರ್ಗ, ಡಿಸೆಂಬರ್16:
ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯಿಂದ 2021-22ನೇ ಸಾಲಿನಲ್ಲಿ ಕಿಸಾನ್ ಕ್ರೆಡಿಟ್ ಕಾರ್ಡ್ ವಿತರಣಾ ಕಾರ್ಯಕ್ರಮದಡಿ ದನ, ಎಮ್ಮೆ, ಕುರಿ, ಮೇಕೆ, ಹಂದಿ ಹಾಗೂ ಕೋಳಿ ಸಾಕಾಣಿಕೆ ನಿರ್ವಹಣೆಗೆ ಕಡಿಮೆ ಬಡ್ಡಿದರದಲ್ಲಿ ಸಾಲಸೌಲಭ್ಯ ಪಡೆಯಲು ಆಸಕ್ತ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.
ಕಿಸಾನ್‍ಕ್ರೆಡಿಟ್ ಕಾರ್ಡ್ ವಿತರಣಾ ಅಭಿಯಾನದಡಿ ಹೈನುಗಾರಿಕೆ ಘಟಕದಡಿ ಮಿಶ್ರತಳಿ ದನಗಳ ನಿರ್ವಹಣೆ 1+1 ಗೆ ಪ್ರತಿ ಹಸುವಿಗೆ ಗರಿಷ್ಟ 14,000ರೂ ರಂತೆ ಒಟ್ಟು ಎರಡು ಹಸುಗಳಿಗೆ 28,000 ರೂ ಸಾಲ ಸೌಲಭ್ಯ ಸುಧಾರಿತ ಎಮ್ಮೆಗಳ ನಿರ್ವಹಣೆ 1+1 ಗೆ ಪ್ರತಿ ಎಮ್ಮೆಗೆ ಗರಿಷ್ಟ 16,000 ರೂಗಳಂತೆ ಎರಡು ಎಮ್ಮೆಗಳಿಗೆ 32,000 ರೂ ಸಾಲಸೌಲಭ್ಯವಿದೆ.
ಕುರಿ ನಿರ್ವಹಣೆಗೆ (10+1) 12,000 ರೂಗಳಿಂದ 24,000 ರೂ ಸಾಲಸೌಲಭ್ಯ, ಮೇಕೆ ನಿರ್ವಹಣೆಗೆ (10+1) 13,000 ರೂಗಳಿಂದ 26,000 ರೂ ಸಾಲಸೌಲಭ್ಯ, ಹಂದಿಗಳ ನಿರ್ವಹಣೆಗೆ (10) ಗರಿಷ್ಟ 60,000 ರೂ ಸಾಲಸೌಲಭ್ಯ, ಕೋಳಿ ಸಾಕಾಣಿಕೆಗೆ 1,60,000 ರೂ (2000 ಮಾಂಸ ಕೋಳಿ ಸಾಕಾಣಿಕೆ) ಹಾಗೂ 1,80,000ರೂ (1000ಮೊಟ್ಟೆ ಕೋಳಿ ಸಾಕಾಣಿಕೆ) ಸಾಲಸೌಲಭ್ಯವಿದೆ.
ಆಸಕ್ತ ರೈತರು ತಮ್ಮ ಹತ್ತಿರದ ಪಶುವೈದ್ಯ ಸಂಸ್ಥೆಯಲ್ಲಿ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ತಾಲ್ಲೂಕು ಪಶುವೈದ್ಯಾಧಿಕಾರಿಗಳು (ಆಡಳಿತ) ಚಿತ್ರದುರ್ಗ-9741927007, ಚಳ್ಳಕೆರೆ-9448816499, ಹಿರಿಯೂರು-9980976980, ಹೊಳಲ್ಕೆರೆ-9972965479, ಹೊಸದುರ್ಗ-9945298407, ಮೊಳಕಾಲ್ಮುರು-9449128202, ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಅಧಿಕಾರಿ ಮೊಬೈಲ್ ಸಂಖ್ಯೆ 9448656231 ಸಂಪರ್ಕಿಸಬಹುದು ಎಂದು ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಉಪನಿರ್ದೇಶಕ ಡಾ.ಜಿ.ಎಂ.ಹನುಮಪ್ಪ ತಿಳಿಸಿದ್ದಾರೆ

[t4b-ticker]

You May Also Like

More From Author

+ There are no comments

Add yours