ಕನ್ನಡ ಧ್ವಜ ದಹಿಸಿದವರನ್ನು ಗಡಿಪಾರು ಮಾಡಿ : ಚಳ್ಳಕೆರೆ ತಾಲೂಕು ಪತ್ರಕರ್ತರ ಸಂಘದಿಂದ ಆಗ್ರಹ

 

ಚಳ್ಳಕೆರೆ:  ಮಹಾರಾಷ್ಟ್ರ ದ ಎಂಇಎಸ್ ಸಂಘಟನೆಯೂ ಕನ್ನಡ ಬಾವುಟವನ್ನು ಸುಟ್ಟು ಹಾಕಿರುವುದನ್ನು  ಖಂಡಿಸಿ  ಚಳ್ಳಕೆರೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘವು  ಇತಂಹ ದುಷ್ಟರನ್ನು ಗಡಿಪಾರಿ ಮಾಡಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ  ತಾಲ್ಲೂಕು ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಡಿ. ಈಶ್ವರಪ್ಪ  ಇಂದು ನಗರದಲ್ಲಿ ಇತ್ತಿಚೆಗೆ ಬೆಳಗಾವಿಯ ಕೊಲ್ಲಾಪುರದಲ್ಲಿ ಕಿಡಿಗೇಡಿಗಳು ಕನ್ನಡ ಬಾವುಟ ದಹಿಸಿದ ಕ ವಿರುದ್ಧ ಪ್ರತಿಭಟಿಸಿ ತಾಲೂಕು ಶಿರಸ್ತೆದಾರ ಮೂಲಕ ಮೂಲಕ ರಾಜ್ಯಪಾಲರಿಗೆ ಮನವಿಯನ್ನು ಸಲ್ಲಿಸಿದ್ದೇವೆ ಎಂದರು ಅವರ ಎಂಇಎಸ್ ಸಂಘಟನ್ನು ನಿಷೇಧ ಮಾಡುವಂತೆ ಎಲ್ಲಾ ಪತ್ರಕರ್ತರು  ಒತ್ತಾಯಿಸುತ್ತಿದ್ದೇವೆ

ಕನ್ನಡ ನಾಡಿನಲ್ಲಿದ್ದುಕೊಂಡು ಇಂತಹ ದುಶ್ಕೃತ್ಯವನ್ನು ಮಾಡಿರುವುದುನ್ನು ತುಂಬಾ ದುರದೃಷ್ಟಕರ ,  ಸರ್ಕಾರ ಕೂಡಲೇ ಈ  ಸಂಘಟನೆಯ ಮೇಲೆ ಕಾನೂನಿನ ಕ್ರಮ ತೆಗೆದುಕೊಳ್ಳಬೇಕು. ಈ‌ ರೀತಿಯ ಘಟನೆಯ  ಕಿಡಿಗೇಡಿಗಳ ಕೃತ್ಯ ಮುಂದುವರೆಯುತ್ತಿದ್ದು, ಇದಕ್ಕೆ ಕಡಿವಾಣ ಹಾಕಬೇಕಾಗಿದೆ. ಇದನ್ನು ಹೀಗೆಯೇ ಬಿಟ್ಟರೆ ಮುಂದಿನ ದಿನಗಳಲ್ಲಿ ದೊಡ್ಡದಾಗಿ ಬೆಳೆಯಲು ಅನುವಾಗುತ್ತದೆ.‌ಇದರಿಂದ ಕೂಡಲೇ ಸರ್ಕಾರ ಈ ಸಂಘಟನೆ ಮೇಲೆ ಶಿಸ್ತಿನ ಕ್ರಮ ಜರುಗಿಸಬೇಕು ಎಂದರು.

ಕಾರ್ಯನಿರತ ಪತ್ರಕರ್ತರ ಸಂಘದ ನಿರ್ದೇಶಕರಾದ ಕೊರ್ಲಕುಂಟೆ ತಿಪ್ಪೇಸ್ವಾಮಿ ಮಾತನಾಡಿ ಕನ್ನಡ ಬಾವುಟ ದಹಿಸಿರುವುದು ಕನ್ನಡ ನಾಡಿಗೆ ಅವಮಾನ ಮಾಡಿದಂತೆ ಇಂತಹ ಪುಂಡರನ್ನು ಸರ್ಕಾರ ಗಡಿಪಾರು ಮಾಡಬೇಕು ಇಂತಹ ಕೃತ್ಯಗಳು ಆಗದಂತೆ ಎಚ್ಚರವಹಿಸಬೇಕು .ಈ ಹಿಂದೆ ಹಲವು ಬಾರಿ ಕನ್ನಡ ರಕ್ಷಣೆಗಾಗಿ ಮನವಿಯನ್ನು ಸಲ್ಲಿಸಲಾಗಿದೆ ಇಂತಹ ಕೃತ್ಯವನ್ನು ಖಂಡಿಸುತ್ತೇವೆ ಕನ್ನಡಕ್ಕಾಗಿ ಉಗ್ರ ಹೋರಾಟಗಳು ಸಹ ಮಾಡುತ್ತೇವೆ ಎಂದರು .ಈ ಸಂದರ್ಭದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಹಾಗೂ ಸಾಹಿತ್ಯ ಟಿ.ಜೆ. ತಿಪ್ಪೇಸ್ವಾಮಿ ರೈತ ಮುಖಂಡರಾದ ರೆಡ್ಡಿಹಳ್ಳಿ ವೀರಣ್ಣ ಮಾತನಾಡಿದರು .ಈ ಸಂದರ್ಭದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ಖಜಾಂಚಿ ವೀರೇಶ್ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರಾದ ವೀರಣ್ಣ ,ರಾಮಾಂಜನೇಯ, ಸುರೇಶ್ ಬೆಳಗೆರೆ ಸಂಘಟನೆಗಳ ಮುಖಂಡರಾದ ಚನ್ನಿಗ ರಾಮಯ್ಯ ಸೈಯದ್ ಸಾಬ್ ಕೆಜಿಎನ್ ಮುಜೀಬ್, ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರು ವಿವಿದ ಸಂಘಟನೆಗಳ ಸದಸ್ಯರು ಇದ್ದರು.

[t4b-ticker]

You May Also Like

More From Author

+ There are no comments

Add yours