ಕಟ್ಟ ಕಡೆಯ ವ್ಯಕ್ತಿಗೆ ಸರ್ಕಾರಿ ಸೌಲಭ್ಯ ಕಲ್ಪಿಸಲು ಎಲ್ಲಾರೂ ಶ್ರಮಿಸಿದರೆ ಮಾತ್ರ ಸಾಧ್ಯ:ಎಸಿ ಆರ್.ಚಂದ್ರಯ್ಯ

 

ತಳುಕು:  ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಒಟ್ಟಾಗಿ ಕಾರ್ಯನಿರ್ವಹಿಸಿದರೆ ಕಟ್ಟ ಕಡೆಯ
ವ್ಯಕ್ತಿಗೆ ಸರ್ಕಾರ‌ ಸೌಲಭ್ಯ  ತಲುಪಿಸುವ ಕೆಲಸ ಆಗುತ್ತದೆ ಎಂದು ಜಿಲ್ಲಾ ಉಪವಿಭಾಗಾಧಿಕಾರಿ ಆರ್. ಚಂದ್ರಯ್ಯ ಇವರು ತಿಳಿಸಿದ್ದಾರೆ.

ಚಳ್ಳಕೆರೆ ತಾಲೂಕಿನ ತಳುಕು ಗ್ರಾಮದಲ್ಲಿ ತಾಲ್ಲೂಕಿನ ಗ್ರಾಮದಲ್ಲಿ ಕಂದಾಯ ಅದಲತ್  ಎರಡನೇ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು .
ಈ ಕಾರ್ಯಕ್ರಮದಲ್ಲಿ ನಾಗರೀಕರಿರನ್ನು ಕುರಿತು ಅವರು ಮಾತನಾಡಿ
ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಒಟ್ಟಾಗಿ ಕೆಲಸ ಮಾಡಿದಾಗ ಮಾತ್ರ ಸರ್ಕಾರದ ಅನುಷ್ಠಾನವಾದ ಅನುಕೂಲಗಳು ಕಟ್ಟಕಡೆಯ ನಾಗರೀಕರಿಗೆ ತಲುಪುತ್ತಿವೆ.
ಈಗಾಗಲೇ ಸರ್ಕಾರ ಬಡವರಿಗೆ ,ವಿಕಲಚೇತನ ರಿಗೆ ವೃದ್ದರಿಗೆ ವಿಧೆಯರಿಗೆ ,ಇತರೆ ವರ್ಗದವರಿಗೆ ಸಿಗುವಂಹ ಅನುಕೂಲಗಳನ್ನು ತಲುಪಿಸುವಂತಹ ಕಾರ್ಯವನ್ನು‌ ಮಾಡಿದಾಗ ಮಾತ್ರ ಸರ್ಕಾರ ಮಾಡಿರು ಅನುಕೂಲಗಳ ಜನರಿಗೆ ತಲುಪುತ್ತವೆ . ಸೌಲಭ್ಯಗಳನ್ನು ಜನರಿಗೆ ತಿಳಿಸಿ ಗ್ರಾಮದ ಪೌತಿಖಾತೆ,ಪಿಚಣಿ. ಇತಂಹ ಎಲ್ಲಾ ಅನುಕೂಲಗಳು ಬಡವರಿಗೆ ಮನೆ ಮನೆಗೆ ಹೋಗಿ
ಅಧಿಕಾರಿಗಳು ಸರ್ಕಾರದ ಸೌಲತ್ತುಗಳು ಪ್ರತಿಯೊಬ್ಬರು ತಲುಪಿಸುವ ಒಂದು ಕಾರ್ಯಕ್ರಮ ಕಂದಾಯ ಅದಲತ್ ಆಗಿದೆ.
ಈ ಕಾರ್ಯಕ್ರಮದ ಉದ್ದೇಶ ಗ್ರಾಮ ಪ್ರತಿಯೊಬ್ಬ ನಾಗರೀಕರಿಗ ಬಡವರಿಗೆ, ಬಲ್ಲಿದರಿಗೆ ವಿಕಲಚೇತನರಿಗೆ, ಸರ್ಕಾರ. ಸೌಲತ್ತುಗಳು ಸಿಗುವಂತ್ತಾಗಬೇಕು.ಈ‌ ಉದ್ದೇಶದಿಂದ ತಾಲ್ಲೂಕು ಆಡಳಿತ ಮನೆ ಬಾಗಿಲಿಗೆ ಬಂದು ಇಲ್ಲಿನ ಸಮಸ್ಯೆ ಗಳನ್ನು ಆಲಿಸಿ ಸ್ಥಳದಲ್ಲೆ ಸಮಸ್ಯೆ ಗಳನ್ನ ಬಗೆ ಹರಿಸಲಾಗವುದು ಎಂದರು.

ತಳುಕು ಗ್ರಾಮದಲ್ಲಿ ಸಮಸ್ಯೆಗಳನ್ನು ಕುರಿತು ಸಾರ್ವಜನಕರೊಂದಿಗೆ ತಹಶೀಲ್ದರ್ ಎನ್.ರಘುಮೂರ್ತಿ ಮತ್ತು
ಜಿಲ್ಲಾ ಉಪವಿಭಾಗಧಿಕಾರಿ ಆರ್.ಚಂದ್ರಯ್ಯ

ತಹಶೀಲ್ದಾರ್ ಎನ್ . ರಘುಮೂರ್ತಿ ಮಾತನಾಡಿ ಸರ್ಕಾರದ ಹಲವು ಕಾರ್ಯಕ್ರಮಗಳು ನಾಗರೀಕರಿಗೆ, ಬಡವರಿಗೆ ತಲುಪಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ . ಕಳೆದ ವಾರ ಸಹ  ಹಿರೇಹಳ್ಳಿ ಗ್ರಾಮದಲ್ಲಿ ಕಾರ್ಯಕ್ರಮ ಜರುಗಿತ್ತು. ಗ್ರಾಮದಲ್ಲಿ ಪ್ರತಿಯೊಂದು ಸಮಸ್ಯೆಯನ್ನು ಆಲಿಸಿ ಅವರಿಗೆ ಅನುಕೂಲ ಮಾಡಿಕೊಡಲಾಗಿದೆ .ಹಾಗಾಗಿ ಹಾಗೆಯೇ ತಳಕು ಗ್ರಾಮದಲ್ಲಿ ಸಹ ಇರುವಂತಹ ಸಮಸ್ಯೆಗಳನ್ನು ಆಲಿಸಿ ಸ್ಥಳದಲ್ಲಿಯೇ ಪರಿಹಾರ ಮಾಡುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿ.

ಆಡಳಿತ ನಡೆ ರೈತ ಮನೆಕಡೆ ಎಂಬ‌ಪರಿಕಲ್ಪನೆಯ ಎರಡನ ಪ್ರಯೋಗವಾಗಿರು ಈ ದಿನ ಸ್ಮಶಾನದ ,ರಾಜಕಾಲುವೆ ಒತ್ತುವರಿ ಈ ದಿನ ಗ್ರಾಮಪಂಚಾಯಿತಿ ಗೆ ಕುದ್ದಾಗಿ ಪರಿಶೀಲನ ಮಾಡಿ ಪೌತಿಖಾತೆ 17 ಪಿಂಚಣಿ 9 ಅರ್ಜಿಗಳನ್ನು ಸ್ವಿಕರಿಸಲಾಗಿದೆ ಇವುಗಳನು ಒಂದು ವಾರದ ಕಾಲದ ಮಿತಿಯೊಳಗೆ ದಾಖಲೆಗಳನ್ನು‌ಪಡೆದು ಇತ್ಯರ್ಥ ಮಾಡಲಾಗುವುದು.ಈ‌ ಭಾಗದ ರೈತ ಹೊಸದಾಗಿ ಸರ್ಕಾರದ ಜಮೀನುಗಳನ್ನು ಒತ್ತುವರಿಗೆ ಕೈ ಹಾಕಬಾರದು. ಗ್ರಾಮದಲ್ಲಿನ‌ ಎಲ್ಲಾ ಫಲಾನುಭವಿಗೂ ಸರ್ಕಾರ ಈ ಸೌಲಭ್ಯ ತಲುಪಿಸುವ ಸಲುವಾಗಿ ನಮ್ಮ ಮೂಲ ಉದ್ದೇಶ ವಾಗಿದ . ಸೌಲಭ್ಯವನ್ನು‌ಫಲಾನುಭವಿಳಿಗೆ ತುಲುಪಿಸುವ ತಾಲ್ಲೂಕು‌ ಮಟ್ಟದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸ್ವಯಂ ಪೇರಣೆಯಿಂದ. ಎಂತಹ ಸಮಸ್ಯೆ ಗಳಾದರು ತಾಲ್ಲೂಕು ಆಡಳಿತ ಪರಿಹಾರ ನೀಡುತ್ತದೆ.

ಇಂದು ಈ ಗ್ರಾಮದಲ್ಲಿ ರಾಜುಕಾಲುವೆ ಒತ್ತುವರಿ ,ಸ್ಮಶಾನ ಜಾಗದ ಒತ್ತವರಿಯನ್ನು ವಿಕ್ಷಸಿ ಅವುಗಳನ್ನು ತೆರವುಗೊಳಿಸುವಂತೆ ಅಧಿಕಾರಿಗಳಿಗೆ ತಿಳಿಸಲಾಗಿದೆ.
ಎಂದರು
ಈ ಸಮಯದಲ್ಲಿ ತಳಕು ಗ್ರಾಮದ ಮನೆ ಮನೆಗೆ ಹೋಗಿ ಪ್ರತಿಯೊಬ್ಬರ ಸಮಸ್ಯೆ ಗಳನ್ನು ಆಲಿಸಲಾಯಿತು.
ಈ ಪಿಂಚಣಿ ಅದಲತ್ ಕಾರ್ಯಕ್ರಮದಲ್ಲಿ ತಾಲ್ಲೂಕು‌ ಪಂಚಾಯಿತಿ ಮಾಜಿ‌‌‌ ಸದಸ್ಯೆ ರೂಪ, ತೋಟಗಾರಿಕೆ ಅಧಿಕಾರಿ ಆರ್.ವಿರೂಪಾಕ್ಷ ಪ್ಪ. ಅರೋಗ್ಯ ಅಧಿಕಾರಿ ಪ್ರೇಮಸುಧ ತಾಲ್ಲೂಕು‌‌ ಪಂಚಾಯಿತಿ ಎಡಿಎ.ಸಂತೋಷಕುಮಾರ್ ಸಿಡಿಪಿಓ ಮೊಹನ್ ಕುಮಾರಿ, ಗ್ರಾಮಪಂಚಾಯಿತಿ ಅಧ್ಯಕ್ಷೆ ಗಿರಿಜಮ್ಮ,ಉಪಾಧ್ಯಕ್ಷರು, ಪಿ.ಡಿಓ ಸದಸ್ಯರು, ಹಾಗೂ ಆರ್ ಐ.ರಫಿಸಾಬ್ ಹೋಬಳಿಯ ಗ್ರಾಮ ಲೆಕ್ಕಧಿಕಾರಿಗಳು ಇದ್ದರು.

[t4b-ticker]

You May Also Like

More From Author

+ There are no comments

Add yours