ಎನ್.ಸಿ.ಎಂ.ಎಲ್ ಕಂಪನಿ‌ಯಿಂದ ಗೋದಾಮು ಪ್ರಾರಂಭಿಸುವ ಮೂಲಕ ರೈತರ ಬೆಳೆ ರಕ್ಷಣೆಗೆ ಸಹಕಾರಿ: ಉದ್ಯಮಿ ಪದ್ಮನಾಭ

 

ಚಳ್ಳಕೆರೆ-08 ತಾಲ್ಲೂಕಿನ ರೈತರು ತಾವು ಬೆಳೆದ ಬೆಳೆಗಳನ್ನು ಶೇಖರಣೆ ಮಾಡಲು ಎನ್.ಸಿ.ಎಂ.ಎಲ್ ಕಂಪನಿ‌ ಬೆಂಗಳೂರು ರಸ್ತೆಯಲ್ಲಿ ಗೋದಾಮು ಪ್ರಾರಂಭಿಸುವ ಮೂಲಕ ರೈತರ ಬೆಳೆ ರಕ್ಷಣೆಗೆ ಸಹಕಾರಿಯಾಗಲಿದೆ ಎಂದು ಉದ್ಯಮಿ ಪದ್ಮನಾಭ ಹೇಳಿದರು.
ಅವರು ನಗರದಲ್ಲಿ ಎನ್.ಸಿ.ಎಂ.ಎಲ್ ಕಂಪನಿ ನೂತನವಾಗಿ ಪ್ರಾರಂಭಿಸಿರುವ ಗೋದಾಮು ಉದ್ಘಾಟಿಸಿ ಮಾತನಾಡಿದರು. ರೈತರಿಗೆ ಬೆಳೆ ಬೆಳೆದು‌ ಸೂಕ್ತ ಬೆಲೆ‌ ಸಿಗದೆ ಇದ್ದಾಗ ಅವುಗಳ ರಕ್ಷಣೆ ದೊಡ್ಡ ಸವಾಲಾಗಿದೆ . ಇಂತಹ ಸಮಯದಲ್ಲಿ ತಾವು ಬೆಳೆದ ಬೆಳೆಯನ್ನು ರಕ್ಷಣೆ ಮಾಡಿಕೊಳ್ಳಲು ಗೋದಾಮಿನಲ್ಲಿ ಶೇಖರಣೆ ಮಾಡಿಕೊಳ್ಳುವ ಮೂಲಕ ಬೆಳೆಯನ್ನು ರಕ್ಷಿಸಿಕೊಳ್ಳಬಹುದು ಎಂದರು.
ಎನ್.ಸಿ.ಎಂ.ಎಲ್ ಕಂಪನಿಯ ರಾಜ್ಯ ವ್ಯವಸ್ಥಾಪಕ ಮಲ್ಲಿಕಾರ್ಜನ್ ಮಾತನಾಡಿದರು. ಈ ಸಂದರ್ಭದಲ್ಲಿ ದಾವಣಗೆರೆ ಎನ್.ಸಿ.ಎಂ.ಎಲ್ ಕಂಪನಿಯ ವ್ಯವಸ್ಥಾಪಕ ಶಿವಕುಮಾರ್, ಉದ್ಯಮಿಗಳಾದ ನಾಗಭೂಷಣ್, ರಾಘವೇಂದ್ರ, ಸೂರ್ಯನಾರಾಯಣ, ಆಕ್ಸಿಸ್ ಬ್ಯಾಂಕ್ ವ್ಯವಸ್ಥಾಪಕ ಇಂದುಶೇಖರ್,
ಕಂಪನಿಯ ತಾಲ್ಲೂಕು ವ್ಯವಸ್ಥಾಪಕ ಎಸ್.ಗೋವಿಂದನಾಯ್ಕ್, ಎಸ್.ರಮೇಶ್,ತಿಪ್ಪೇಸ್ವಾಮಿ, ನಿಂಗಣ್ಣ ಮುಂತಾದವರು ಭಾಗವಹಿಸಿದ್ದರು.

[t4b-ticker]

You May Also Like

More From Author

+ There are no comments

Add yours