ಉಪ ನೋಂದಣಿ ಕಚೇರಿ ರಾಜಸ್ವ ಹಣ ವನ್ನು ವಂಚಿಸಿದ್ದ ಆರೋಪಿ ಮಂಜುನಾಥ್ ಯಾದವ್ ಬಂಧನ.

 

 

 

 

ಚಿತ್ರದುರ್ಗ:ಚಿತ್ರದುರ್ಗ ಉಪ ನೋಂದಣಿ ಕಚೇರಿ ರಾಜಸ್ವ ಹಣ ವನ್ನು ವಂಚಿಸಿದ್ದ ಆರೋಪಿಯನ್ನು ನಗರಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ನೊಂದಣಿ ಇಲಾಖೆಯ ಅಧಿಕೃತ ದಸ್ತಾವೇಜು ಬರಹಗಾರ ಹಾಗೂ ಶ್ರೀ ರಾಯ್ ಅಸೋಸಿಯೇಟ್ ಮಾಲೀಕ ಮಂಜುನಾಥ್ ಯಾದವ್ ಬಂಧಿತ ಆರೋಪಿ. ನಗರದ ಸಬ್ ರಿಜಿಸ್ಟರ್ ಕಚೇರಿಯ ಹಿಂಭಾಗದ ಚಿತ್ರದುರ್ಗ ಸಹಕಾರಿ ಕೋ ಆಪರೇಟಿವ್ ಬ್ಯಾಂಕ್ ಆವರಣದಲ್ಲಿ ಬಾಡಿಗೆ ರೂಮ್ ಪಡೆದು ಐಷಾರಾಮಿ ಯಾಗಿ ಮಾರ್ಪಾಡು ಮಾಡಿಕೊಂಡು, ಈತನ ಬಳಿ ಬರುವ ಸಾರ್ವಜನಿಕರಿಗೆ, ನಾನು ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ ಪ್ರಾಬಲ್ಯವಿರುವ  ವ್ಯಕ್ತಿಯಾಗಿದ್ದು,

 

 

ನನ್ನ ಕಡೆಯಿಂದ ದಸ್ತಾವೇಜುಗಳನ್ನು ಕೊಂಡೊಯ್ದರೆ ಒಂದೇ ದಿನದಲ್ಲಿ ನೊಂದಣಿ ಮಾಡಿಸಿಕೊಡುತ್ತೇನೆ ಎಂದು ಹೇಳಿ ನಂಬಿಸಿ, ದಸ್ತಾವೇಜುಗಳನ್ನು ಪಡೆದುಕೊಂಡು ನಂತರ, ಕಾನೂನುಬಾಹಿರವಾಗಿ ಸರ್ಕಾರಿ ದಾಖಲೆಗಳನ್ನು ಕೆ2 ಚಲನ್ ಗಳನ್ನು  ತಿದ್ದಿ, ತನ್ನ ಬ್ಯಾಂಕ್ ಖಾತೆಯಿಂದ  ದಸ್ತಾವೇಜುಗಳ ಮೌಲ್ಯಕ್ಕೆ ಅನುಗುಣವಾಗಿ ಸರ್ಕಾರಿ ಶುಲ್ಕವನ್ನು ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ವಿವಿಧ ಲೆಕ್ಕ ಶೀರ್ಷಿಕೆಗಳಲ್ಲಿ ಈ ಪೇಮೆಂಟ್ ಮಾಡುವ ಮೂಲಕ, ಕಡಿಮೆ ಶುಲ್ಕ ಪಾವತಿಸಿ, ಸರಿಯಾದ ಶುಲ್ಕ ಪಾವತಿಸಿರುವಂತೆ ಕೆ2 ಚಲನ್ ತಿದ್ದಿ, 1.67.71.170 ರೂ, ರಾಜಸ್ವ ಹಣವನ್ನು ಸರ್ಕಾರಕ್ಕೆ ವಂಚಿಸಿದ್ದಾರೆ.

ಈ ಬಗ್ಗೆ ಜಿಲ್ಲಾ ಉಪ ನೋಂದಣಾಧಿಕಾರಿಗಳು ನಗರ ಪೊಲೀಸ್ ಠಾಣೆಗೆ ದೂರು ನೀಡಿದ ಹಿನ್ನೆಲೆಯಲ್ಲಿ, ಪ್ರಕರಣ ದಾಖಲಾಗುತ್ತಿದ್ದಂತೆ ಚಿತ್ರದುರ್ಗ ಹಾಗೂ ಬೆಂಗಳೂರು ಉಚ್ಚ ನ್ಯಾಯಾಲಯದಲ್ಲಿ, ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿ, ಎರಡು ನ್ಯಾಯಾಲಯಗಳಲ್ಲಿ ಜಾಮೀನು ಸಿಗದೆ ಇದ್ದ ಕಾರಣ, ಚಿತ್ರದುರ್ಗ ನ್ಯಾಯಾಲಯಕ್ಕೆ ಶರಣಾದ ಹಿನ್ನೆಲೆಯಲ್ಲಿ, ನ್ಯಾಯಾಲಯದಿಂದ ಪೊಲೀಸ್ ವಶಕ್ಕೆ ಪಡೆದು, ಆರೋಪಿತ ನಿಂದ 1 ಲ್ಯಾಪ್ ಟ್ಯಾಪ್  1 cpu, 1 ಮೊಬೈಲ್  ವಶಪಡಿಸಿಕೊಳ್ಳಲಾಗಿದ್ದು, ಯಂತ್ರೋಪಕರಣಗಳನ್ನು ಹೆಚ್ಚಿನ ಪರಿಶೀಲನೆಗಾಗಿ ಎಫ್.ಎಸ್.ಎಲ್ ಕೇಂದ್ರಕ್ಕೆ ಕಳುಹಿಸಿ, ತನಿಖೆ ಮುಂದುವರೆದಿದೆ ಎಂದು ಜಿಲ್ಲಾ ಪೊಲೀಸ್ ಇಲಾಖೆ ತಿಳಿಸಿದೆ.

[t4b-ticker]

You May Also Like

More From Author

+ There are no comments

Add yours