ಭದ್ರಾವತಿ ಶಾಸಕ ಸಂಗಮೇಶ್ವರ್ ಪುತ್ರ ಚಳ್ಳಕೆರೆಯಲ್ಲಿ ಬಂಧನ.

 

 

 

 

ಚಿತ್ರದುರ್ಗ ಮಾ. ೬
ಭದ್ರಾವತಿಯಲ್ಲಿ ಇತ್ತೀಚೆಗೆ ನಡೆದ ಗಲಭೆಗೆ ಸಂಬಂಧಿಸಿದಂತೆ ಶಾಸಕ ಬಿ.ಕೆ.ಸಂಗಮೇಶ್ವರ ಪುತ್ರನನ್ನು ಪೊಲೀಸರು ಚಳ್ಳಕೆರೆಯಲ್ಲಿ ಬಂಧಿಸಿದ್ದಾರೆ.

ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ನಗರದ ಭರಣಿ ಹೋಟೆಲ್ನಲ್ಲಿ ತಂಗಿದ್ದ ವೇಳೆ ಅರೆಸ್ಟ್ ಮಾಡಲಾಗಿದ್ದು, ಶಾಸಕ ಸಂಗಮೇಶ್ ಪುತ್ರನನ್ನ ವಶಕ್ಕೆ ಪಡೆದಿರುವ ಭದ್ರಾವತಿ ಅPI ಅಭಯ್ ಪ್ರಕಾಶ್ ನೇತೃತ್ವದ ತಂಡ. ಬೆಳಗಿನ ಜಾವ ೨ ಗಂಟೆಗೆ ಚಳ್ಳಕೆರೆಯಲ್ಲಿ ಬಂಧಿಸಿ ಭದ್ರಾವತಿಗೆ ಕರೆದೊಯ್ದಿದಿದ್ಧಾರೆ.  ಅಧಿಕೃತ ಮಾಹಿತಿ ನೀಡಲು ನಿರಾಕರಿಸುತ್ತಿರುವ ಚಿತ್ರದುರ್ಗ ಪೊಲೀಸರು ನಮಗೆ ಮಾಹಿತಿಯೇ ಇಲ್ಲ ಎನ್ನುತ್ತಿದ್ದಾರೆ.

 

 

ಬಸವರಾಜ್ ಬಂಧಿತ. ಕಳೆದ ಫೆ.೨೮ರಂದು ರಾತ್ರಿ ಕನಕ ಮಂಟಪದಲ್ಲಿ ಗಲಭೆ ನಡೆದಿತ್ತು. ಬಿಜೆಪಿ ಕೆಲ ಮುಖಂಡರು ಸೇರಿ ಹಲವರ ಮೇಲೆ ಶಾಸಕ ಸಂಗಮೇಶ್ವರ, ಶಾಸಕರ ಪುತ್ರ ಬಸವರಾಜ ಸೇರಿ ಹಲವರ ಮೇಲೆ ಹಲ್ಲೆ ನಡೆಸಿದ ಆರೋಪ ಕೇಳಿಬಂದಿತ್ತು. ಶಾಸಕ ಸಂಗಮೇಶ್ ಸೇರಿದಂತೆ ಅವರ ಬೆಂಬಲಿಗರು ಮತ್ತು ಕುಟುಂಬಸ್ಥರ ಮೇಲೆ ಜಾತಿ ನಿಂದನೆ ಮತ್ತು ಕೊಲೆ ಯತ್ನ ಪ್ರಕರಣಗಳು ದಾಖಲಾಗಿದ್ದವು.

ಗಲಭೆಗೆ ಸಂಬಂಧಿಸಿದಂತೆ ಪರ-ವಿರೋಧ ವ್ಯಕ್ತವಾಗಿತ್ತು. ಈ ನಡುವೆ ಹಲ್ಲೆ ನಡೆಸಿದವರ ಬಂಧನಕ್ಕೆ ಒತ್ತಡ ಹೆಚ್ಚಾಗಿತ್ತು. ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾದ ಭದ್ರಾವತಿ ಹಳೇ ಪೇಪರ್ ಟೌನ್ ಪೊಲೀಸರು ಶನಿವಾರ ಬೆಳಗ್ಗೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯಲ್ಲಿ  ಬಸವರಾಜನನ್ನು ಬಂಧಿಸಿದ್ದಾರೆ. ಇದರೊಂದಿಗೆ ಬಂಧಿತರ ಸಂಖ್ಯೆ ೧೫ಕ್ಕೆ ಏರಿಕೆಯಾಗಿದೆ.

[t4b-ticker]

You May Also Like

More From Author

+ There are no comments

Add yours