ತಂತ್ರಜ್ಞಾನದ ಮೇಲೆ ಹಳ್ಳಿಯಲ್ಲೇ 20 ಜನರಿಗೆ ಸಾಫ್ಟ್ವೇರ್ ಉದ್ಯೋಗ ನೀಡಿರುವುದು ಒಂದು ಪವಾಡ: ಡಾ. ಶ್ರೀ ಶಿವಮೂರ್ತಿ ಮುರುಘಾ ಶರಣರು

 

 

 

 

ಹಳ್ಳಿಯಲ್ಲೇ ಸಾಫ್ಟ್ವೇರ್ ಉದ್ಯೋಗ !!

(ಹಳ್ಳಿಗರಿಗೆ ಹಳ್ಳಿಯಲ್ಲೇ ಆಧುನಿಕ ತಂತ್ರಜ್ಞಾನದ ಸಾಫ್ಟ್ವೇರ್ ಉದ್ಯೋಗ ನೀಡುತ್ತಿರುವುದು ಒಂದು ಪವಾಡವೇ ಸರಿ – ಮುರುಘಾ ಶ್ರೀ)

ಚಿತ್ರದುರ್ಗದ ಮುರುಘಾ ಮಠದ ಡಾ. ಶ್ರೀ ಶಿವಮೂರ್ತಿ ಮುರುಘಾ ಶರಣರು, ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಬುರುಜಿನರೊಪ್ಪ ಗ್ರಾಮದಲ್ಲಿ ನಡೆದ ಸಾಫ್ಟ್ವೇರ್ ಕೇಂದ್ರದ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಸ್ವಯಂಚಾಲಿತ ಕಾರ್ ಗಳಿಗೆ ಅಗತ್ಯವಾದಂತಹ ಅತ್ಯಾಧುನಿಕ ತಂತ್ರಜ್ಞಾನದ ಮೇಲೆ ಹಳ್ಳಿಯಲ್ಲೇ ಸುಮಾರು 20 ಜನರಿಗೆ ಸಾಫ್ಟ್ವೇರ್ ಉದ್ಯೋಗ ನೀಡುತ್ತಿರುವುದು ಒಂದು ಪವಾಡವೇ ಸರಿ ಎಂದು ಶ್ರೀಗಳು ನುಡಿದರು. ನಮ್ಮ ಹಳ್ಳಿಗಳು ಅಭಿವೃದ್ಧಿಯಾಗಬೇಕಾದರೆ ಆಧುನಿಕ ತಂತ್ರಜ್ಞಾನದಿಂದ ಮಾತ್ರ ಸಾಧ್ಯ. ಈ ಕೆಲಸವನ್ನು ಭರತ್ ಕುಮಾರ್ ಅವರು ದೂರದ ಅಮೆರಿಕದಿಂದ ಮಾಡುತ್ತಿದ್ದಾರೆ ಎಂದು ಶ್ರೀಗಳು ಶ್ಲಾಘಿಸಿದರು.

ನಮ್ಮ ಗ್ರಾಮಾಂತರದ ಜನ ಸೋಮಾರಿ ಕಟ್ಟೆಯಿಂದ ಹೊರಬರಬೇಕು ,ಸೋಮಾರಿ ಕಟ್ಟೆ ಗಳೆಲ್ಲ ಪ್ರಗತಿಯ ಕಟ್ಟೆಗಳಾಗಿ ಬದಲಾಗಬೇಕು ಎಂದು ಶ್ರೀಗಳು ನುಡಿದರು.

ಅಮೆರಿಕದ ಟೆಕ್ಸಾಸ್ ನಲ್ಲಿ ಕೆಲಸ ಮಾಡುತ್ತಿರುವ ಶ್ರೀ ಭರತ್ ಕುಮಾರ್ ಅವರು ತಮ್ಮ ಹಳ್ಳಿಯಾದ ಸಿದ್ದವನಹಳ್ಳಿಯ ಉದ್ಧಾರದ ಕನಸನ್ನು ಹಂಚಿಕೊಂಡರು. ಇವರು ಬೆಂಗಳೂರಿನ ಯೂತ್ ಫಾರ್ ಸೇವಾ ಸಂಸ್ಥೆಯ ಜೊತೆಗೂಡಿ ಬುರುಜಿನರೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳ ಸರ್ವಾಂಗೀಣ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿದ್ದಾರೆ.

ಭರತ್ ಕುಮಾರ್ ಅವರು ಗ್ರಾಮಾಭಿವೃದ್ಧಿ ಕಾರ್ಯದಲ್ಲಿ ಯುವಜನರಿಗೆ ಉದ್ಯೋಗ ನೀಡುವುದು ನಮ್ಮ ಮುಖ್ಯ ಧ್ಯೇಯ ಎಂದು ನುಡಿದರು. ಮುಂದಿನ ದಿನಗಳಲ್ಲಿ ಈ ಕೇಂದ್ರದಲ್ಲಿ ನೂರಕ್ಕೂ ಹೆಚ್ಚು ಉದ್ಯೋಗ ಅವಕಾಶಗಳನ್ನು ನೀಡಲಿದ್ದೇವೆ. ಸದಾವಕಾಶವನ್ನು ಎಲ್ಲಾ ಯುವಕ-ಯುವತಿಯರು ಉಪಯೋಗಿಸಬೇಕೆಂದು ಕರೆಕೊಟ್ಟರು. ತುಂಬಾ ಚೆನ್ನಾಗಿ ಕೆಲಸ ಮಾಡುವ ಯುವಕ-ಯುವತಿಯರಿಗೆ ವಿದೇಶಗಳಲ್ಲೂ ಕೆಲಸದ ಪಡೆಯುವ ಅವಕಾಶವಿದೆ ಎಂದು ಹೇಳಿದರು.

ಉದ್ಯೋಗ ನೀಡಿದ ಅನ್ಮರ್ಕುಂಗ್ ಸಾಫ್ಟ್ವೇರ್ ಕಂಪನಿಯ ಶ್ರೀ ಹರೀಶ್ ತಲಂಕಿ ಯವರು ಮಾತನಾಡಿ ಭರತ್ ಕುಮಾರ್ ರವರು, ತಮ್ಮ ಹಳ್ಳಿಯ ಅಭಿವೃದ್ಧಿ ಯೋಜನೆಯ ವಿಚಾರ ಹೇಳಿದಾಗ, ನಾನು ಬಹಳ ಪ್ರಭಾವಿತನಾದೆ.

 

 

ಇಲ್ಲಿನ ಯುವಕ ಯುವತಿಯರು ಬೆಂಗಳೂರಿನಲ್ಲಿ ಕೆಲಸ ಮಾಡುವವರ ಸರಿಸಮಾನರಾಗಿ ಕೆಲಸ ಮಾಡಿದ್ದಾರೆ ಎಂದು ಕೊಂಡಾಡಿದರು.

ಬುರುಜಿನರೊಪ್ಪ , ಚಿಕ್ಕ ಸಿದ್ದವನಹಳ್ಳಿ ಗ್ರಾಮಗಳ ಯವಕ ಯುವತಿಯರಿಗೆ ಅಗತ್ಯವಾದ ಸಾಫ್ಟ್ವೇರ್ 3 ತಿಂಗಳ ತರಬೇತಿಯನ್ನು ನೀಡಿ, ಇಂದು ಅವರು ತರಬೇತಿಯನ್ನು ಪೂರ್ಣಗೊಳಿಸಿ ಉದ್ಯೋಗವನ್ನು ಪಡೆದಿದ್ದಕ್ಕೆ ಸಾಕ್ಷಿಯಾಗಿ ಉದ್ಯೋಗ ಪತ್ರವನ್ನು ನೀಡಿದರು.

ಯೂತ್ ಫಾರ್ ಸೇವಾ ಸಂಸ್ಥೆಯ ಸ್ಥಾಪಕರಾದ ವೆಂಕಟೇಶಮೂರ್ತಿಯವರು ಹಳ್ಳಿಗಳ ನಿಜವಾದ ಉದ್ಧಾರವಾಗಬೇಕೆಂದರೆ ಹಳ್ಳಿಗರ ಪಾತ್ರ ಅತಿಮುಖ್ಯ. ಹೇಗೆ ಹೂವು ಒಳಗಿನಿಂದಲೇ ತಾನಾಗಿಯೇ ಅರಳುವುದೋ, ಹಾಗೆ ಹಳ್ಳಿಗಳಲ್ಲಿ ನಿಜವಾದ ವಿಕಾಸವಾಗಬೇಕೆಂದರೆ ಹಳ್ಳಿಗರು ಮುಖ್ಯ ಪಾತ್ರ ವಹಿಸಬೇಕು ಎಂದು ಕರೆಕೊಟ್ಟರು.

ಭರತ್ ಕುಮಾರ್ ರಂತೆ ಇನ್ನೂ ಹೆಚ್ಚು ಉದ್ಯಮಿಗಳು ಮತ್ತು ಅಭಿಯಂತರರು ತಮ್ಮ ತಮ್ಮ ತಮ್ಮ ಹಳ್ಳಿಗಳ ಉದ್ಧಾರಕ್ಕೆ ನಿಂತರೆ , ಹಳ್ಳಿಗಳ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ ಎಂದು ಅಭಿಪ್ರಾಯ ಪಟ್ಟರು.

ಜಿಲ್ಲೆಯ ಕಾರ್ಯನಿರ್ವಾಹಕ ಅಧಿಕಾರಿ ಡಾಕ್ಟರ್ ನಂದಿನಿ ದೇವಿ ಮಾತನಾಡಿ, ಓದಿರುವ ಯುವಕ ಯುವತಿಯರು ಉದ್ಯೋಗ ಅರಸಿ ನಗರದ ಕಡೆ ನೋಡುವ ಪರಿಸ್ಥಿತಿಯನ್ನು ನಿವಾರಿಸಲು ಇದು ಅತ್ಯುತ್ತಮ ಹೆಜ್ಜೆ ಎಂದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಕುಬೇರಪ್ಪ ಅವರು ಭಾಗವಹಿಸಿದ್ದರು. ಎಸ್ ಜೆ ಎಂ ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಮೋಹನ್ ಕುಮಾರ್, ರಿಜಿಸ್ಟ್ರಾರ್ ಜಿತೇಂದ್ರ ಶೇಖಾವತ್, ಎಂಜಿನಿಯರಿಂಗ್ ಕಾಲೇಜಿನ ಪ್ರಾಚಾರ್ಯ ಪಿ ಬಿ ಭರತ್ ಹಾಗೂ ಮೈಸೂರಿನ ಜಯಚಾಮರಾಜೇಂದ್ರ ಕಾಲೇಜಿನ ಮಾಜಿ ಉಪ ಕುಲಪತಿಗಳಾದ ಸಂಗಮೇಶ್ವರ್ , ಎಸ್ ಜೆ ಎಂ ಅವರು ಕೂಡ ಉಪಸ್ಥಿತರಿದ್ದರು

ಈ ಕಾರ್ಯಕ್ರಮದಲ್ಲಿ ಬೆಂಗಳೂರಿನ ಕನ್ನಡ ಪ್ರಾಧ್ಯಾಪಕರಾದ ಶ್ರೀಮತಿ ಉಷಾ ತವನಿಧಿಯ ಅವರು ಸ್ವಾಗತಿಸಿದರು ಹಾಗೂ ಕೋಚೆಡ್ ಸಂಸ್ಥೆಯ ಸ್ಥಾಪಕರಾದ ಶ್ರೀ ಅನಿಕೇತನ ಅವರು ವಂದಿಸಿದರು. ಈ ಕಾರ್ಯಕ್ರಮದಲ್ಲಿ ಸ್ಥಳೀಯ ಶಾರದಾ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಲೋಹಿತ್ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.

ಈ ಕಾರ್ಯಕ್ರಮವು ಸುತ್ತಮುತ್ತಲಿನ ಗ್ರಾಮಗಳ ಯುವಕ-ಯುವತಿಯರ ಆಕಾಂಕ್ಷೆ, ಕನಸುಗಳನ್ನು ನನಸು ಮಾಡುವತ್ತ ದಿಟ್ಟ ಹೆಜ್ಜೆಯನ್ನು ಇಡುವಲ್ಲಿ ಸಾಕ್ಷಿಯಾಯಿತು.

[t4b-ticker]

You May Also Like

More From Author

+ There are no comments

Add yours