ಹಣದ ಆಸೆಗೆ ಹೋಗಿ ಎಸಿಬಿ ಬಲೆಗೆ ಬಿದ್ದ ಬಿಲ್ ಕಲಕ್ಟರ್

 

 

 

 

ಹಿರಿಯೂರು:ಇಂದು ಬೆಳಿಗ್ಗೆ 9.00 ಗಂಟೆಗೆ ಫಿರ್ಯಾದಿದಾರರಾದ  ಎಸ್.ತಿಪ್ಪಮ್ಮ ಕೋಂ ಲೇಟ್ ಕೆ. ವೀರಣ್ಣ, ದಾಸಣ್ಣನಮಳಿಗೆ ಗ್ರಾಮ, ಐಮಂಗಲ ಹೋಬಳಿ, ಹಿರಿಯೂರು ತಾಲ್ಲೂಕ್, ಇವರು ಠಾಣೆಗೆ ಹಾಜರಾಗಿ ದೂರು ನೀಡಿದ್ದು, ಪಿಲ್ಯಾದಿಯ ಬಾಲ್ಕು ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕು ದಾಸಣ್ಣನಮಾಳಿಗೆ ಗ್ರಾಮದ ಖಾತೆ ಸಂಖ್ಯೆ:5 ರಲ್ಲಿನ ಮನೆಯ ಬಾಲ್ಕು ಈ ಸ್ವತ್ತು ಮಾಡಿಸುವ ಸಲುವಾಗಿ ದಾಖಲಾತಿಗಳನ್ನು ಬೊಮ್ಮನಾಯಕ, ಬಿಲ್ ಕಲೆಕ್ಟರ್, ಗ್ರಾಮ ಪಂಚಾಯತಿ ಕಛೇರಿ, ಐಮಂಗಲ ಇವರಿಗೆ ನೀಡಿದ್ದು, ಈ ಸ್ವತ್ತು ಮಾಡಿಕೊಡಲು ದಿನಾಂಕ:27.12.2021 ರಂದು ಪಿರಾದಿಗೆ 4000/ ರೂಗಳ ಲಂಚದ ಹಣಕ್ಕೆ ಬೇಡಿಕೆ ಇಟ್ಟಿರುತ್ತಾರೆ. ಅದರಂತೆ ಚಿತ್ರದುರ್ಗ ಎ.ಸಿ.ಬಿ. ಪೊಲೀಸ್ ಠಾಣಾ ಮೊ.ನಂ:15/2021 ಕಲಂ : 7(೩) ಪಿ.ಸಿ. ಆಕ್ಟ್-1988 ರ ರೀತ್ಯಾ ಪ್ರಕರಣ ದಾಖಲಿಸಿ ತನಿಖೆಯನ್ನು ಕೈಗೊಂಡಿರುತ್ತದೆ.

 

 

 

ಶ್ರೀ ಜಯಪ್ರಕಾಶ್, ಪೊಲೀಸ್ ಅಧೀಕ್ಷಕರು, ಭ್ರಷ್ಟಾಚಾರ ನಿಗ್ರಹದಳ, ಪೂರ್ವ ವಲಯ, ದಾವಣಗೆರೆ ರವರ ಮಾರ್ಗದರ್ಶನದಲ್ಲಿ ಚಿತ್ರದುರ್ಗ ಪೊಲೀಸ್ ಠಾಣೆಯ ಅಧಿಕಾರಿಗಳಾದ ಶ್ರೀ ಬಸವರಾಜ್ ಆರ್ ಮಗದುಮ್, ಡಿ.ವೈಎಸ್‌ಪಿ, ಶ್ರೀ ಉಮೇಶ್ ಕುಮಾರ್ ಎಸ್.ಎಮ್, ಪೊಲೀಸ್ ನಿರೀಕ್ಷಕರು, ಮತ್ತು ಸಿಬ್ಬಂದಿರವರು ತನಿಖೆ ಕೈಗೊಂಡಿದ್ದು, ODO:-29.12.2021 ರಂದು ಆರೋಪಿತರಾದ ಬೊಮ್ಮನಾಯಕರವರು ಪಿದ್ಯಾದಿ ಕಡೆಯಿಂದ ಗ್ರಾಮ ಪಂಚಯಿತಿ ಕಛೇರಿಯಲ್ಲಿ 4,000/- ರೂ ಲಂಚದ ಹಣವನ್ನು ಪಡೆಯುವಾಗ ಆರೋಪಿತರನ್ನು ಟ್ರ್ಯಾಪ್ ಮಾಡಿ ಲಂಚದ ಹಣವನ್ನು ವಶಕ್ಕೆ ಪಡೆದಿರುತ್ತದೆ. ಆರೋಪಿತರನ್ನು ವಶಕ್ಕೆ ಪಡೆದು ಲಂಚದ ಹಣವನ್ನು ವಶಕ್ಕೆ ಪಡೆದು, ಆರೋಪಿತರನ್ನು ದಸ್ತಗಿರಿ ಮಾಡಿ ಘನ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಪ್ರಕರಣದ ತನಿಖೆ ಮುಂದುವರೆದಿದೆ.

[t4b-ticker]

You May Also Like

More From Author

+ There are no comments

Add yours