ಸ್ವಯಂ ಉದ್ಯೋಗದ ಜೊತೆಗೆ ವ್ಯಾಪರ ಜ್ಞಾನ ಬೆಳೆಸಿಕೊಳ್ಳಿ: ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ

 

 

 

 

ಪ್ರಕಟನೆ ಕೃಪೆಗೆ
ಚಿತ್ರದುರ್ಗ: ಸ್ವಯಂ ಉದ್ಯೋಗದ ಜೊತೆಗೆ ವ್ಯಾಪರ ಜ್ಞಾನ ಬೆಳೆಸಿಕೊಂಡು ಆರ್ಥಿಕವಾಗಿ ಸಬಲರಾಗುವ ಕಡೆಗೆ ದಿಟ್ಟ ಹೆಜ್ಜೆ ಹಾಕಬೇಕು ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಹೇಳಿದರು.

ತಾಲೂಕಿನ ದೊಡ್ಡಸಿದ್ದವ್ವನಹಳ್ಳಿ ಗ್ರಾಮದಲ್ಲಿ ಡಾ.ಬಾಬು ಜಗಜೀವನರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ‌ ನಿಯಮಿತ ಸಂಸ್ಥೆ ವತಿಯಿಂದ 2020-21 ನೇ ಸಾಲಿನ ಪರಿಶಿಷ್ಟ ಜಾತಿಯ ಚರ್ಮ ಕುಶಲಕರ್ಮಿಗಳಿಗೆ ಕೌಶಲ್ಯ ಅಭಿವೃದ್ಧಿ ಮತ್ತು ಆದಾಯಗಳಿಕೆಗಾಗಿ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಎಲ್ಲಾರೂ ಸಹ ಸರ್ಕಾರಿ ಉದ್ಯೋಗ ದೊರಕುವುದು ಸಾಧ್ಯವಿಲ್ಲ. ಮಹಿಳೆಯರಿಗೆ ನಿಗಮಗಳಿಂದ ತರಬೇತಿಗಳನ್ನು ನೀಡಲಾಗುತ್ತಿದೆ.ಅದರಂತೆ ಇಂದು ಜಗಜೀವನರಾಂ ನಿಗಮದಿಂದ 30 ಮಹಿಳೆಯರಿಗೆ ಉಚಿತ ತರಬೇತಿ ಜೊತೆ ಆರು ಸಾವಿರ ಪ್ರೋತ್ಸಾಹ ಧನ ಮತ್ತು ಉಚಿತ ಹೊಲಿಗೆ ಯಂತ್ರ ನೀಡಲಾಗಿದೆ ಎಂದರು.

ಡಾ.ಜನಜೀವನರಾಂ ನಿಗಮದಿಂದ ಸಂಯೋಜನಕರ ಸಂಪರ್ಕ ಮಾಡಿ ಕಚ್ಚಾ ವಸ್ತುಗಳ ಪಡೆದುಕೊಂಡು ನಿಗಮ ಮಾರಟ ಮಾಡುವ ವಸ್ತುಗಳನ್ನು ತಯಾರು ಮಾಡಿದರೆ ನಿಗಮದಿಂದ ಖರೀದಿ ಮಾಡಲು ಅವಕಾಶವಿದೆ ‌ ಇದನ್ನು ಸದುಪಯೋಗ ಮಾಡಿಕೊಳ್ಳಿ ಎಂದರು. ಇದೇ ಸಂದರ್ಭದಲ್ಲಿ
ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದಿಂದ ಬಟ್ಟೆ ಹೊಲಿಯುವ ತರಬೇತಿಯನ್ನು ನೀಡಿ ಎಂದು ಅಧಿಕಾರಿಗೆ ಸೂಚಿಸಿದರು.

 

 

ಮಹಿಳೆಯರು ಯಾರ ಹಂಗಿಲ್ಲದೆ ಸ್ವಯಂ ಉದ್ಯೋಗದ ಮೂಲಕ ತಮ್ಮ ಮಕ್ಕಳ ಶಿಕ್ಷಣ ಜೊತೆಗೆ ಕಟುಂಬ ನಡೆಸುವಷ್ಟು ಆರ್ಥಿಕವಾಗಿ ಸದೃಢವಾಗಬಹುದು. ಕಚ್ಚಾ ವಸ್ತುಗಳ ಖರೀದಿ ಮಾಡಿ ಬಟ್ಟೆಗಳ ಮಾರಟ ಮಾಡುವ ವ್ಯಾಪರಕ್ಕೆ ಒತ್ತು ನೀಡಿ ಎಂದರು. ಫ್ಯಾಷನ್ ಯುಗಕ್ಕೆ ತಕ್ಕಂತೆ ಬಟ್ಟೆಯನ್ನು ಹೊಲಿಯುವುದು ಕಲಿಯಿರಿ‌ ಎಂದು ತರಬೇತಿ ಪಡೆದವರಿಗೆ ಆತ್ಮ ವಿಶ್ವಾಸ ಮೂಡಿಸಿದರು.

ದೇಶದಲ್ಲಿ ಅನೇಕ ವ್ಯಕ್ತಿಗಳು ದೊಡ್ಡ ಸ್ಥಾನಗಳಿಗೆ ಏರಿದಾಗ ಹಳೆಯ ದಿನಗಳನ್ನು ಮರೆಯುತ್ತಾರೆ. ಆದರೆ ಪ್ರೋ.ಲಿಂಗಪ್ಪ ತನ್ನ ಹಳೆ ದಿನ ಮತ್ತು ಊರನ್ನು ಮರೆಯದೆ ಹುಟ್ಟಿ ಬೆಳೆದ ಹಳ್ಳಿಗೆ ಅನುದಾನ ಹಾಕಿರುವುದು ಸಂತೋಷದ ವಿಚಾರವಾಗಿದೆ ಎಂದ ಸ್ಮರಿಸಿದರು.

ಡಾ.ಬಾಬು ಜಗಜೀನರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಪ್ರೋ.ಲಿಂಗಪ್ಪ ಮಾತನಾಡಿ ದೊಡ್ಡಸಿದ್ದವ್ವನಹಳ್ಳಿ ನಾನು ನನ್ನ ತಂದೆ ಬದುಕು ನಡಸಿದ ಗ್ರಾಮವಾಗಿದ್ದು ನನ್ನ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣ ವಿದ್ಯಾಭ್ಯಾಸ ಮುಗಿಸಿದ ಹಳ್ಳಿಯಾಗಿದೆ.ಇಲ್ಲಿ ಅನೇಕ ಬಾರಿ ಬಂದಿದ್ದು ಇಲ್ಲಿನ ಜನರ ಜೊತೆ ಉತ್ತಮ ಒಡನಾಟವಿದೆ ಎಂದರು. ನಗಹರಿ ಸದ್ಗುರು ಭವನಕ್ಕೆ 20 ಲಕ್ಷ ಹಣ ಸರ್ಕಾರದಿಂದ ಕೊಡಿಸುವ ಕೆಲಸ ಮಾಡಿದ್ದೇನೆ. 2 ಎಕರೆ ಜಾಗದಲ್ಲಿ ಡಿ.ಎಸ್. ಹಳ್ಳಿಯಲ್ಲಿ 1.25 ಕೋಟಿ ವೆಚ್ಚದಲ್ಲಿ ಚರ್ಮ ಶಿಲ್ಪ ಭವನ ಮಾಡಲಾಗುತ್ತಿದೆ. ನಾನು ನನ್ನ ಅಧಿಕಾರ ವ್ಯಾಪ್ತಿಯಲ್ಲಿ ಈ‌ ಭಾಗದ ಪರಿಶಿಷ್ಟ ಜಾತಿಯ 30 ಮಹಿಳೆಯರಿಗೆ ಪ್ರೋತ್ಸಾಹ ಧನ, ಉಚಿತ ತರಬೇತಿ ಮತ್ತು ಹೊಲಿಗೆ ಯಂತ್ರ ನೀಡಿದ್ದೇವೆ.
ನಮ್ಮ ಇಲಾಖೆಯಿಂದ ಕಚ್ಚಾ ವಸ್ತುಗಳನ್ನು ಸಹ ನೀಡಲಾಗುತ್ತಿದ್ದು ಅದರಿಂದ
ಚಪ್ಪಲಿ, ಪರ್ಸ್, ವೆನಿಟಿಬ್ಯಾಗ್,ಬೆಲ್ಟ್ ತಯಾರು ಮಾಡಿ ನಮ್ಮ ನಿಗಮಕ್ಕೆ ನೀಡಿ ಎಂದು ತಿಳಿಸಿದರು. ನಿಗಮದ ಸೌಲಭ್ಯಗಳನ್ನು ಬಳಸಿಕೊಂಡು ಆರ್ಥಿಕವಾಗಿ ಸಬಲರಾಗಬೇಕು. ಮುಂದಿನ ದಿನದಲ್ಲಿ ಇನ್ನಷ್ಟು ಜನರಿಗೆ ತರಬೇತಿ ನೀಡಲು‌ ಹಣ ನೀಡುತ್ತೇನೆ. ಈ ಗ್ರಾಮದ ಮೇಲೆ ವಿಶೇಷ ಪ್ರೀತಿ‌ ಇದೆ ಜೊತೆಗೆ ತಿಪ್ಪಾರೆಡ್ಡಿ ಅವರು ಸಹ ಈ ಗ್ರಾಮಕ್ಕೆ ಶಾಲೆಗೆ 80 ಲಕ್ಷ, ದೇವಸ್ಥಾನಕ್ಕೆ 15 ಲಕ್ಷ, ರಸ್ತೆಗೆ 1 ಕೋಟಿ ಹಣ ಹಾಕಿದ್ದು ಅವರಿಗೆ ಹಿಂದುಳಿದವರ ಬಗ್ಗೆ ಹೆಚ್ಚಿನ ಕಾಳಜಿಯನ್ನು ನಾನು ಯಾವಾಗಲೂ ಗಮನಿಸಿದ್ದೇನೆ ಎಂದರು.ಶಾಸಕರು‌ ಮತ್ತು ನಾನು ಇನ್ನು ಹೆಚ್ಚಿನ ಅನುದಾನ ನೀಡಿ ಬೃಹತ್ ಕೈಗಾರಿಕಾ ಮೇಳ ಅಥವಾ ಕಾರ್ಯಕ್ರಮ ಮಾಡುತ್ತೇನೆ ಎಂದು ತಿಳಿಸಿದರು.

ಜಿಲ್ಲಾ ಸಂಯೋಜನಕರಾದ ಗಂಗಾಧರ್ ಮಾತನಾಡಿ ಮಹಿಳೆಯರಿಹೆ ಹೊಲಿಗೆ ತರಬೇತಿ ಶಿಬಿರ, ನೇರಸಾಲ, ದುಡಿಮೆ ಬಂಡಾವಾಳ, ಸ್ವಾವಲಂಬಿ‌ಮಾರಟ ಮಳಿಗೆ, ಕುಟೀರ್, ವಸತಿರಹಿತರಿಗೆ ಮನೆ ನೀಡುವ ಕಾರ್ಯಕ್ರಮ ಇಲಾಖೆಗಳಿಂದ ನೀಡಲಾಗುತ್ತಿದ್ದು ಎಲ್ಲಾವನ್ನು ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಿ ಆರ್ಥಿಕವಾಗಿ ಸದೃಢವಾಗಬೇಕು ಎಂದು ಮನವಿ ಮಾಡಿದರು.

ಗ್ರಾಮ ಪಂಚಾಯತಿ ಅಧ್ಯಕ್ಷರಾದ ಭಾರತಿ ರಾಜಣ್ಣ, ಸದಸ್ಯರಾದ ಭಾಗ್ಯಮ್ಮ, ವಿದ್ಯಾವತಿ, ಸುಧಾ, ಗಂಗಮ್ಮ, ರಾಜಶೇಖರ್, ಜಿಲ್ಲಾ ಸಂಯೋಜನಕರಾದ ಗಂಗಾಧರ್ ಮತ್ತು ಗ್ರಾಮಸ್ಥರು ಇದ್ದರು.

[t4b-ticker]

You May Also Like

More From Author

+ There are no comments

Add yours