*ದೈವದ ಅಂಗಳದಿ ಶ್ರೀಜಗದ್ಗುರುಗಳವರ ಆರೈಕೆಯಲ್ಲಿ ಬೆಳೆದ ತರಕಾರಿ ಭಕ್ತರ ಮನೆ ಮನೆಗೆ ವಿತರಣೆ.*
*ಗುರುವೆಂಬ ಪದಕ್ಕೆ ಹೊಸ ವ್ಯಾಖ್ಯಾನ ಕೊಟ್ಟ ಸ್ವಾಮಿತ್ವಕ್ಕೆ “ಗೌರವ” ತಂದುಕೊಟ್ಟು “ಸ್ವಾಮೀಜಿ” ಪದದ ಅರ್ಥವ್ಯಾಪ್ತಿ ವಿಸ್ತಾರವನ್ನು ಹೆಚ್ಚಿಸಿ, ಸ್ವಾಮಿತ್ವಕ್ಕೆ ಅವರು ಹೊಸ ಆಯಾಮವನ್ನು ಒದಗಿಸಿಕೊಟ್ಟವರು.ಶತಮಾನದ ಸಂತ ಶ್ರೇಷ್ಟರಾಗಿ ಬಡವರ ಐಸಿರಿಯಾಗಿ, ತ್ರಿವಿಧ ದಾಸೋಹಿಯಾಗಿ ತಪೋನಿಷ್ಠ, ತತ್ವನಿಷ್ಠ, ಅನುಷ್ಠಾನನಿಷ್ಠ, ದಾಸೋಹನಿಷ್ಠರಾಗಿ ಕರ್ತೃತ್ವ ತಪೋಬಲದಿಂದಾಗಿ ಸಿರಿಗೆರೆ ಮಠವನ್ನು ಲಿಂಗೈಕ್ಯ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ ಆಶಯದಂತೆ ತರಳಬಾಳು ಬೃಹನ್ಮಠವನ್ನು ಒಂದು ಜನಾಂಗದ, ಒಂದು ಸಮುದಾಯದ ಮತಕಾಶಿಯಾಗಿಸದೆ ಅದು ಸರ್ವಜನಾಂಗದ, ಜ್ಞಾನಕಾಶಿ ಸಧ್ಧರ್ಮಕಾಶಿ, ಅನ್ನಕಾಶಿಯಾಗಿಯೇ ಉಳಿದುಕೊಂಡಿದ್ದರೆ ಆದು ಉಪಮೆಯಾಗಿ, ಉಪದೇಶವಾಗಿ, ಉತ್ಪ್ರೇಕ್ಷಾತೀತ ಶ್ರೀ ಜಗದ್ಗುರುಗಳವರ ವ್ಯಕ್ತಿತ್ವದಿಂದ. ಯಾವುದೋ ಒಂದು ಧರ್ಮಕ್ಕೆ ಸೀಮಿತವಾಗದೆ ಎಲ್ಲ ಧರ್ಮಗಳ ಮತ್ತು ಸಮಾಜದ ಏಳಿಗೆಗಾಗಿ ಶ್ರಮಿಸುತ್ತಿರುವ ದೇಶ ಮತ್ತು ಸಮಾಜದ ಪ್ರಗತಿಯ ಬಗ್ಗೆ ಕಳಕಳಿಯಿರುವ ಮಹಾಗುರುವಾಗಿ ಮುಂದಿನ ಪೀಳಿಗೆಯ ಬೆಳವಣಿಗೆಗಾಗಿ ಹಗಲಿರುಳು ಶ್ರಮವರಿಯದ ಮಹಾಂತರಾಗಿರುವವರು ತರಳಬಾಳು ಜಗದ್ಗುರು ಬೃಹನ್ಮಠದ ಪೀಠಾಧಿಪತಿಗಳಾದ ಶ್ರೀ ಮದುಜ್ಜಯನಿ ಸದ್ದರ್ಮ ಸಿಂಹಾಸನಾಧೀಶ ಶ್ರೀ ತರಳಬಾಳು ಜಗದ್ಗುರು ೧೧೦೮ ಡಾ॥ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು.*
*ಕೋವಿಡ್-19 ಕೊರೋನಾ ವೈರಸ್ ನಿಯಂತ್ರಣಕ್ಕೆ ಸರಕಾರ ಲಾಕ್ ಡೌನ್ ಜಾರಿ ಮಾಡಿದೆ. ಇದರಿಂದ ನಿತ್ಯ ದುಡಿದು ತಿನ್ನುವ ಕಾರ್ಮಿಕ ವರ್ಗ, ನಿರಾಶ್ರಿತರಾದವರು ಒಂದು ಹೊತ್ತಿನ ಊಟಕ್ಕೂ ಪರದಾಡುತ್ತಿದ್ದಾರೆ. ಜನರು ಆಹಾರಕ್ಕಾಗಿ ಪರದಾಡುವಂತ ಸ್ಥಿತಿ ನಿರ್ಮಾಣವಾಗಿದೆ.ಅಂತಹ ಕೊರೋನಾ ಸುರಕ್ಷತೆ, ರಕ್ಷಣೆ ತೊಂದೆರೆಯಲ್ಲಿರುವ ಜನರಿಗೆ ಸಹಾಯ ಮಾಡುವುದರಲ್ಲಿ,ಕೊರೊನಾ ನಿರ್ಮೂಲನಾ ಯುದ್ಧದಲ್ಲಿ ಅವಿರತವಾಗಿ ಹೋರಾಡುತ್ತಿರುವರಲ್ಲಿ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠದ ಸೇವಾಕೈಂಕರ್ಯವು ಮುಂಚೂಣಿಯಲ್ಲಿದೆ. ಸೇವೆಯ ಮಹಾಪರ್ವದ ದಿವ್ಯ ನೇತೃತ್ವವಹಿಸಿರುವ ಪೂಜ್ಯ ಶ್ರೀ ಜಗದ್ಗುರುಗಳವರ ಮಾತೃವಾತ್ಸಲ್ಯ ಹೃದಯದ ಜನರಾರೋಗ್ಯ ಕಾಳಜಿಗೆ ವಿಶ್ವದೆಲ್ಲೆಡೆಯಿಂದ ಭಕ್ತಿ ಪೂರ್ವಕ ಗೌರವಗಳು ಹರಿದುಬರುತ್ತಿವೆ.*
*ಭಕ್ತರು ತಮ್ಮ ಶಕ್ತಾನುಸಾರ ಮಠಕ್ಕೆ ದವಸ,ಧಾನ್ಯ,ಕಾಣಿಕೆ ದಾಸೋಹಕ್ಕೆ ತರಕಾರಿ ಇತ್ಯಾದಿಗಳನ್ನು ಅರ್ಪಿಸುವುದು ನಮ್ಮ ಪರಂಪರೆಯ ಶ್ರೇಷ್ಠತೆಗಳಲ್ಲೊಂದು. ಆದರೆ ಮಠವೇ ಭಕ್ತರ ಮನೆ ಮನೆಗಳಿಗೆ ಮಠದ ಜಮೀನಿನಲ್ಲಿ ಉತ್ಕೃಷ್ಟವಾಗಿ ಬೆಳೆದ ತಾಜಾ ತಾಜಾ ತರಕಾರಿಗಳನ್ನು ವಿತರಿಸುವ ಕೈಂಕರ್ಯಕ್ಕೆ ಮುನ್ನುಡಿ ಬರೆದಿದ್ದು ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ. ಹತ್ತಾರು ವರ್ಷಗಳ ಹಿಂದೆ ಮಠದಲ್ಲಿ ಜಮೀನುಗಳಲ್ಲಿ ಬೆಳೆದ ಮೊದಲ ಲಕ್ಷಾಂತರ ರೂಗಳ ಬೆಲೆ ಕಾಣಲಿದ್ದ ಕದಳೀ ಫಲವನ್ನು ಭಕ್ತರಿಗೆ ಪ್ರಸಾದದ ರೂಪದಿ ಹಂಚಿ ಶಿಷ್ಯರ ಸಂತೋಷದಲ್ಲಿ ಸಂತೃಪ್ತಿ ಕಾಣುವ ಸರ್ವತ್ರ ಪೂಜ್ಯ ಶ್ರೀ ತರಳಬಾಳು ಜಗದ್ಗುರುಗಳವರು. ಕೊರೊನಾ ನಿಯಂತ್ರಣಕ್ಕೆ ಬಾರದೇ ಹಳ್ಳಿ ಊರು ನಗರಗಳು ಸ್ಮಶಾನಗಳಾಗುತ್ತಿರುವ ಸಂದರ್ಭದಲ್ಲಿ ಕೊರೊನಾ ಸೋಂಕಿತರಿಗೆ ನೆರವಾಗುವ ಆಶಯದಿಂದ ದಾವಣಗೆರೆ,ಹರಪನಹಳ್ಳಿ ಮತ್ತು ಸಿರಿಗೆರೆಯಲ್ಲಿ ಅತ್ಯಾಧುನಿಕ ಸೌಲಭ್ಯಗಳುಳ್ಳ ತರಳಬಾಳು ಕೋವಿಡ್ ಕೇರ್ ಸೆಂಟರ್ ಗಳು ಕಳೆದೊಂದು ತಿಂಗಳಿನಿಂದ ಕಾರ್ಯ ನಿರ್ವಹಿಸುತ್ತಿವೆ. ದಾವಣಗೆರೆ, ಚಿತ್ರದುರ್ಗ, ಸಿರಿಗೆರೆ, ಹರಪನಹಳ್ಳಿ, ಹೊಳಲ್ಕೆರೆ, ಬೆಂಗಳೂರು, ಹರಿಹರ ಜಿಲ್ಲಾಸ್ಪತ್ರೆಯ ರೋಗಿಗಳಿಗೆ, ವಾರಿಯರ್ಸ ಗಳಿಗೆ, ಸೋಂಕಿತರ ಪರಿಚಾರಕರಿಗೆ, ಹಸಿವಿನಿಂದ ಬಳಲುತ್ತಿರುವವರಿಗೆ,ವಾಹನ ಚಾಲಕರುಗಳಿಗೆ ನಿತ್ಯವೂ ಹತ್ತಾರು ಸಾವಿರ ಸಂಕಷ್ಟಿತರಿಗೆ ಉತ್ಕೃಷ್ಟ ಗುಣಮಟ್ಟದ ಚಿಕಿತ್ಸೆ, ಔಷಧಿ, ಉಪಹಾರ, ಪ್ರತಿ ದಿನ ಬೆಳಿಗ್ಗೆ, ಮದ್ಯಾಹ್ನ, ರಾತ್ರಿ ಗುಣಮಟ್ಟದ ಉಪಹಾರ ಊಟದ ವ್ಯವಸ್ಥೆಯನ್ನು ಕಲ್ಪಿಸಿರುವುದು ರಾಜ್ಯದೆಲ್ಲೆಡೆ ಪ್ರಶಂಸೆಗೆ ಪಾತ್ರವಾಗಿದೆ.*
*ಸಿರಿಗೆರೆಯಿಂದ ಆರು ಕಿ.ಮಿ ದೂರದಲ್ಲಿರುವ ನೂರಾರು ಎಕರೆ ಭೂ ಪ್ರದೇಶದಲ್ಲಿ ಹಸಿರಿನಿಂದ ಕಂಗೊಳಿಸುವ ಪ್ರಶಾಂತಿಯ ತಾಣವಾದ ಶಾಂತಿವನದಲ್ಲಿ ಸರ್ವತ್ರ ಸಮಾನತೆಯ ಸದ್ವಿಚಾರ ಆರಾಧನಾ ಭಾವದ ಪ್ರತಿರೂಪಕರಾಗಿರುವ ಪೂಜ್ಯ ಶ್ರೀ ಜಗದ್ಗುರುಗಳವರು ಪೂಜಾ ಮರಿಗಳೊಡನೆ ಶಾಂತಿವನದ ದೈವೀ ಅಂಗಳದಲ್ಲಿ ಬದನೆಕಾಯಿ, ಟೊಮೋಟ ಸೇರಿದಂತೆ ಹಲವು ತರಕಾರಿಗಳನ್ನು ತಮ್ಮ ಕರಕಮಲಗಳಿಂದ ಬೆಳೆದು ಪ್ರೇರಣೆಯಾಗಿದ್ದಾರೆ.ಕೃಷಿ ಋಷಿ ಅಭಿದಾನದ ಶ್ರೀ ಜಗದ್ಗುರುಗಳವರ ಆರೈಕೆಯ ಫಲವಾಗಿ ವಿವಿಧ ತರಕಾರಿಗಳು ನಳನಳಿಸುತ್ತಿವೆ. ಪ್ರಸ್ತುತ ಸಂದರ್ಭದಲ್ಲಿ ಎಲ್ಲರೂ ಮನೆಯಲ್ಲಿಯೇ ಇರಬೇಕು ಅನಗತ್ಯ ಓಡಾಟದಿಂದ ಅಪಾಯ ಕಟ್ಟಿಟ್ಟ ಬುತ್ತಿ ಎನ್ನುವಂತಿರುವಾಗ. ಎಲ್ಲರ ಮನೆಯವರ ಸ್ಥಿತಿ ಗತಿಗಳು ತೊಂದರೆಯಾಗಿರುವುದನ್ನು ಅರಿತಿರುವ ಸ್ವಲ್ಪವಾದರು ಅನುಕೂಲವಾಗಲೆಂಬ ಸದಾಶಯದ ಪೂಜ್ಯ ಶ್ರೀ ಜಗದ್ಗುರುಗಳವರು ಬೆಳೆದಿರುವ ಎಲ್ಲಾ ತರಕಾರಿಗಳನ್ನು ಸಿರಿಗೆರೆ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಸಾರ್ವಜನಿಕರ ಪ್ರತಿ ಮನೆ ಮನೆಗಳಿಗೆ ಶ್ರೀ ಬೃಹನ್ಮಠದ ವಾಹನದಲ್ಲಿಯೇ ಉಚಿತವಾಗಿ ವಿತರಿಸುವಂತೆ ಸೂಚಿಸದ್ದಾರೆ ಅದರಂತೆ ಶ್ರೀ ಬೃಹನ್ಮಠದ ವಿದ್ಯಾರ್ಥಿಗಳು ಕಳೆದ ವಾರದಿಂದಲೂ ವಿತರಿಸುತ್ತಿದ್ದಾರೆ.*
*ಇದು ದೇವಾನಾಂ ಪ್ರಿಯರ ಕಾಲವಲ್ಲ; ಮಾಧ್ಯಮಾನಾಂ ಪ್ರಿಯರ ಕಾಲ. ಸುದ್ದಿಗಾಗಿ ಸೇವೆ ಮಾಡುತ್ತಾ ತಮ್ಮ ಜವಾಬ್ದಾರಿ, ವರ್ಚಸ್ಸಿಗೆ ಮತ್ತು ವ್ಯಕ್ತಿತ್ವಕ್ಕೆ ವಿಚ್ಛೇದನಾ ಭಾಗ್ಯವನ್ನು ಕರುಣಿಸಿರುವ ಘನಂದಾರಿ ಅವಿವೇಕಿ ಗಣಂಗಳೇ ತುಂಬಿರುವ ಪ್ರಸ್ತುತ ದಿನಮಾನಗಳಲ್ಲಿ ಸದಾ ಲೋಕಮುಖಿ ಕೈಂಕರ್ಯಗಳಿಗೆ ತ್ರಿಕಾಲವೂ ಚಿಂತಿಸುವ ಜನರೊಳಿತಿಗಾಗಿ ಜನಿಸಿ ನಿಜ ಜಗದ್ಗುರು ಎನಿಸಿರುವ ತರಳಬಾಳು ಶ್ರೀ ಜಗದ್ಗುರುಗಳವರ ಸೇವಾಪರ್ವ ಆಧರಣೀಯವಾದುದು.*
[t4b-ticker]
+ There are no comments
Add yours