ಸಾರ್ವಜನಿಕರಿಗೆ ಉತ್ತಮ ರಸ್ತೆ ಜೊತೆಗೆ ಕುಡಿಯುವ ನೀರು , ಶಿಕ್ಷಣ ಸೇರಿ ಮೂಲ ಸೌಕರ್ಯಕ್ಕೆ ಹೆಚ್ಚಿನ ಒತ್ತು:ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ

 

 

 

 

ಚಿತ್ರದುರ್ಗ:ಜ:30:ಸಾರ್ವಜನಿಕರಿಗೆ ಉತ್ತಮ ರಸ್ತೆ ಜೊತೆಗೆ ಕುಡಿಯುವ ನೀರು , ಶಿಕ್ಷಣ ಸೇರಿ ಮೂಲ ಸೌಕರ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಹೇಳಿದರು.

ತಾಲೂಕಿನ ಐಯ್ಯನಹಳ್ಳಿ ಕುರುಬರಟ್ಟಿ , ಚನ್ನಯ್ಯನಹಟ್ಟಿ, ಆಯತೋಳ‌ ಗ್ರಾಮಗಳಲ್ಲಿ ಪಿಎಂಜಿಎಸ್ ವೈ ಯೋಜಯಡಿಯಲ್ಲಿ ಡಾಂಬರೀಕರಣ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು‌.

 

 

ಗ್ರಾಮೀಣ ಭಾಗದ ರಸ್ತೆಗಳಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಅಯ್ಯನಹಳ್ಳಿ ಕುರುಬರಹಟ್ಟಿ , ಚನ್ನಯ್ಯನಹಟ್ಟಿಯಲ್ಲಿ 1.25 ಕೋಟಿ ವೆಚ್ಚದಲ್ಲಿ 9 ರಿಂಸ 10 ಕಿಲೋ ಮೀಟರ್ ಡಾಂಬರೀಕರಣ ರಸ್ತೆ ಕಾಮಗಾರಿ ಮಾಡಲಾಗುತ್ತಿದೆ. ಐಯ್ಯನಹಳ್ಳಿ ಕುರುಬರಹಟ್ಟಿ ಗ್ರಾಮದಲ್ಲಿ ಚಿಕ್ಕ ಚಿಕ್ಕ ಒಂದೆರೆಡು‌ ಸಿ.ಸಿ. ರಸ್ತೆಗಳು ಮಾತ್ರ ಬಾಕಿ ಇದ್ದು ಮುಂದಿನ ದಿನದಲ್ಲಿ ಅನುದನಾ ನೋಡಿಕೊಡು ರಸ್ತೆ ಮಾಡಿಕೊಡುತ್ತೇನೆ ಎಂದರು.
ಈ ರಸ್ತೆಯು NH4 ನಿಂದ ಚನ್ನಯ್ಯನಹಟ್ಟಿ, ಐಯ್ಯನಹಳ್ಳಿ ಕುರುಬರಹಟ್ಟಿ, ಆಯತೋಳ, ಲಂಬಾಣಿಹಟ್ಟಿ ಸೇರಿ ಅನೇಕ ಹಳ್ಳಿಗಳಿಗೆ ಅನುಕೂಲವಾಗುತ್ತದೆ ಎಂದರು.

ಸಾರ್ವಜನಿಕರಿಗೆ ರಸ್ತೆಗಳು ಉತ್ತಮವಾಗಿದ್ದರೆ ಎಲ್ಲಾ ಸರಕು ಸಾಗಣಿಕೆ, ಶಾಲಾ ಮಕ್ಕಳಿಗೆ , ಕೃಷಿಕರಿಗೆ ಸಾಕಷ್ಟು ಅನುಕೂಲ ಮತ್ತು ಬೆಳೆದ ಬೆಳೆಗಳನ್ನು ಮಾರುಕಟ್ಟೆಗೆ ಸಾಗಿಸಲು ಸಹಕಾರಿಯಾಗುತ್ತದೆ. ಮುಂದಿನ ದಿನಗಳಲ್ಲಿ ಚಿಕ್ಕ ಪುಟ್ಟ ರಸ್ತೆಗಳು ಸೇರಿ ಉಳಿದ ಎಲ್ಲಾ ರಸ್ತೆಗಳನ್ನು ಮಾಡುತ್ತೇನೆ ಎಂದು ಹೇಳಿದರು.

ಗ್ರಾಮ ಪಂಚಾಯತಿ ಸದಸ್ಯರಾದ ಶಿವನಂದ, ರುದ್ರಮ್ಮ, ಶಂಕರಮ್ಮ, ಗೋವಿಂದನಾಯ್ಕ , ಕಾವ್ಯಬಾಯಿ, ಶಾರಾದಬಾಯಿ,
ಪಿಎಂಜಿಎಸ್ ವೈ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ನಾಗರಾಜ್, ಮುಖಂಡರಾದ ಬಸಣ್ಣ, ಮಾರುತಿ, ತಿಪ್ಪೇಶ್ ನಾಯ್ಕ, ಕುಮಾರನಾಯ್ಕ ಇದ್ದರು..

[t4b-ticker]

You May Also Like

More From Author

+ There are no comments

Add yours