ಸರ್ಕಾರಿ ನೌಕರರ ಸಂಘದ ಹೆಸರಲ್ಲಿ ಯಾರು ಸುದ್ದಿಗೋಷ್ಠಿ ಮಾಡುವ ಆಗಿಲ್ಲ: ಜಿಲ್ಲಾಧ್ಯಕ್ಷ ಕೆ.ಮಂಜುನಾಥ್

 

 

 

 

 

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಜಿಲ್ಲಾ ಶಾಖೆ ಚಿತ್ರದುರ್ಗ ಎಲ್ಲಾ ಇಲಾಖೆಗಳನ್ನು ಪ್ರತಿನಿಧಿಸುವ ಏಕೈಕ ಮಾತ್ರ ಸರ್ಕಾರಿ ನೌಕರರ ಸಂಘಟನೆಯಾಗಿದೆ. ಸಂಘಟನೆಯ ಅಧ್ಯಕ್ಷರನ್ನು ಹೊರತುಪಡಿಸಿ ಬೇರೆ ಯಾವುದೇ ಪದಾಧಿಕಾರಿಗಳು ಸುದ್ದಿಗೋಷ್ಠಿಯನ್ನು ನಡೆಸಲು ಸಂಘದ ಬೈಲಾ ಪ್ರಕಾರ ಅವಕಾಶವಿರುವುದಿಲ್ಲ.‌ ಸಂಘದ ಹೆಸರಿನಲ್ಲಿ ಯಾರಾದರೂ ಸಂಘದ ಸದಸ್ಯರು ಸುದ್ದಿಗೋಷ್ಠಿ ನಡೆಸಿದರೆ ಇದು ಸಂಘ ವಿರೋಧಿ ಚಟುವಟಿಕೆಯಾಗುತದೆ ಎಂದು ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಕೆ.ಮಂಜುನಾಥ್ ತಿಳಿಸಿದ್ದಾರೆ.

 

 

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಚಿತ್ರದುರ್ಗ ಜಿಲ್ಲಾ ಸಂಘಟನೆ, ಜಿಲ್ಲೆಯ ಎಲ್ಲಾ ಇಲಾಖೆಗಳ ಎ ಗ್ರೂಪಿನಿಂದ ಹಿಡಿದು ಗ್ರೂಪ್-ಡಿ ನೌಕರರ ಹಿತಕ್ಕಾಗಿ ಶ್ರಮಿಸುತ್ತಿದೆ. ನೌಕರರ ಶ್ರೇಯೋಭಿವೃದ್ಧಿಗೆ, ನೌಕರರ ಹಿತಾಸಕ್ತಿಗಾಗಿ ಸರ್ವ ಸದಸ್ಯರನ್ನು ಗಣನೆಗೆ ತೆಗೆದುಕೊಂಡು ಕಾರ್ಯನಿರ್ವಹಿಸುತ್ತಿದೆ. 2022 ನೇ ಸಾಲಿನ ಸರ್ಕಾರಿ ನೌಕರರ ಕ್ರೀಡಾಕೂಟ ಆಯೋಜನೆ ಮಾಡುವ ದಿನಾಂಕ ಈ ಹಿಂದೆಯೇ ನಿಗದಿಪಡಿಸಿ, ಜಿಲ್ಲೆಯ ಎಲ್ಲಾ ನೌಕರರಿಗೂ ವಿಷಯವನ್ನು ಪ್ರಚಾರ ಮಾಡಲಾಗಿದೆ. ಆದರೆ ಈ ದಿನಾಂಕದಂದೇ ಎಸ್.ಎಸ್.ಎಲ್.ಸಿ ಮೌಲ್ಯಮಾಪನ ಕರ್ತವ್ಯದ ದಿನಾಂಕವೂ ನಿಗದಿಯಾಗಿದೆ. ಈ ಹಿಂದೆಯೇ ಕ್ರೀಡಾಕೂಟದ ದಿನಾಂಕದ ಮಾಹಿತಿ ಎಲ್ಲಾ ಇಲಾಖೆಗಳ ನೌಕರರಿಗೂ ತಲುಪಿದ್ದು, ನೊಂದಣಿ ಕಾರ್ಯ ನಡೆದಿರುತ್ತದೆ. ಆದ್ದರಿಂದ ಯಾವುದೇ ಸ್ವಹಿತಾಸಕ್ತಿಯಿಂದಾಗಲಿ ಅಥವಾ ದುರುದ್ದೇಶದಿಂದಾಗಲಿ ಕ್ರೀಡಾಕೂಟದ ದಿನಾಂಕವನ್ನು ನಿಗದಿಪಡಿಸಿರುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದೇನೆ. ಈ ಎಲ್ಲಾ ವಿಷಯಗಳನ್ನು ಜಿಲ್ಲೆಯ ವಿವಿಧ ತಾಲೂಕುಗಳ ಸರ್ಕಾರಿ ನೌಕರ ಸಂಘ ಮತ್ತು ವೃಂದ ಸಂಘಗಳ ಅಧ್ಯಕ್ಷರು ಪದಾಧಿಕಾರಿಗಳ ಮತ್ತು ಸರ್ವ ಸದಸ್ಯರ ಗಮನಕ್ಕೆ ತಿಳಿಸುತ್ತಾ, ಜಿಲ್ಲೆಯ ಸಮಸ್ತ ಸರ್ಕಾರಿ ನೌಕರರು ಯಾವುದೇ ಗೊಂದಲವಿಲ್ಲದೆ ಕ್ರೀಡಾಕೂಟದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಯಾಗಿ ಪೂರೈಸಲು ಕೋರುತ್ತೇನೆ ಎಂದು ಹೇಳಿದ್ದಾರೆ.

 

[t4b-ticker]

You May Also Like

More From Author

+ There are no comments

Add yours