ಸಮಾಜ ಸುಧಾರಕರು ಹಿಂದುಳಿದವರ ಪರವಾಗಿ ಧ್ವನಿಯಾಗಿದ್ದರು: ಶಾಸಕ ಟಿ.ರಘುಮೂರ್ತಿ

 

 

 

 

ತಾ. ಕಚೇರಿಯಲ್ಲಿ ನಾರಾಯಣ ಗುರು ಜಯಂತಿ ಸರಳ ಆಚರಣೆ
ಚಳ್ಳಕೆರೆ : ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಸೋಮವಾರ ನಾರಾಯಗುರು ಅವರ ಜಯಂತಿಯನ್ನು ಶಾಸಕ ಟಿ.ರಘುಮೂರ್ತಿ, ತಹಶೀಲ್ದಾರ್ ಎನ್. ರಘುಮೂರ್ತಿ ಅವರು ನಾರಾಯಣ ಗುರು ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಸರಳವಾಗಿ ಆಚರಣೆ ಮಾಡಲಾಯಿತು.
ಶಾಸಕ ಟಿ.ರಘುಮೂರ್ತಿ ಮಾತನಾಡಿ ಸಮಾಜದ ಸುಧಾರಕರ ಜಯಂತಿಗಳು ಆಚರಣೆ ಮಾಡಿದರೆ, ಅವರ ಮೌಲ್ಯಗಳು, ಆದರ್ಶಗಳು ಉಳಿಯುತ್ತವೆ ಅಷ್ಟೇ ಅಲ್ಲದೆ ಮುಂದಿನ ಪೀಳಿಗೆ ಸಾಗಿ, ಯುವಕರು ಪಾಲನೆ ಮಾಡಲು ಸಾಧ್ಯ. ಸಮಾಜ ಸುಧಾರಕರು ಹಿಂದುಳಿದವರ ಪರವಾಗಿ ಧ್ವನಿಯಾಗಿ, ಅಂತಹವರನ್ನು ಸಮಾಜದ ಮುಖ್ಯ ವಾಹಿನಿಗೆ ತರಲು ಶ್ರಮಿಸಿದ್ದಾರೆ ಎಂದು ಹೇಳಿದರು.

 

 

ಮಹಾನ್ ದಾರ್ಶನಿಕರಾದ ನಾರಾಯಣ ಗುರು ಅವರು ಸಮಾಜದ ಸುಧಾರಣೆಗೆ ಶ್ರಮಿಸಿದಂತವರು, ಸಮಾಜದಲ್ಲಿ ಬಡವರು ಹಾಗೂ ಕೆಳವರ್ಗ ದವರಿಗೆ ಧ್ವನಿಯಾಗಿ, ತುಳಿತಕ್ಕೆ ಒಳಗಾದವರನ್ನು ಮೇಲೆತ್ತುವ ಮೂಲಕ ಸಮಾಜ ಸುಧಾರಕರಾಗಿ ಮಾಡಿದ್ದಾರೆ. ಇಂತಹ ಮಹಾನ್ ನಾಯಕರ ಜಯಂತಿಗಳು ಆಚರಣೆ ಮಾಡಿ, ಆವರ ಆದರ್ಶ ತತ್ವಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು..
ತಹಶೀಲ್ದಾರ್ ಎನ್. ರಘುಮೂರ್ತಿ ಮಾತನಾಡಿ ನಾರಾಯಣ್ ಗುರು ೧೮ ನೇ ಅಂತ್ಯ ಮತ್ತು ೧೯ ಶನತಮಾನದ ಆರಂಭದಲ್ಲಿ ಸಮಾಜ ಸುಧಾರಣೆಯಲ್ಲಿ ಸದ್ದು ಮಾಡಿದ ಮಾಹಾನ್ ದಾರ್ಶನಿಕರು, ಸಮಾಜ ಸುಧಾರಣೆಯಲ್ಲಿ ಯಾರು ಕಂಡರಯದಷ್ಟು ಬದಲಾವಣೆ ಮಾಡಿದ ಮಹಾನ್ ದಾರ್ಶನಿಕರಾದಂತಹ ನಾರಾಯಗುರು ಅವರ ಆದರ್ಶಗಳನ್ನು ಎಲ್ಲರು ಪಾಲನೆ ಮಾಡಬೇಕು ಎಂದರು.
ಈ. ವೇಳೆ ನಗರಸಭೆ ಅಧ್ಯಕ್ಷೆ ಸಿ.ಬಿ.ಜಯಲಕ್ಷ್ಮೀ, ಸಮಾಜದ ಮುಖಂಡರಾದ ರವಿ ಕುಮಾರ್, ಕೃಷ್ಣಮೂರ್ತಿ, ನಗರಸಭೆ ಸದಸ್ಯರಾದ ಮಲ್ಲಿಕಾರ್ಜುನ್ , ಪ್ರಕಾಶ್, ವಿರುಪಾಕ್ಷಪ್ಪ ಸೇರಿದಂತೆ ಮುಂತಾದವರು ಇದ್ದರು.

[t4b-ticker]

You May Also Like

More From Author

+ There are no comments

Add yours