ಶ್ರೀಕಣಿವೆ ಮಾರಮ್ಮ ದೇವಸ್ಥಾನ ಆವರಣದಲ್ಲಿ ಸ್ವಚ್ಛತಾ ಜಾಗೃತಿ ಮತ್ತು ಶ್ರಮದಾನ ಕಾರ್ಯಕ್ರಮ

 

 

 

 

ಶ್ರೀಕಣಿವೆ ಮಾರಮ್ಮ* *ದೇವಸ್ಥಾನ..ಕುಂಚಿಂಗನಹಾಳ್ ನಲ್ಲಿ ಸ್ವಚ್ಛತಾ* *ಜಾಗೃತಿ ಮತ್ತು ಶ್ರಮದಾನ ಮಾಡಿದ.ವಿವಿಧ ಸಂಘ* *ಸಂಸ್ಥೆಗಳು* ನೆಹರು ಯುವ ಕೇಂದ್ರ .ರಾಯಲ್ಸ್ ಸ್ಪೋರ್ಟ್ಸ್ ಅಕಾಡಮಿ.ಆರೋಗ್ಯವೇ ಭಾಗ್ಯ ಯುವಕರ ಸಂಘ..ಮಾರ್ಗ ನೇಚರ್ ಆಂಡ್ ಸೋಶಿಯಲ್ ಸರ್ವಿಸ್.ಇಂಗಳದಾಳ ಗ್ರಾಮ ಪಂಚಾಯಿತಿಯವರ ಸಂಯುಕ್ತಾಶ್ರಯದಲ್ಲಿ.ಆದಿದೇವತೆ ಶ್ರೀ ಕಣಿವೆ ಮಾರಮ್ಮ ದೇವಸ್ಥಾನ..ಕುಂಚಿಂಗನಹಾಳ್ ನಲ್ಲಿ ಸ್ವಚ್ಛತಾ ಜಾಗೃತಿ ಮತ್ತು ಶ್ರಮದಾನ . ಮಾಡಲಾಯಿತು…ಇದೇ ಸಂದರ್ಭದಲ್ಲಿ..ನಗರ/ಗ್ರಾಮೀಣ ಪ್ರದೇಶದಲ್ಲಿ ಹೆಚ್ಚು ಪ್ಲಾಸ್ಟಿಕ್ ಬಳಸುತ್ತಿರುವುದರಿಂದ ಪ್ರಕೃತಿ ಮತ್ತು ಮಾನವನ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ ..ದೇವಸ್ಥಾನದಲ್ಲಿ ಕೆಲವೊಂದು ಸಂಪ್ರದಾಯಗಳನ್ನು ಪರಿಪಾಲಿಸುವಾಗ ತಿಳಿದೋ ತಿಳಿಯದೆಯೇ ಪ್ರಕೃತಿ ನಾಶ ಮಾಡುತ್ತಿದ್ದೆವೆ.ಇದರ ಬಗ್ಗೆ ಜಾಗೃತಿ ಮೂಡಿಸಬೇಕೆಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಜಿಲ್ಲಾ ಶಾಖೆ ಹಾಗೂ ರಾಯಲ್ ಸ್ಪೋರ್ಟ್ಸ್ ಅಕಾಡೆಮಿಯ ಗೌರವ ಅಧ್ಯಕ್ಷರಾದ ಶ್ರೀ ಕೆ. ಮಂಜುನಾಥ್ ರವರು ಆಶಯ ವ್ಯಕ್ತಪಡಿಸಿದರು …ಪ್ರಕೃತಿಯ ನಾಶದಿಂದ ಮಾನವ ಸಂಪನ್ಮೂಲ ಅನೇಕ ರೋಗಗಳಿಗೆ ತುತ್ತಾಗುತ್ತಿದ್ದಾರೆ.ಸ್ವಚ್ಛ ಮೇವಜಯತೆ ಎಂಬ ತತ್ತ್ವದಡಿಯಲ್ಲಿ ಪ್ರತಿಯೊಬ್ಬರು ಶ್ರಮಾದಾನ ಮಾಡಬೇಕೆಂದು .ನೆಹರು ಯುವ ಕೇಂದ್ರದ ಅಧಿಕಾರಿ ಸುಹಾಸ್ ಅವರು ನುಡಿದರು..ರಾಯಲ್ ಸ್ಪೋರ್ಟ್ಸ್ ಅಕಾಡಮಿ ಅಧ್ಯಕ್ಷರಾದ ಶ್ರೀ ಎಚ್.ಎನ್. ಲೋಕೇಶ್.ನಮ್ಮ ಅಕಾಡಮಿಯು ಅನೇಕ ಸಮಾಜಮುಖಿ ಕೆಲಸ ಕಾರ್ಯಗಳನ್ನು ಮಾಡಿಕೊಂಡು ಬರುತ್ತಿದ್ದು…ಸಂತ ಶಿಶುನಾಳ ಶರೀಫರ ಸೋರುತಿಹುದು ಮನೆಯ ಮಾಳಿಗೆ ಅಜ್ಞಾನದಿಂದ ಎಂಬಂತೆ ಸೋರುತಿಹುದು ಜಗದ ಮಾಳಿಗೆ ಪ್ಲಾಸ್ಟಿಕ್ ನಿಂದ ..ಪ್ಲಾಸ್ಟಿಕ್ ಅನ್ನು ಉಪಯೋಗಿಸುವುದರಿಂದ ಜಲಚರ ಪ್ರಾಣಿಗಳು.ಪಶು- ಪಕ್ಷಿಗಳ ಸಂತತಿ ಕಡಿಮೆ ಆಗುತ್ತಿದೆ.ಮಾನವರಾದ ನಾವೆಲ್ಲರೂ ಪ್ರಕೃತಿಗೆ ಕೊಡಬೇಕಾದ ಉಡುಗೊರೆ ಏನೆಂದರೆ ಸಾಧ್ಯವಾದಷ್ಟು ಪ್ಲಾಸ್ಟಿಕ್ ಕಡಿಮೆ ಮಾಡಿ..ನಮ್ಮ ಸುತ್ತಮುತ್ತಲ ಮತ್ತು ಆವರಣವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಲು ಸಂದೇಶವನ್ನು ನೀಡಿದರು …ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀ ವೆಂಕಟೇಶ್.ಸದಸ್ಯರಾದ ನಾಗಭೂಷಣ್.ಕಾಂತ್ ರಾಜ್.ಲಕ್ಷ್ಮಿಕಾಂತ್ ಗ್ರಾಮದ ಹಿರಿಯ ಮುಖಂಡರುಗಳು..ಮದಕರಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸುಷ್ಮಾ . ರಾಷ್ಟ್ರಮಟ್ಟದ ಕ್ರೀಡಾಪಟು .ಡಿ ಜೆ ರಮೇಶ್ .ಆರೋಗ್ಯವೇ ಭಾಗ್ಯ ಯುವಕರ ಸಂಘದ ಅಧ್ಯಕ್ಷರಾದ ಶ್ರೀ ಪರಶುರಾಮ.ಮಾರ್ಗ ನೇಚರ್&ಸೋಶಿಯಲ್ ಸರ್ವಿಸ್ ನ ಅಧ್ಯಕ್ಷರಾದ ಶ್ರೀ ಪ್ರಶಾಂತ ಹಾಗೂ ಪದಾಧಿಕಾರಿಗಳು ಮತ್ತು ಭಕ್ತಾದಿಗಳು ಕೂಡ ಶ್ರಮದಾನ ಮಾಡಿದರು.

 

 

[t4b-ticker]

You May Also Like

More From Author

+ There are no comments

Add yours