ವರುಣನ ಅರ್ಭಟ ಜೋರಾಗಿದೆ ಯಾರು ಸಹ ಮರ, ವಿದ್ಯತ್ ಕಂಬಗಳ‌ ಬಳಿ ನಿಲ್ಲಬೇಡಿ: ತಹಶೀಲ್ದಾರ್ ಎನ್.ರಘುಮೂರ್ತಿ

 

 

 

 

ಸಿಡಿಲು ಬಡಿದು ಮನೆ ಸಂಪೂರ್ಣ ಹಾನಿ

 

 

ನಾಯಕನಹಟ್ಟಿ : ಹೋಬಳಿಯ ಮಲ್ಲೂರ ಹಳ್ಳಿ ಗ್ರಾಮದ ಜಮೀನಿನಲ್ಲಿ ನಿರ್ಮಿಸಿಕೊಂಡಿರುವ ಮನೆಗೆ ಗುರುವಾರ ಸಿಡಿಲು ಬಡಿದು ಸಂಪೂರ್ಣವಾಗಿ ಹಾನಿಯಾಗಿದೆ.
ಸಿಡಿಲಿನ ರಭಸಕ್ಕೆ ಮನೆಯ ಮೇಲ್ಚಾವಣಿ ಸಂಪೂರ್ಣವಾಗಿ ಮುಗುಚಿ ಬಿದ್ದಿದ್ದು ಈ ಮನೆಯು ಪರ್ವತಯ್ಯ ಎಂಬ ರೈತರಿಗೆ ಸೇರಿದ್ದಾಗಿದೆ. ಮನೆಯಲ್ಲಿ ನಾಗರಾಜ ಮಲ್ಲೇಶ ಮಲ್ಲಮ್ಮ ಎಂಬ ಒಂದೇ ಕುಟುಂಬದ ಮೂರು ಜನರಿದ್ದು,
ಸಣ್ಣಪುಟ್ಟ ಗಾಯಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಹಾಗೇ ತಳಕು ಹೋಬಳಿಯಲ್ಲಿ ಬುಧವಾರ ಸಂಜೆ ಸುರಿದ ಮಳೆ ಹಾಗೂ ಬಿರುಗಾಳಿಗೆ 8 ಮನೆಗಳಿಗೆ ಹಾನಿಯಾಗಿದೆ.
ಚಳ್ಳಕೆರೆ ತಾಲ್ಲೂಕಿನಲ್ಲಿ ಕಳೆದ ಎರಡು ದಿನಗಳಲ್ಲಿ ನಾಲ್ಕು ಹೋರಿಗಳು, 12ತೆಂಗಿನ ಮರಗಳು, 8ಮನೆಗಳು ಗೋಡೆಗಳು, ಶೀಟ್ ಗಳು, ಮೇಲ್ಛಾವಣಿಗಳು ಬಿದ್ದಿವೆ.
ಈ ಸಂಬಂಧ ಚಳ್ಳಕೆರೆ ತಹಶೀಲ್ದಾರ್ ಎನ್.ರಘುಮೂರ್ತಿ ಮಲ್ಲೂರಹಳ್ಳಿ ಗ್ರಾಮದ ಸರ್ವೇ ನಂ.106ರಲ್ಲಿ ಮನೆಕಟ್ಟಿಕೊಂಡು ಜೀವಿಸುತ್ತಿರುವ ಪರ್ವತಯ್ಯ ಎಂಬ ರೈತನ ಮನೆಗೆ ಭೇಟಿನೀಡಿ ಸಾಂತ್ವನ ಹೇಳಿದರು. ಹಾಗೇ ಮನೆ ಕಳೆದುಕೊಂಡವರಿಗೆ ಪರಿಹಾರಕ್ಕಾಗಿ ಜಿಲ್ಲಾಧಿಕಾರಿಗಳ ನಿರ್ದೇಶನದ ಮೇರೆಗೆ ಇಂದೇ ಪ್ರಾಥಮಿಕ ವರದಿಯನ್ನು ತಯಾರಿಸಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು.
ಹಾಗೇ ತಾಲೂಕು ಆಡಳಿತದ ಅಂದಾಜು ವರದಿಯ ಪ್ರಕಾರ ಚಳ್ಳಕೆರೆ ತಾಲ್ಲೂಕಿನ ತಳಕು ಹಾಗೂ ನಾಯಕನಹಟ್ಟಿ ಹೋಬಳಿಯಲ್ಲಿ ಅತಿಹೆಚ್ಚು ಸೀಟಿನ ಮನೆಗಳು ಹಳೆಯ ಮನೆಗಳು ದುರಸ್ಥಿಯಲ್ಲಿರುವ ಮನೆಗಳು ಇವೆ ಎಂದು ಕಂಡು ಬರುತ್ತಿದೆ. ಇನ್ನು ಮುಂದಿನ ದಿನಗಳಲ್ಲಿ ಮಳೆಗಾಲ ಆರಂಭವಾಗಲಿದೆ. ಹಾಗಾಗಿ ಆರಂಭದಲ್ಲಿ ಮಳೆಯ ಆರ್ಭಟ ಜೋರಾಗಿರುತ್ತದೆ ಹಾಗಾಗಿ ಸಾರ್ವಜನಿಕರು ಹಳೆಯ ಗೋಡೆಗಳ ಪಕ್ಕದಲ್ಲಿ ಮರಗಳ ಕೆಳಗಡೆ ವಿದ್ಯುತ್ ಪರಿವರ್ತಕಗಳ ಬಳಿ ಹಾಗೂ ವಿದ್ಯುತ್ ಕಂಬಗಳ ಬಳಿ ಮೊಬೈಲ್ ಗಳ ಟವರ್ ಬಳಿ ನಿಲ್ಲುವುದಾಗಿ ತಂಗುವುದು ಆಗಲಿ ಮಾಡಬಾರದು ಕಾರಣ ಎಲ್ಲಾ ತಾಣಗಳಲ್ಲಿ ಸಿಡಿಲಿನ ಆಕರ್ಷಣೆ ಹೆಚ್ಚಾಗಿರುತ್ತದೆ ಇದರಿಂದ ಪ್ರಾಣ ಹಾನಿ ಸಂಭವ ಹೆಚ್ಚಾಗಿರುತ್ತದೆ ಎಂದರು.

[t4b-ticker]

You May Also Like

More From Author

+ There are no comments

Add yours