ಲೈಸನ್ಸ್ ಇಲ್ಲದ ಕ್ವಾರೆ ಮತ್ತು ಕ್ರಷರ್ ಗಳಿಗೆ ಜಿಲ್ಲಾಡಳಿತ ಮೊದಲು ಬೀಗ ಜಡಿಯಬೇಕು: ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಕಿಡಿ.

 

 

 

 

ಚಿತ್ರದುರ್ಗ ಮಾ. ,7:  ತಾಲ್ಲೂಕಿನಾದ್ಯಂತ ಯಾವುದೇ ಲೈಸನ್ಸ್ ಇಲ್ಲದೆ ನಡೆಯುತ್ತಿರುವ  ಕ್ವಾರಿ ಮತ್ತು ಕ್ರಷರ್ ಗಳನ್ನು ಕೂಡಲೇ ಸ್ಥಗಿತಗೊಳ್ಳಿಸಲು ಕ್ರಮ ವಹಿಸಬೇಕು ಇಲ್ಲದಿದ್ದರೆ ಮುಂದೆ ಸಾರ್ವಜನಿಕರಿಗೆ ಆಗುವ ತೊಂದರೆಗಳಿಗೆ ಜಿಲ್ಲಾಧಿಕಾರಿ ಮತ್ತು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನೇರ ಹೊಣೆ ಎಂದು ಶಾಸಕ‌ ಜಿ.ಹೆಚ್.ತಿಪ್ಪಾರೆಡ್ಡಿ ಕಿಡಿಕಾರಿದರು.

ತಾಲೂಕಿನ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಶಾಸಕರು ತಾಲೂಕಿನಲ್ಲಿ ಕ್ವಾರೆ ಮತ್ತು ಕ್ರಷರ್ ಗಳಲ್ಲಿ ಕೆಲಸ ಮಾಡುತ್ತಿರುವವರಿಗೆ ಸೂಕ್ತ ರಕ್ಷಣೆ ಒದಗಿಸಬೇಕು. ಕಾನೂನು ಪರಿಪಾಲನೆ ಮಾಡಬೇಕು. ಕೆಲಸ ಮಾಡುವ ಕಾರ್ಮಿಕರ ಜೀವಕ್ಕೆ ಯಾವುದೇ ಹಾನಿಯಾಗದಂತೆ ಕ್ರಷರ್ ಮತ್ತು ಕ್ವಾರೆ ಮಾಲೀಕರು  ಎಚ್ಚವಹಿಸಬೇಕಿದೆ.

 

 

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕ್ವಾರಿ ಮತ್ತು ಕ್ರಷರ್  ಕಲ್ಲು  ಸಿಡಿಸುವಾಗ ಯಾವುದೇ ರೀತಿಯ ಮುಂಜಾಗ್ರತೆಯನ್ನು ತೆಗೆದುಕೊಳ್ಳದೆ ಆನಾಹುತ ಸಂಭವಿಸಿದೆ. ಚಿತ್ರದುರ್ಗ ತಾಲ್ಲೂಕಿನಲ್ಲಿಯೂ ಸಹಾ ಹಲವಾರು ಕ್ವಾರಿ ಮತ್ತು ಕ್ಲಷರ್ ಗಳಿದ್ದು ಅಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ರಕ್ಷಣೆಯನ್ನು ಒದಗಿಸಬೇಕಿದೆ ಇದಕ್ಕೆ ಜಿಲ್ಲಾಡಳಿತ ಮತ್ತು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಇದರ ಬಗ್ಗೆ ಗಮನ ನೀಡುವುದರ ಮೂಲಕ ಪರಿಶೀಲನೆಯನ್ನು ಮಾಡಬೇಕಿದೆ. ಯಾರದೂ ತಪ್ಪಿಗೆ ಮತ್ತೆ ಯಾರೋ ಅಮಾಯಕರು  ಸಾವನ್ನಪ್ಪಿತ್ತಿದ್ದಾರೆ. ಈ ರೀತಿ ಆಗಬಾರದು ಸುರಕ್ಷತಾ ಕ್ರಮವನ್ನು ತೆಗೆದುಕೊಂಡು ಕೆಲಸವನ್ನು ಮಾಡುವಂತೆ ತಿಳಿ ಹೇಳಿದ್ದಾರೆ.

ಚಿತ್ರದುರ್ಗದಲ್ಲಿ ಕೆಲವು ಕ್ವಾರಿಗಳು ಪರವಾನಿಗೆಯನ್ನು ಪಡೆದು ಕೆಲಸ ಮಾಡುತ್ತಿದ್ದರೆ ಮತ್ತೆ ಕೆಲವು ಪರವಾನಿಗೆ ಇಲ್ಲದೆ ಕೆಲಸವನ್ನು ಮಾಡುತ್ತಿದೆ ಇದರ ಬಗ್ಗೆ  ಸಹ ಸಂಬಂಧಿಸಿದ ಅಧಿಕಾರಿಗಳು ಮತ್ತು ಜಿಲ್ಲಾಡಳಿತ ಗಮನ ನೀಡಬೇಕಿದೆ. ಇಂತಹ ಕ್ವಾರಿ ಮತ್ತು ಕ್ಲಷರ್‌ಗಳನ್ನು ಮಟ್ಟ ಹಾಕಬೇಕಿದೆ. ನಗರದ ಹೂರ ವಲಯದ ಸೀಬಾರ ಸುತ್ತಾ-ಮುತ್ತಲ್ಲಿನ ಪ್ರದೇಶದಲ್ಲಿನ ಗುಡ್ಡಗಳನ್ನು ಬ್ಲಾಸ್ಟ್ ಮಾಡುವುದರಿಂದ  ರಾತ್ರಿಯ ಸಮಯದಲ್ಲಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವ ದೂರುಗಳು ನನಗೆ ಬಂದಿವೆ. ಕ್ವಾರೆ  ಸುತ್ತಾ-ಮುತ್ತಲ್ಲಿನ ಪ್ರದೇಶದಲ್ಲಿನ ಮನೆಗಳು ಬಿರುಕು ಬಿಟ್ಟಿದೆ. ಇದರ ಬಗ್ಗೆ ಜನತೆಯೂ ಸಹ ದೂರಿದ್ದಾರೆ. ಇದರಿಂದ ಇದರ ಬಗ್ಗೆಯೂ ಸಹ ಕ್ರಮವನ್ನು ತೆಗೆದುಕೊಳ್ಳುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದರು.

 ರಾಜ್ಯದ   ಚಿಕ್ಕಬಳ್ಳಾಪುರ, ಶಿವಮೊಗ್ಗ, ಚಾಮರಾಜನಗರ ಜಿಲ್ಲೆಗಳಲ್ಲಿ ಕ್ವಾರೆ ಮತ್ತು ಕ್ರಷರ್ ಗಳಿಂದ ಸಾಕಷ್ಟು    ನಿರಾಪರಾಧಿಗಳ ಪ್ರಾಣ ಹೋಗಿವೆ. ಎಲ್ಲಾ  ಅಭಿವೃದ್ಧಿ ಕೆಲಸಗಳಿಗೆ ಮರಳು, ಜಲ್ಲಿ ಮಣ್ಣು ಸಹ ಬೇಕಾಗಿದೆ. ಆದರೆ
ಅಗತ್ಯತೆಗೋಸ್ಕರ  ಪ್ರಾಣ ತೆಗೆಯುವ ಅವಶ್ಯಕತೆ ಇಲ್ಲ… ಕ್ವಾರೆ ಮತ್ತು ಕ್ರಷರ್ ಬೇರೆ ಇದೆ.   ಜಿ.ಆರ್.ಹಳ್ಳಿ ಸರ್ವೇ ನಂಬರ್ ಹಾಯ್ ತೋಳ ಗ್ರಾಮದ ಬಳಿ 8-10 ಕ್ವಾರೆ ಬ್ಲಾಸ್ಟ್ ಮಾಡುತ್ತಿದ್ದಾರೆ. ಗಾರೆಹಟ್ಟಿ, ಮಾಳಪ್ಪನಹಟ್ಟಿ , ಮಠದಕುರುಬರಹಟ್ಟಿ ಸೇರಿ ಹಲವು ಹಳ್ಳಿಯವರು ಪ್ರಾಣ ಬಿಗಿಯಿಟ್ಟಕೊಂಡು ಬದುಕುತ್ತಿದ್ದಾರೆ. ಲೈಸನ್ಸ್ ಪಡೆಯದೇ ಕ್ವಾರೆ ಸಿಡಿಸುತ್ತಿರುವುದು ಶೋಚನೀಯವಾಗಿದೆ‌. ಯಾರೇ ಪ್ರಭಾವಿಗಳು ಕಲ್ಲು ಗಣಿಗಾರಿಕೆ ಮಾಡಿದರು ಸಹ ಕಾನೂನಿನ ಮುಂದೆ ಯಾರು ದೊಡ್ಡವರಲ್ಲ. ಇದರಲ್ಲಿ ಸಾರ್ವಜನಿಕರು ಹೇಳುವಂತೆ ವೀರಪ್ಪ ಎಂಬ ಹೆಸರಿನ ಕ್ವಾರೆಯವರು ಸುಮಾರು 50-60 ಅಡಿಗಳಷ್ಟು ಒಳಗೆ ಗುಂಡಿಗಳನ್ನು ತೆಗೆದು ಜಲ್ಲಿ ಒಡೆದಿದ್ದಾರೆ. ಗ್ರಾಮ ಪಂಚಾಯಿತಿಯಿಂದ ಲೈಸನ್ಸ್ ಪಡೆದಿಲ್ಲ ಎಂದು ಪಿಡಿಓ ಹೇಳಿದರು ದಬ್ಬಾಳಿಕೆಯ ಮೂಲಕ ಕ್ವಾರೆ ನಡೆಸುತ್ತಿರುವುದು ತುಂಬಾ ಆತಂಕದ ವಿಚಾರವಾಗಿದೆ. ಮುಂದೆ ತಾಲೂಕಿನಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಕ್ರಮವನ್ನು ಅಧಿಕಾರಿಗಳು ಮತ್ತು ಜಿಲ್ಲಾಡಳಿತ ವಹಿಸಬೇಕಾಗಿದೆ. ವ್ಯವಹಾರ ಎಲ್ಲಾರೂ ಮಾಡಲಿ ಕಾನೂನಿಗೆ ದ್ರೋಹ ಮಾಡಿ ಮಾಡದೇ ಎಲ್ಲಾ ಸರ್ಕಾರದ ನಿಯಮ ಬದ್ದವಾದ ಪರವಾನಿಗಿ ಪಡೆದು ಮಾಡಲಿ ಎಂದು ಕ್ವಾರೆ ಮಾಲೀಕರ ವಿರುದ್ದ ಕಿಡಿಕಾರಿದರು.ಮುಂದೆ ಇದರಿಂದ ಜೀವ ಹಾನಿಗಳು ಸಂಭವಿಸಿದರೆ ನೇರವಾಗಿ ಜಿಲ್ಲಾಡಳಿತ ಹೊಣೆ ಎಂದು ವಾಗ್ದಾಳಿ ನಡೆಸಿದರು.
[t4b-ticker]

You May Also Like

More From Author

+ There are no comments

Add yours