ಮೋದಿ ಅವರ ಕನಸಿನಂತೆ ಪ್ರತಿ ಹಳ್ಳಿಗಳಲ್ಲಿ ಸ್ವಚ್ಚತೆ ಕಾಪಾಡುವ ಕಡೆ ಎಲ್ಲಾರೂ ಒಟ್ಟಿಗೆ ಹೆಜ್ಜೆ ಹಾಕೋಣ: ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ.

 

 

 

 

ಚಿತ್ರದುರ್ಗ: ಪ್ರಧಾನಿ ನರೇದ್ರ ಮೋದಿ ಅವರ ಕನಸಿನಂತೆ ಪ್ರತಿ ಹಳ್ಳಿಗಳಲ್ಲಿ ಸ್ವಚ್ಚತೆ ಕಾಪಾಡುವ ಕಡೆ ಎಲ್ಲಾರೂ ಒಟ್ಟಿಗೆ ಹೆಜ್ಜೆ ಹಾಕೋಣ ಎಂದು ಶಾಸಕ‌ ಜಿ.ಹೆಚ್.ತಿಪ್ಪಾರೆಡ್ಡಿ ಕರೆ ನೀಡಿದರು.

ತಾಲೂಕಿನ ದೊಡ್ಡಸಿದ್ದವ್ವನಹಳ್ಳಿ ಗ್ರಾಮ ಪಂಚಾಯತಿ ಆವರಣದಲ್ಲಿ ಜಿಲ್ಲಾ ಪಂಚಾಯತ ಮತ್ತು ಗ್ರಾಮ ಪಂಚಾಯತಿ ಅನುದಾನದಲ್ಲಿ ಹಮ್ಮಿಕೊಂಡಿದ್ದ ” ಸ್ವಚ್ಚ ವಾಹಿನಿ ವಾಹನ “ಕ್ಕೆ ಚಾಲನೆ ಮತ್ತು ಹಸಿಕಸ, ಒಣಕಸ ಬುಟ್ಟಿ ವಿತರಿಸಿ ಮಾತನಾಡಿದರು.

ಜಿಲ್ಲಾ ಪಂಚಾಯತಿಯ 3.43.700 ಲಕ್ಷ ಮತ್ತು ಗ್ರಾಮ ಪಂಚಾಯತಿಯ 1.56.300 ಲಕ್ಷ ಸೇರಿ 5 ಲಕ್ಷ ಅನುದಾನದಲ್ಲಿ ಗ್ರಾಮೀಣ ಭಾಗದ ಕಸ ವಿಲೇವಾರಿ ಮಾಡುವುದಕ್ಕಾಗಿ ಸ್ವಚ್ಚ ವಾಹಿನಿ ವಾಹನವನ್ನು ಸರ್ಕಾರದಿಂದ ನೀಡಿದ್ದೇವೆ. ದೊಡ್ಡಸಿದ್ದವ್ವನಹಳ್ಳಿ, ಕ್ಯಾದಿಗೆರೆ, ದಂಡಿನಕುರುಬರಹಟ್ಟಿ ಗ್ರಾಮಗಳಲ್ಲಿನ 2300 ಕುಟುಂಬಗಳಿಗೆ ಗ್ರಾಮ ಪಂಚಾಯತಿ ಅನುದಾನದಲ್ಲಿ ಹಸಿಕಸ ಒಣಕಸ ಬುಟ್ಟಿಗಳನ್ನು ನೀಡಿದ್ದು ಸಾರ್ವಜನಿಕರು ಕಸ ಬೇರ್ಪಡಿಸಿ ನಂತರ ಕಸದ ವಾಹನದಲ್ಲಿ ಹಾಕಬೇಕು ಎಂದು ಮನವಿ ಮಾಡಿದರು.

ನಮ್ಮ ದೇಶದ ಪ್ರಧಾನಿ ಮೋದಿ ಅವರು ಭಾರತ ದೇಶವನ್ನು ಸ್ವಚ್ಚ ಭಾರತ ಅಭಿಯಾನ ಮೂಲಕ ದೇಶದ ಸ್ವಚ್ಚತೆಗೆ ದಿಟ್ಟ ನಿರ್ಧಾರ ಕೈಗೊಂಡರು. ಮಹಾತ್ಮ ಗಾಂಧೀಜಿ ಅವರ ಆಶಯವೂ ಸಹ ಇದಾಗಿತ್ತು. ಮಹಾತ್ಮ ಗಾಂಧಿ ಅವರ ಕನಸನ್ನು ಮೋದಿ ಅವರು ಸಾಕಾರಗೊಳಿಸಿದ್ದಾರೆ.

 

 

ಗ್ರಾಮೀಣ ಭಾಗದ ಜನರು ಸ್ವಚ್ಚತೆ ಕಾಪಡಿಕೊಂಡರೆ ಅನೇಕ ರೋಗಗಳನ್ನು ತಡೆಗಟ್ಟಬಹುದಾಗಿದೆ. ಗ್ರಾಮ ಪಂಚಾಯತಿ ಸಿಬ್ಬಂದಿಗಳು ಪ್ರತಿ ಮನೆಗೆ ಭೇಟಿ ನೀಡಿ ಹಸಿಕಸ ಮತ್ತು ಒಣಕಸದ ಬಗ್ಗೆ ಅರಿವು ಮೂಡಿಸಬೇಕು. ಜನರು ಗ್ರಾಮ ಪಂಚಾಯತಿಯ ಕಾನೂನನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.

ಮಕ್ಕಳಲ್ಲಿ ಸ್ವಚ್ಚತೆ ಕುರಿತು ಜಾಗೃತಿ ಮೂಡಿಸಬೇಕು. ಸಾರ್ವಜನಿಕರು ಸ್ವಚ್ಚತೆಯನ್ನು ಮೈಗೂಡಿಸಿಕೊಂಡು ತಮ್ಮ ಮನೆ ಪರಿಸರವನ್ನು ಮತ್ತು ಸುತ್ತಮುತ್ತಲಿನ ಪರಿಸರ ಮನೆಯಂತೆ ಸ್ವಚ್ಚವಾಗಿಟ್ಟುಕೊಳ್ಳಿ ಎಂದರು.

ಲೈಸನ್ಸ್ ಇರುವ ಡ್ರೈವರ್ ನೇಮಕ ಮಾಡಿಕೊಳ್ಳಬೇಕು. ದೊಡ್ಡಸಿದ್ದವ್ವನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಏಳು ಹಳ್ಳಿಗಳಿಗೆ ವಾಹನವನ್ನು ಕಳಿಸಬೇಕು. ಪ್ರತಿ ಹಳ್ಳಿಗೆ ನಿರ್ದಿಷ್ಟ ಸಮಯವನ್ನು ನಿಗದಿ ಮಾಡಿ ವಾಹನವನ್ನು ಕಳಿಸಬೇಕು ಎಂದು ತಿಳಿಸಿದರು.

ಎಲ್ಲಾರೂ ಸಹ ಶೌಚಾಲಯ ಕಡ್ಡಾಯವಾಗಿ ಬಳಸಬೇಕು. ಸರ್ಕಾರ ಸಹಾಯಧನ ನೀಡುತ್ತಿದ್ದು ಪಡೆದುಕೊಂಡು ಶೌಚಾಲಯ ನಿರ್ಮಿಸಿಕೊಳ್ಳಬೇಕು. ಅಧಿಕಾರಿಗಳು ಸಹ ಗ್ರಾಮೀಣ ಭಾಗದ ಜನರಲ್ಲಿ ಶೌಚಾಲಯದ ಬಗ್ಗೆ ಅರಿವು ಮೂಡಿಸಬೇಕು ಎಂದು ಸೂಚಿಸಿದರು.

ಗ್ರಾಮ ಪಂಚಾಯತಿ ಅಧ್ಯಕ್ಷೆ ಭಾರತಿ, ಉಪಾಧ್ಯಕ್ಷರಾದ ಆಶಾ ನಿಂಗಪ್ಪ ಗ್ರಾಮ ಪಂಚಾಯತಿ ಸದಸ್ಯರಾದ ವಿದ್ಯಾವತಿ, ವನಿತಾ,ಸುಧಾ, ವನೀತಾ, ಗಂಗಮ್ಮ,ಆಶಾ, ಮಂಜುನಾಥ್, ಕೇಶವ್, ರಾಧಕೃಷ್ಣರೆಡ್ಡಿ, ತಿಮ್ಮಾರೆಡ್ಡಿ, ರಾಜಶೇಖರ್,‌ಕಲ್ಲಣ್ಣ ,ರಾಕೇಶ್ ಮತ್ತು ಪಿಡಿಓ ಶಿಲ್ಪಾ , ಮುಖಂಡರಾದ ಲಕ್ಷ್ಮಣ, ತಿಪ್ಪಾರೆಡ್ಡಿ, ರಾಮರೆಡ್ಡಿ ಇದ್ದರು.

[t4b-ticker]

You May Also Like

More From Author

+ There are no comments

Add yours