ಚಿತ್ರದುರ್ಗ (ಕರ್ನಾಟಕ ವಾರ್ತೆ) ಏ.29 : ರಾಜ್ಯ ಬಾಲಭವನ ಸೊಸೈಟಿ ಹಾಗೂ ತಾಲ್ಲೂಕು ಬಾಲಭವನ ಸಮಿತಿ, ಚಳ್ಳಕೆರೆ ಇವರ ಸಂಯುಕ್ತಾಶ್ರಯದಲ್ಲಿ ತಾಲ್ಲೂಕು ಮಟ್ಟದಲ್ಲಿ 2022-23ನೇ ಸಾಲಿನ ಮಕ್ಕಳ ಬೇಸಿಗೆ ಶಿಬಿರವನ್ನು ಮೇ 4 ರಿಂದ 13ರವರೆಗೆ ಹಮ್ಮಿಕೊಳ್ಳಲಾಗಿದೆ.
ಶಿಬಿರದಲ್ಲಿ 05ರಿಂದ 16 ವರ್ಷದ ಮಕ್ಕಳಿಗಾಗಿ ಸಂಗೀತ, ನೃತ್ಯ, ಚಿತ್ರಕಲೆ, ಕರಕುಶಲತೆ, ಹಾಗೂ ಸ್ಥಳೀಯ ಚಟುವಟಿಕೆಗಳ ವಿಷಯಕ್ಕೆ ಸಂಬಂಧಿಸಿದಂತೆ ಶಿಬಿರ ನಡೆಯಲಿದೆ. ಆಸಕ್ತ ಪೋಷಕರು ಮೇ 3ರ ಸಂಜೆ 5ಗಂಟೆಯೊಳಗೆ ಮೊ:9844423605ಗೆ ಕರೆ ಮಾಡಿ ನೊಂದಾಯಿಸಿಕೊಳ್ಳಬಹುದು ಎಂದು ಚಳ್ಳಕೆರೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ತಿಳಿಸಿದ್ದಾರೆ.
ಮೇ 6ರಿಂದ ಮಕ್ಕಳ ಬೇಸಿಗೆ ಶಿಬಿರ
ಚಿತ್ರದುರ್ಗ (ಕರ್ನಾಟಕ ವಾರ್ತೆ) ಏ.29 : ಬಾಲಭವನ ಸೊಸೈಟಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ತಾಲೂಕು ಬಾಲ ಸಮಿತಿಯಿಂದ ತಾಲೂಕು ಮಟ್ಟದಲ್ಲಿ 2022-23ನೇ ಸಾಲಿನ ಮಕ್ಕಳ ಬೇಸಿಗೆ ಶಿಬಿರವನ್ನು ಮೇ 6 ರಿಂದ 13ರವರೆಗೆ ಹಮ್ಮಿಕೊಳ್ಳಲಾಗಿದೆ. ಶಿಬಿರದಲ್ಲಿ 05ರಿಂದ 16 ವರ್ಷದ ಮಕ್ಕಳಿಗಾಗಿ ಸಂಗೀತ, ನೃತ್ಯ, ಚಿತ್ರಕಲೆ, ಕರಕುಶಲತೆ, ಕಸದಿಂದ ರಸ, ಜೇಡಿ ಮಣ್ಣಿನ ಕಲೆ, ಕರ ಕುಶಲತೆ, ಕ್ಯಾಲಿಗ್ರಫಿ, ಹೂ ತಯಾರಿಕೆ ಮುಂತಾದ ವಿಷಯಗಳಿಗೆ ಸಂಬಂಧಿಸಿದಂತೆ ಶಿಬಿರ ನಡೆಯಲಿದೆ. ಆಸಕ್ತ ಪೋಷಕರು ಮೇ 2ರಂದು ಅರ್ಜಿ ಸಲ್ಲಿಸಬಹುದು . ಹೆಚ್ಚಿ ಮಾಹಿತಿಗಾಗಿ ಶಿಶು ಅಭಿವೃದ್ಧಿ ಯೋಜನಾ ಕಚೇರಿ, ಹೊಸದುರ್ಗ ದೂ: 08199-200018ಗೆ ಸಂಪರ್ಕಿಸಬೇಕೆಂದು ಹೊಸದುರ್ಗ ಶಿಶು ಅಭಿವೃದ್ಧಿ ಯೋಜನಾಧಿಕಾರಿ ತಿಳಿಸಿದ್ದಾರೆ.
[t4b-ticker]
+ There are no comments
Add yours