ಮೂರು ವರ್ಷದಿಂದ ಪ್ರಧಾನಮಂತ್ರಿ ಅವಾಜ್ ಯೋಜನೆಯ ಹಣ ಬಿಡುಗಡೆಗೊಳಿಸುವಂತೆ ಶಾಸಕ ಟಿ.ರಘುಮೂರ್ತಿ ಅವರಿಗೆ ಮನವಿ

 

 

 

 

ಚಳ್ಳಕೆರೆ-19 ನಗರದ ಕಳೆದ ಮೂರು ವರ್ಷದಿಂದ ಪ್ರಧಾನಮಂತ್ರಿ ಅವಾಜ್ ಯೋಜನೆಯ ಹಣ ಬಿಡುಗಡೆಯಾಗದೆ ಫಲಾನುಭವಿಗಳು ಸಂಕಷ್ಟಕ್ಕೆದಲ್ಲಿ ಬದುಕುವ ಸ್ಥಿತಿ ನಿರ್ಮಾಣವಾಗಿದೆ. ಅವರಿಗೆ ಕೂಡಲೆ ಹಣ ಬಿಡುಗಡೆಗೊಳಿಸಬೇಕೆಂದು ಭಗತ್ ಸಿಂಗ್ ಹಿತರಕ್ಷಣಾ ಮತ್ತು ಸಮಗ್ರಾಭಿವೃದ್ಧಿ ಸಂಘ ಶಾಸಕರಿಗೆ ಮನವಿ‌ ಸಲ್ಲಿಸಿದರು.
ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ್ ಮಾತನಾಡಿ, ಹಣ ಬಿಡುಗಡೆಗೆ ಸರ್ಕಾರದಮೇಲೆ ಒತ್ತಡ ಹೇರ ಹಣ ಕೊಡಿಸಬೇಕು. ಮನೆಗಳು ಅರ್ಥಕ್ಕೆ‌ ನಿಂತು ಜನರು ಬೀದಿಯಲ್ಲಿ ಇರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಮಂಜೂರಾದ ಮನೆಗಳಿಗೆ ಹಣ ನೀಡುವ ಕುರಿತು ಇಲ್ಲಿನ ನಗರಸಭೆಯಲ್ಲಿ ವಿಚಾರಿಸಿದಾಗ ತಾಂತ್ರಿಕ ತೊಂದರೆಯಿಂದ ತಡವಾಗಿದೆ. ನಿಮ್ಮ ಯೋಜನೆಗೆ ಆಧಾರ್ ಜೋಡಣೆಯಾಗಿಲ್ಲವೆಂದು ಮೂರು ವರ್ಷಗಳಿಂದ ಸಬೂಬು ಹೇಳುತ್ತಿದ್ದಾರೆ. ಫಲಾನುಭವಿಗಳು ಅರ್ಥಂಬರ್ಥ ಮನೆಗಳನ್ನು ನಿರ್ಮಿಸಿ ಸಾಲಗಾರರಾಗಿ ಮನೆಯೂ ನಿರ್ಮಿಸದೆ ಪರಿತಪಿಸುತ್ತಿದ್ದು, ಈ ಬಗ್ಗೆ ಶಾಸಕರು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ತಿಳಿಸಿದ್ದಾರೆ.

 

 

ಉಪಾಧ್ಯಕ್ಷ ನಾಗೇಂದ್ರನಾಯಕ, ಶಾರು, ಖಜಾಂಚಿ ಚಂದ್ರಪ್ಪ, ಕಾನೂನು ಸಲಹೆಗಾರ ಬೋರಣ್ಣ, ಪ್ರಧಾನ ಕಾರ್ಯದರ್ಶಿ ಧನಂಜಯ, ಪುಟ್ಟ, ಸಂಘಟನಾ ಕಾರ್ಯದರ್ಶಿ ಮಂಜುನಾಥ, ಕುಮಾರ, ರಾಖಿ, ಜಗದೀಶ್, ಚಂದ್ರು, ರಘು, ನವೀನ್, ಅಜಯ್, ನಾಗರಾಜು, ಮಂಜು ಮುಂತಾದವರು ಉಪಸ್ಥಿತರಿದ್ದರು.

[t4b-ticker]

You May Also Like

More From Author

+ There are no comments

Add yours