ಮಾಸ್ಕ್ ಮರೆತ ವಿದ್ಯಾರ್ಥಿಗಳಿಗೆ ಮಾಸ್ಕ್ ಹಾಕಿಸಿ ಪ್ರಾಂಶುಪಾಲರ ಚಳಿ ಬಿಡಿಸಿದ ತಹಶೀಲ್ದರ್ ಎನ್.ರಘುಮೂರ್ತಿ

 

 

 

 

ಚಳ್ಳಕೆರೆ :ಮಾಸ್ಕ್ ಮರೆತ ವಿದ್ಯಾರ್ಥಿಗಳಿಗೆ ಮಾಸ್ಕ್ ಹಾಕಿಸಿ  ಪ್ರಾಂಶುಪಾಲರಿಗೆ ಚಳ್ಳಕೆರೆ ತಹಶೀಲ್ದರ್ ಎನ್.ರಘುಮೂರ್ತಿ  ತರಾಟೆಗೆ ತೆಗೆದುಕೊಂಡರು.

 

 

ಶಾಲಾ ಕಾಲೇಜು ಆರಂಭಗೊಂಡಿದ್ದು ಮೂರನೇ ಕೋವಿಡ್ ಅಲೆಯ ಮುನ್ಸೂಚನೆಯಲ್ಲಿ ಜನರು ಆತಂಕದಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ   ಕಾಲೇಜು ವಿದ್ಯಾರ್ಥಿಗಳು   ಸಾಮಾಜಿಕ ಅಂತರ ಕಾಪಾಡಿಕೊಳ್ಳದ ಚಳ್ಳಕೆರೆ ತಾಲೂಕಿನ ಹೆಚ್ ಪಿಪಿಸಿ ಪ್ರಥಮ ದರ್ಜೆ ಕಾಲೇಜು, ಸರಕಾರಿ ಪದವಿ ಪೂರ್ವ ಕಾಲೇಜು ಹಾಗೂ ಬಾಪುಜಿ ಕಾಲೇಜ್ ಗಳಿಗೆ ಯಾವುದೇ ಮಾಹಿತಿ ಇಲ್ಲದೆ ದಿಢೀರ್ ಬೇಟಿ ನೀಡಿ ಪರಿಶೀಲನೆ ನಡೆಸಿದಾಗ  ಹಲವು ವಿದ್ಯಾರ್ಥಿಗಳು ಮಾಸ್ಕ್ ಹಾಕದೆ ತರಗತಿಯಲ್ಲಿ ಹಾಗೂ ಆವರಣದಲ್ಲಿ ಇರುವುದು ಕಂಡು ಬಂದಿದ್ದು  ಸ್ಥಳದಲ್ಲಿ ಮಾಸ್ಕ್ ಹಾಕದ ವಿದ್ಯಾರ್ಥಿಗಳಿಗೆ ಮಾಸ್ಕ್ ನೀಡಿ ಅರಿವು ಮೂಡಿಸಿದ್ದಾರೆ. ಪ್ರಾಂಶುಪಾಲರಿಗೆ ಮತ್ತು   ಉಪನ್ಯಾಸಕರಿಗೆ ತರಾಟೆಗೆ ತೆಗೆದುಕೊಂಡು ಎಲ್ಲಾ ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿ ಕೋವಿಡ್ ನಿಯಮ ಪಾಲಿಸುವಂತೆ ತಿಳಿಸಬೇಕು. ಕಾಲೇಜು ಒಳಗಡೆ ಪ್ರವೇಶಿಸುವ ಬಾಗಿಲಿನಲ್ಲಿ ಗಾರ್ಡ್ ನೇಮಿಸಿ   ಮಾಸ್ಕ್ ಹಾಕದ   ವಿದ್ಯಾರ್ಥಿಗಳಿಗೆ ಪ್ರವೇಶ ನಿರಾಕರಿಸುವ ಮುಖಾಂತರ ಎಲ್ಲಾರೂ ಆರೋಗ್ಯ ಕಾಪಡಿಕೊಳ್ಳಬೇಕು ಎಂದು ಚಾಟಿ ಬೀಸಿದರಲ್ಲದೆ ಇದರಿಂದ ಈ ಮೇಲ್ಕಂಡ ಕಾಲೇಜ್ ಪ್ರಾಂಶುಪಾಲರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿ , ಕಾರಣ ಕೇಳಿದೆ , ಇಪ್ಪತ್ತು ನಾಲ್ಕು ಗಂಟೆಯೊಳಗೆ ಕಾರಣ ಕೊಡದೆ ಇದ್ದರೆ ಸಂಬಂಧಿಸಿದ ಮೇಲಾಧಿಕಾರಿಗಳಿಗೆ ಶಿಸ್ತು ಕ್ರಮ ಜರುಗಿಸುವಂತೆ ನೋಟಿಸ್ ಜಾರಿ ಮಾಡಲಾಗುವುದು ಎಂದು ಕಾನೂನಿನ ಚಾಟಿ ಬಿಸಿ ಕೋವಿಡ್ ರೂಲ್ಸ್ ಬ್ರೇಕ್ ಮಾಡಿದರೆ ಏನ್ ಆಗುತ್ತೆ ಎಂಬ ಭ್ರಮೆಯಲ್ಲಿದ್ದವರಿಗೆ ಶಾಕ್ ನೀಡಿದ್ದಾರೆ.

[t4b-ticker]

You May Also Like

More From Author

+ There are no comments

Add yours